ವೇಗಿ ರೇಣುಕಾ ಠಾಕೂರ್ ಅವರ 18 ರನ್‌ಗೆ 4 ವಿಕೆಟ್ ಸಾಹಸದ ನಡುವೆಯೂ, ಆಶ್ಲೀಗ್ ಗಾರ್ಡ್ನರ್ ಅವರ ಅಜೇಯ 52 ರನ್‌ಗಳ ಬೆನ್ನೇರಿದ ಆಸ್‌ಟ್ರೇಲಿಯಾ ತಂಡ ಕಾಮನ್ವೆಲ್ತ್ ಗೇಮ್ಸ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿದೆ.
ಬರ್ಮಿಂಗ್‌ಹ್ಯಾಂ (ಜುಲೈ 29): ವೇಗದ ಬೌಲರ್ ರೇಣುಕಾ ಠಾಕೂರ್ 18 ರನ್‌ಗಳಿಗೆ 4 ವಿಕೆಟ್ ಉರುಳಿಸಿ ಗಮನಸೆಳೆದರೂ, ಭಾರತ ತಂಡ ಕಾಮನ್ವೆಲ್ತ್ ಗೇಮ್ಸ್‌ನ ಮಹಿಳೆಯ ಟಿ20ಯ ಗುಂಪು-ಎ ಹಂತದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್‌ಗಳ ಸೋಲು ಕಂಡಿದೆ. ಎಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಶ್ಲೀಗ್ ಗಾರ್ಡ್ನರ್ ಅವರ ಅಜೇಯ 52 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕಿ ಹರ್ಮಾನ್‌ಪ್ರೀತ್ ಕೌರ್, 34 ಎಸೆತಗಳಲ್ಲಿ ಬಾರಿಸಿದ 52 ರನ್ ಹಾಗೂ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮ ಬಾರಿಸಿದ 33 ಎಸೆತಗಳ 48 ರನ್‌ಗಳ ನೆರವಿನಿಂದ ಭಾರತ ತಂಡ 8 ವಿಕೆಟ್‌ಗೆ 154 ರನ್ ಬಾರಿಸಿತ್ತು. ಬಳಿಕ ಬೌಲಿಂಗ್‌ನಲ್ಲಿ ಗಮನಸೆಳೆದ ರೇಣುಕಾ, ಆಸೀಸ್‌ನ ಅಗ್ರ ನಾಲ್ಕು ವಿಕಟ್‌ಗಳನ್ನು ಉರುಳಿಸಿ ಮಿಂಚಿದ್ದರು. ಇನ್ನೊಂದೆಡೆ ದೀಪ್ತಿ ಶರ್ಮ 26 ರನ್‌ಗಳಿಗೆ 2 ವಿಕೆಟ್ ಉರುಳಿಸಿದ್ದರಿಂದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 49 ರನ್‌ಗೆ 5 ವಿಕೆಟ್ ಕಳೆದುಕೊಂಡು, ಕೊನೇ 10 ಓವರ್‌ಗಳಲ್ಲಿ 89 ರನ್ ಬಾರಿಸುವ ಅನಿವಾರ್ಯತೆಗೆ ಸಿಲುಕಿತ್ತು. ಆದರೆ ಆಶ್ಲೀಗ್ ಗಾರ್ಡ್ನರ್, ಗ್ರೇಸ್ ಹ್ಯಾರಿಸ್ (20 ಎಸೆತಗಳಲ್ಲಿ 37 ರನ್) ಜೊತೆ 51 ರನ್ ಮತ್ತು ಅಲನಾ ಕಿಂಗ್ (18*) ಜೊತೆ 47 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದರು. ಗಾರ್ಡ್ನರ್ 35 ಎಸೆತಗಳಲ್ಲಿ ಅಜೇಯ 52 ರನ್ ಬಾರಿಸಿದರು. ಇದರಲ್ಲಿ 9 ಬೌಂಡರಿಗಳು ಸೇರಿದ್ದವು.
ಆಸೀಸ್‌ಗೆ ಆಘಾತ ನೀಡಿದ್ದ ಭಾರತ: ರೇಣುಕಾ ಠಾಕೂರ್ ಹಾಗೂ ದೀಪ್ತಿ ಶರ್ಮ ಹೊರತಾಗಿ ಉಳಿದೆಲ್ಲಾ ಬೌಲರ್‌ಗಳು ಆಸೀಸ್ ಬ್ಯಾಟರ್‌ಗಳಿ ಧಾರಾಳವಾಗಿ ರನ್ ಬಿಟ್ಟುಕೊಟ್ಟರು. ಇನ್ನಿಂಗ್ಸ್‌ನ ಎರಡನೇ ಬಾಲ್‌ನಿಂದ ರೇಣುಕಾ ಅವರ ಆರ್ಭಟ ಪ್ರಾರಂಭವಾಯಿತು, ಅಲಿಸ್ಸಾ ಹೀಲಿಯ ವಿಕೆಟ್ ಉರುಳಿಸಿದ ರೇಣುಕಾ ಮರು ಓವರ್‌ನಲ್ಲಿಯೇ ಅನುಭವಿ ಮೆಗ್ ಲ್ಯಾನಿಂಗ್ ಅವರ ವಿಕೆಟ್ ಉರುಳಿಸಿ ಮಿಂಚಿದರು. ಇದಾದ ನಾಲ್ಕು ಎಸೆತಗಳ ನಂತರ, ಬೆಥ್ ಮೂನಿ ಚೆಂಡನ್ನು ಪಾಯಿಂಟ್‌ನತ್ತ ತಳ್ಳುವ ಯತ್ನದಲ್ಲಿ ಎಡವಿ ಬೌಲ್ಡ್ ಆದರು. ಇದರ ನಡುವೆ ತಾಹಿಲಾ ಮೆಕ್‌ಗ್ರಾಥ್, ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್‌ಗೆ ಮೂರು ಬೌಂಡರಿಗಳನ್ನು ಸಿಡಿದರು.
That's that from our first game at
Australia win by 3 wickets. will look to bounce back in the next game.
Scorecard - https://t.co/cuQZ7NHmpB pic.twitter.com/p1sn3xS6kj
ಆದರೆ, ರೇಣುಕಾ, ಆಕರ್ಷಕ ಇನ್‌ಸ್ವಿಂಗರ್ ಎಸೆತ ಹಾಕುವ ಮೂಲಕ ಈ ವಿಕೆಟ್ ಉರುಳಿಸಿದರು. ಇದರಿಂದಾಗಿ 4.1 ಓವರ್‌ಗಳಲ್ಲಿ ಆಸೀಸ್ 34 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಹೇಯ್ನಸ್ ಕೂಡ ಔಟಾಗಿದ್ದರಿಂದ ಆಸೀಸ್ 49 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. ಪ್ರಮುಖ ಬ್ಯಾಟರ್‌ಗಳು ಔಟಾದರೂ, ಗ್ರೇಸ್ ಇಡೀ ಭಾರತ ತಂಡದ ಯೋಜನೆಯನ್ನು ಉಲ್ಟಾ ಮಾಡಿದರು.
Commonwealth Games: ಶಫಾಲಿ, ಹರ್ಮನ್ ಅಬ್ಬರ, ಆಸೀಸ್‌ಗೆ ಸವಾಲಿನ ಗುರಿ ನೀಡಿದ ಭಾರತ
ಗ್ರೇಸ್ ಹ್ಯಾರಿಸ್ ಅದ್ಭುತ ಬ್ಯಾಟಿಂಗ್: ಮಾರ್ಚ್ 2016 ರಿಂದ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಬ್ಯಾಟಿಂಗ್ ಮಾಡಿದ ಗ್ರೇಸ್, ದೀಪ್ತಿ, ರಾಜೇಶ್ವರಿ ಮತ್ತು ರಾಧಾ ಯಾದವ್ ಅವರ ಸ್ಪಿನ್ ವಿರುದ್ಧ ಐದು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಆರನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೇಘನಾ ಸಿಂಗ್ ಅವರಿಗೆ ಎರಡು ಬೌಂಡರಿಗಳನ್ನು ಚಚ್ಚಿದ ಆಶ್ಲೀಗ್ ಗಾರ್ಡ್ನರ್ ಅವರಿಂದ ಉತ್ತಮ ಬೆಂಬಲ ಪಡೆದರು.
ಆಫ್ಘಾನ್ ಲೀಗ್ ಪಂದ್ಯದ ನಡುವೆ ಆತ್ಮಾಹುತಿ ಬಾಂಬ್ ದಾಳಿ, ಕ್ರಿಕೆಟಿಗರು ಬಂಕರ್‌ಗೆ ಶಿಫ್ಟ್!
5ನೇ ಟಿ20 ಅರ್ಧಶತಕ ಬಾರಿಸಿದ ಆಶ್ಲೀಗ್: ತಂಡದ ಮೊತ್ತ 100ರ ಗಡಿ ದಾಟಿದ ಬೆನ್ನಲ್ಲಿಯೇ ದೊಡ್ಡ ಹೊಡೆತಕ್ಕೆ ಯತ್ನಿಸಿದ ಗ್ರೇಸ್ ಹ್ಯಾರಿಸ್, ಮೇಘನಾ ಸಿಂಗ್ ಎಸೆತದಲ್ಲಿ ಹರ್ಮಾನ್‌ಪ್ರೀತ್ ಕೌರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬಂದ ಜೆಸ್ ಜೊಹಾನ್ಸೆನ್ ಅವರನ್ನು ದೀಪ್ತಿ ಶರ್ಮ ಔಟ್ ಮಾಡಿದಾಗ ಭಾರತ ಗೆಲುವಿನ ನಿರೀಕ್ಷೆಯಲ್ಲಿತ್ತು. ಕೊನೇ ಐದು ಓವರ್‌ಗಳಲ್ಲಿ ಭಾರತದ ನೀರಸ ದಾಳಿಯ ಲಾಭ ಪಡೆದುಕೊಂಡ ಆಶ್ಲೀಗ್, ಮೇಘನಾ ಸಿಂಗ್ ಹಾಗೂ ರಾಧಾ ಅವರ ಎಸೆತಗಳಲ್ಲಿ ಸರಳವಾಗಿ ಬೌಂಡರಿ ಬಾರಿಸಿದರು. ಇದರಿಂದಾಗಿ ಸರಳವಾಗಿ 5ನೇ ಟಿ20 ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಅಲನಾ ಕಿಂಗ್ ತಂಡದ ಗೆಲುವಿನ ರನ್ ಬಾರಿಸಿದರು.