ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ.
ಮೆಲ್ಬೋರ್ನ್ (ಡಿ.30): 2024 ರ ಟಿ 20 ವಿಶ್ವಕಪ್ ಗೆದ್ದ ನಂತರ ಟಿ 20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತಿಯಾಗುವ ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ನಂತರ ಈ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬಿಜಿಟಿಯ ಅಂತಿಮ ಪಂದ್ಯ ಸಿಡ್ನಿಯಲ್ಲಿ ನಡೆಯಲಿದ್ದು, ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡೋ ಬಗ್ಗೆ ಮನಸ್ಸು ಮಾಡಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮ ಅವರ ಸ್ಥಾನದ ಬಗ್ಗೆ ಬಿಸಿಸಿಐನಲ್ಲಿ ಉನ್ನತ ಅಧಿಕಾರಿಗಳು ಹಾಗೂ ಆಯ್ಕೆಗಾರರ ನಡುವೆಯೇ ಗೊಂದಲವಿದೆ ಎನ್ನಲಾಗಿದೆ.
ಹಾಗೇನಾದರೂ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಅರ್ಹತೆ ಪಡೆದಲ್ಲಿ, ಬಿಸಿಸಿಐ ಹಾಗೂ ಆಯ್ಕೆ ಮಂಡಳಿಗೆ ಫೈನಲ್ ಪಂದ್ಯ ಆಡಲು ಅವಕಾಶ ನೀಡುವಂತೆ ಮನವೊಲಿಸಲಿದ್ದಾರೆ. ಹಾಗೇನಾದರೂ ಸಿಡ್ನಿ ಟೆಸ್ಟ್ ಗೆಲ್ಲಲು ವಿಫಲರಾದಲ್ಲಿ, ಟೆಸ್ಟ್ ಕ್ರಿಕೆಟ್‌ಗೆ ಅವರು ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿದೆ.
ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಭಾರತದ 184 ರನ್‌ಗಳ ದೊಡ್ಡ ಅಂತರದಲ್ಲಿ ಸೋಲು ಕಂಡ ಬೆನ್ನಲ್ಲಿಯೇ ಈ ವರದಿಗಳು ಬರುತ್ತಿವೆ. ಇದರೊಂದಿಗೆ ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತ ಆಡಿದ 6 ಟೆಸ್ಟ್‌ಗಳಲ್ಲಿ 5ನೇ ಸೋಲು ಇದಾಗಿದ್ದು, ಒಂದು ಪಂದ್ಯ ಡ್ರಾ ಕಂಡಿದೆ. ಇದೇ ಕಾರಣಕ್ಕಾಗಿ ಅವರು ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಇತ್ತೀಚೆಗೆ, ದೇಶದ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ತಂಡ ನ್ಯೂಜಿಲೆಂಡ್ ಎದುರು ತವರಿನಲ್ಲಿ ವೈಟ್‌ವಾಶ್ ಅವಮಾನಕ್ಕೆ ಒಳಗಾಗಿತ್ತು. ಬಿಜಿಟಿ ಟ್ರೋಫಿಯಲ್ಲಿ ಬ್ರಿಸ್ಬೇನ್ ಮ್ಯಾಚ್‌ನಲ್ಲಿ ಇನ್ನೇನು ಸೋಲು ಕಾಣುವ ಹಂತದಲ್ಲಿ ಮಳೆ ಬಂದು ಡ್ರಾ ಮಾಡಿಕೊರ್ಳಳುವಲ್ಲಿ ಅಹಕಾರಿಯಾಗಿತ್ತು. ಹಾಲಿ ಸರಣಿಯಲ್ಲಿ ಬುಮ್ರಾ ನಾಯಕತ್ವದಲ್ಲಿ ಭಾರತ ತಂಡ ಪರ್ತ್‌ನಲ್ಲಿ ಗೆಲುವು ಕಂಡಿತ್ತು.
ಮೆಲ್ಬೋರ್ನ್ ಪಂದ್ಯದ ಸೋಲು, ನಾಯಕನಾಗಿ ರೋಹಿತ್ ಶರ್ಮ ಎದುರಿಸಿದ ದೊಡ್ಡ ಅಂತರದ ಸೋಲಾಗಿದೆ. ಪಿಚ್ ಫ್ಲ್ಯಾಟ್ ಆಗಿದ್ದರೂ, ಚೇಸ್ ಮಾಡುವಂಥ ಟಾರ್ಗೆಟ್‌ಗೆ ಆಸೀಸ್ ತಂಡವನ್ನು ಕಡಿವಾಣ ಹಾಗಿದ್ದರೂ, ಭಾರತ ಸೋಲು ಕಂಡಿತ್ತು. ಮೂರು ಆಲ್ರೌಂಡರ್‌ಗಳನ್ನು ಹೊಂದಿದ್ದ ದೀರ್ಘ ಬ್ಯಾಟಿಂಗ್ ಲೈನ್‌ಅಪ್‌ಅನ್ನು ಭಾರತ ತಂಡದ ಹೊಂದಿದ್ದರೂ, ಗೆಲುವಿಗೆ 340 ರನ್ ಚೇಸ್ ಮಾಡುವ ಹಂತದಲ್ಲಿ ಭಾರತ ಮುಗ್ಗರಿಸಿತ್ತು.
ಬಾಕ್ಸಿಂಗ್ ಡೇ ಟೆಸ್ಟ್ ಸೋಲಿನ ಬೆನ್ನಲ್ಲೇ ಮಹತ್ವದ ಅಪ್‌ಡೇಟ್ ಕೊಟ್ಟ ರೋಹಿತ್ ಶರ್ಮಾ! ಟೀಂ ಇಂಡಿಯಾ ಪ್ಲಾನ್ ಏನು?
ರೋಹಿತ್ ಶರ್ಮ ಪಾಲಿಗೆ ಈ ಸೀರೀಸ್ ಸವಾಲಿನದ್ದಾಗಿದ್ದು ಸೋಮವಾರದ ಬ್ಯಾಟಿಂಗ್ ವೇಳೆ 40 ಎಸೆತಗಳಿಂದ ಕೇವಲ 9 ರನ್ ಬಾರಿಸಿದ್ದಾರೆ. ಈವರೆಗೂ ಆಡಿರುವ ಮೂರು ಪಂದ್ಯಗಳಿಂದ 10ಕ್ಕೀಂತ ಅಧಿಕ ರನ್ ಬಾರಿಸಲು ಅವರು ವಿಫಲರಾಗಿದ್ದಾರೆ. ಇನ್ನು ಸಿರೀಸ್‌ನಲ್ಲಿ ಅಡಿದ ಐದು ಇನ್ನಿಂಗ್ಸ್‌ನಿಂದ ಕೇವಲ 31 ರನ್ ಬಾರಿಸಿದ್ದಾರೆ. ಜಸ್‌ಪ್ರೀತ್ ಬುಮ್ರಾ ಸರಣಿಯಲ್ಲಿ ಉರುಳಿಸಿದ ವಿಕೆಟ್‌ಗಿಂತ ಒಂದು ರನ್ ಅನ್ನು ರೋಹಿತ್‌ಶರ್ಮ ಹೆಚ್ಚಾಗಿ ಬಾರಿಸಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಸೋಲುತ್ತಿದ್ದಂತೆಯೇ ತಲೆಕೆಳಗಾದ WTC ಫೈನಲ್ ಲೆಕ್ಕಾಚಾರ! ಟೀಂ ಇಂಡಿಯಾಗಿದೆ ಲಾಸ್ಟ್ ಛಾನ್ಸ್?