IPL ಟೂರ್ನಿ ಪ್ರಸಾರ ಹಕ್ಕು ಖರೀದಿಗೆ ಮುಂದಾದ ರಿಲಯನ್ಸ್; 30,000 ಕೋಟಿ ರೂ ಅಧಿಕ ಮೊತ್ತಕ್ಕೆ ಬಿಡ್ ಸಾಧ್ಯತೆ!

Published : Aug 09, 2021, 06:45 PM ISTUpdated : Aug 09, 2021, 07:20 PM IST
IPL ಟೂರ್ನಿ ಪ್ರಸಾರ ಹಕ್ಕು ಖರೀದಿಗೆ ಮುಂದಾದ ರಿಲಯನ್ಸ್; 30,000 ಕೋಟಿ ರೂ ಅಧಿಕ ಮೊತ್ತಕ್ಕೆ ಬಿಡ್ ಸಾಧ್ಯತೆ!

ಸಾರಾಂಶ

ಐಪಿಎಲ್ ಟೂರ್ನಿ ಪ್ರಸಾರ ಹಕ್ಕು ಪಡೆಯಲು ರಿಲಯನ್ಸ್ ನಿರ್ಧಾರ ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ ಐಪಿಎಲ್ ಪ್ರಸಾರ ಹಕ್ಕು ಬಿಡ್ಡಿಂಗ್ 5 ವರ್ಷಗಳ ಒಪ್ಪಂದಕ್ಕೆ ಸಾವಿರ ಸಾವಿರ ಕೋಟಿ ರೂಪಾಯಿ ಬಿಡ್ಡಿಂಗ್

ಮುಂಬೈ(ಆ.09): ಐಪಿಎಲ್ 2021ರ ಟೂರ್ನಿ 2ನೇ ಭಾಗ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಕೊರೋನಾ ಕಾರಣ ಭಾರತದಲ್ಲಿ ಸ್ಥಗಿತಗೊಂಡ ಪಂದ್ಯಗಳು ದುಬೈನಲ್ಲಿ ಮುಂದುವರಿಯಲಿದೆ. ಇದಕ್ಕಾಗಿ ಎಲ್ಲಾ ತಯಾರಿ ಮುಗಿದೆ. ಇದರ ನಡುವೆ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಮುಂದಿನ 5 ವರ್ಷದ ಐಪಿಎಲ್ ಪ್ರಸಾರ ಹಕ್ಕು ಪಡೆಯಲು ರಿಲಯನ್ಸ್ ಮುಂದಾಗಿದೆ.

IPL 2021 ಸೆಕೆಂಡ್ ಇನ್ನಿಂಗ್ಸ್ ವೇಳಾಪಟ್ಟಿ ಪ್ರಕಟ; ಸೆ.19ರಿಂದ ಆರಂಭ, ಅ.15ಕ್ಕೆ ಫೈನಲ್!

2018 ರಿಂದ 2022ರ ವರೆಗಿನ ಐಪಿಎಲ್ ಪ್ರಸಾರ ಹಕ್ಕನ್ನು ಸ್ಟಾರ್ಟ್ ಸ್ಪೋರ್ಸ್ಟ್ ಖರೀದಿಸಿದೆ. ಸ್ಟಾರ್ ಹಕ್ಕು ಮುಂದಿನ ವರ್ಷಕ್ಕೆ ಅಂತ್ಯವಾಗಲಿದೆ. ಹೀಗಾಗಿ ಈ ವರ್ಷದ ಅಂತ್ಯದಲ್ಲಿ ಐಪಿಎಲ್ ಟೂರ್ನಿ ಪ್ರಸಾರ ಹಕ್ಕು ಬಿಡ್ಡಿಂಗ್ ನಡೆಯಲಿದೆ. ಯಾರೂ ಊಹಿಸದ ಮೊತ್ತಕ್ಕ ಐಪಿಎಲ್ ಪ್ರಸಾರ ಹಕ್ಕು ಮಾರಾಟವಾಗುದು ಖಚಿತವಾಗಿದೆ. ಕಾರಣ ಈ ಬಾರಿ ರಿಲಯನ್ಸ್ ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದೆ ಎಂದು ಮೂಲಗಳು ಹೇಳಿದೆ.

ರಿಲಯನ್ಸ್ ಜಿಯೋ ಹಾಗೂ ವಯಾಕಾಂ 18,  ನೆಟ್‌ವರ್ಕ್ 18 ಗ್ರೂಪ್ ಮೂಲಕ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡಲು ರಿಯಲನ್ಸ್ ಸ್ಪೋರ್ಟ್ಸ್ ನಿರ್ಧರಿಸಿದೆ. ನೆಟ್‍‌ವರ್ಕ್ 18 ಗ್ರೂಪ್ ಎಲ್ಲಾ ರಾಜ್ಯದಲ್ಲಿ ಸ್ಥಳೀಯ ಭಾಷೆಗಳ ವಾಹಿನಿ ಹೊಂದಿದೆ. ಹೀಗಾಗಿ ಹಲವು ಭಾಷೆಗಳಲ್ಲಿ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡಲು ರಿಲಯನ್ಸ್ ಮುಂದಾಗಿದೆ. 

ಐಪಿಎಲ್‌ಗೆ ಮತ್ತೆರಡು ತಂಡ ಸೇರ್ಪಡೆ; ನಾಲ್ವರು ಆಟಗಾರರ ರೀಟೈನ್‌ಗೆ ಅವಕಾಶ..!

ಕಳೆದ ಬಾರಿಯ ಐಪಿಎಎಲ್ ಪ್ರಸಾರ ಹಕ್ಕು ಬಿಡ್ಡಿಂಗ್‌ನಲ್ಲಿ ರಿಲಯನ್ಸ್ ಪಾಲ್ಗೊಂಡಿತ್ತು. ಆದರೆ ರಿಲಯನ್ಸ್ ಚಿತ್ತ ಡಿಜಿಟಲ್ ರೈಟ್ಸ್ ಮೇಲಿತ್ತು. ಈ ಬಾರಿ ಡಿಜಿಟಲ್ ರೈಟ್ಸ್ ಜೊತೆಗೆ ಬ್ರಾಡ್‌ಕಾಸ್ಟಿಂಗ್ ಖರೀದಿಗೆ ರಿಲಯನ್ಸ್ ತಯಾರಿ ನಡೆಸಿದೆ. ಈ ಮೂಲಕ ಸದ್ಯ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್, ಪ್ರತಿಸ್ಪರ್ಧಿಗಳಾದ ಸೋನಿ ಪಿಕ್ಟರ್ಸ್, ಅಮೆಜಾನ್ ಸೇರಿದಂತೆ ಇತರ ಸ್ಪರ್ಧಿಗಳಿಗೆ ಶಾಕ್ ನೀಡಲು ರಿಲಯನ್ಸ್ ರೆಡಿಯಾಗಿದೆ.

30 ಸಾವಿರ ಕೋಟಿಗೂ ಅಧಿಕ ಮೊತ್ತಕ್ಕೆ ಬಿಡ್ ಸಾಧ್ಯತೆ:
ಐಪಿಎಲ್ ಟೂರ್ನಿ ಪ್ರಸಾರ ಹಕ್ಕು ಅಚ್ಚರಿ ಮೊತ್ತಕ್ಕೆ ಬಿಡ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾರಣ 2008ರಲ್ಲಿ ಆರಂಭಗೊಂಡ ಐಪಿಎಲ್ ಟೂರ್ನಿ ಪ್ರಸಾರದ ಹಕ್ಕನ್ನು 10 ವರ್ಷಗಳ ಕಾಲ ಸೋನಿ ಪಿಕ್ಟರ್ಸ್ ಖರೀದಿಸಿತ್ತು. ಇದರ ಮೊತ್ತ 8,200 ಕೋಟಿ ರೂಪಾಯಿ. 10 ವರ್ಷದಲ್ಲಿ ಐಪಿಎಎಲ್ ಬ್ರ್ಯಾಂಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಬ್ರ್ಯಾಂಡ್ ವಾಲ್ಯೂ ಹೆಚ್ಚಾಗಿತ್ತು. 

ಐಪಿಎಲ್ 2020‌ ಕೇವಲ 10 ಸೆಕೆಂಡ್‌ ಜಾಹೀರಾತಿಗೆ 10 ಲಕ್ಷ ರುಪಾಯಿ..!

10 ವರ್ಷದ ಒಪ್ಪಂದದ ಬಳಿಕ ಐಪಿಎಲ್ ಪ್ರಸಾರ ಹಕ್ಕು ಬಿಡ್ಡಿಂಗ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್ ಸೋನಿ ಸೇರಿದಂತೆ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿತ್ತು. ಕಾರಣ 5 ವರ್ಷಗಳ ಪ್ರಸಾರ ಹಕ್ಕು ಒಪ್ಪಂದಕ್ಕೆ ಸ್ಟಾರ್ ಸ್ಪೋರ್ಟ್ಸ್ 16,347.5 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. 10 ವರ್ಷಕ್ಕೆ ಸೋನಿ ನೀಡಿದ ಹಣ 8,200 ಕೋಟಿ ರೂಪಾಯಿ, 2018ರಿಂದ 2022ರ 5 ವರ್ಷಗಳ ಅವದಿಗೆ ಸ್ಟಾರ್ ಸ್ಪೋರ್ಟ್ಸ್ ನೀಡಿರುವುದು 16,347.5 ಕೋಟಿ ರೂಪಾಯಿ. ಹೀಗಾಗಿ ಈ ಬಾರಿಯ ಬಿಡ್ಡಿಂಗ್‌ನಲ್ಲಿ 30 ಸಾವಿರ ಕೋಟಿಗೂ ಅಧಿಕ ಮೊತ್ತಕ್ಕೆ  ಐಪಿಎಲ್ ಪ್ರಸಾರ ಹಕ್ಕು ಬಿಡ್ಡಿಂಗ್ ಆಗುವ ಸಾಧ್ಯತೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

3,075 ಕೋಟಿ ರೂಪಾಯಿಗೆ ಡಿಜಿಟಲ್ ಬಿಡ್ ಮಾಡಿತ್ತು ಜಿಯೋ!
2017ರ ಅಂತ್ಯದಲ್ಲಿ ನಡೆದ ಐಪಿಎಲ್ ಪ್ರಸಾರ ಹಕ್ಕು ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದ ರಿಲಯನ್ಸ್ ಡಿಜಿಟಲ್ ರೈಟ್ಸ್ ಪಡೆಯಲು 3,075 ಕೋಟಿ ರೂಪಾಯಿ ವರೆಗೂ ಬಿಡ್ ಮಾಡಿತ್ತು. ಆದರೆ ಸ್ಟಾರ್ ಸ್ಪೋಟ್ಸ್ ಡಿಜಿಟಲ್ ಪ್ಲಾಟ್‌ಫಾರ್ಮ್ ಹಾಟ್‌ಸ್ಟಾರ್ ದುಬಾರಿ ಮೊತ್ತಕ್ಕೆ ಖರೀದಿಸಿ ಗೆಲವಿನ ನಗೆ ಬೀರಿತ್ತು. ಆದರೆ ಈ ಬಾರಿ ರಿಲಯನ್ಸ್ ಬ್ರಾಡ್‌ಕಾಸ್ಟಿಂಗ್ ಜೊತೆಗೆ ಡಿಜಿಟಲ್ ರೈಟ್ಸ್ ಪಡೆಯಲು ಸಜ್ಜಾಗಿದೆ.

IPL ಕ್ರಿಕೆಟ್: ಸತತ 4 ಬಾರಿ ನಿರೂಪಣೆ ಸಂದರ್ಶನದಲ್ಲಿ ಫೇಲ್ ಆಗಿದ್ದ ಮಯಾಂತಿ!

ಐಪಿಎಲ್ ಪ್ರಸಾರ ಹಕ್ಕುು ಬಿಡ್ಡಿಂಗ್‌‌ಗೆ  ದಿಗ್ಗಜರ ಆಸಕ್ತಿ
ಐಪಿಎಲ್ ಪ್ರಸಾರ ಹಕ್ಕು ಪಡೆಯಲು ಹಲವು ದಿಗ್ಗಜ ಕಂಪನಿಗಳು ಆಸಕ್ತಿ ತೋರಿದೆ.  ಈ ವರ್ಷ ಅಂತ್ಯದಲ್ಲಿ ನಡೆಯಲಿರುವ ಬಿಡ್ಡಿಂಗ್‌ನಲ್ಲಿ ಸ್ಟಾರ್ ಸ್ಪೋರ್ಟ್ ಮತ್ತೆ ಬಿಡ್ಡಿಂಗ್ ಮಾಡಲಿದೆ. ಇದರ ಜೊತೆಗೆ ರಿಲಯನ್ಸ್ ಕೂಡ ಮುಂದಾಗಿದೆ. ಇನ್ನು ಸೋನಿ ಪಿಕ್ಟರ್ಸ್, ಡಿಸ್ಕವರಿ, ಫೇಸ್‌ಬುಕ್, ಅಮೆಜಾನ್, ಟ್ವಿಟರ್, ಯಾಹೂ, ಬ್ರಿಟಿಷ್ ಟೆಲಿಕಾಂ, ESPN ಡಿಜಿಟಲ್ ಮಿಡಿಯಾ ಸೇರಿದಂತೆ ಇತರ ಕೆಲ ಕಂಪನಿಗಳು ಬಿಡ್ಡಿಂಗ್ ಪೂಲ್‌‍ನಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದೆ.

ಕ್ರೀಡೆಯಲ್ಲಿ ಅಧಿಪತ್ಯ ಸಾಧಿಸುತ್ತಿದೆ ರಿಲಯನ್ಸ್
ಟೆಲಿಕಾಂ, ರಿಟೇಲ್ ಮಾರ್ಟ್ ಸೇರಿದಂತೆ ಹಲವು ಉದ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ಅಧಿಪತ್ಯ ಸಾಧಿಸಿದೆ. ಇದೀಗ ಕ್ರೀಡೆಯಲ್ಲೂ ರಿಲಯನ್ಸ್ ಪ್ರಾಬಲ್ಯ ಸಾಧಿಸುತ್ತಿದೆ. ಈಗಾಗಲೇ ರಿಲಯನ್ಸ್ ಹಲವು ಕ್ರೀಡೆಗಳಲ್ಲಿ ಹಣ ಹೂಡಿಕೆ ಮಾಡಿ ಯಶಸ್ಸು ಸಾಧಿಸಿದೆ. 

  • ಐಪಿಎಲ್ ಟೂರ್ನಿಯಲ್ಲಿ ರಿಲಯನ್ಸ್ ಮಾಲೀಕತ್ವದ ಮುಂಬೈ ಇಂಡಿಯನ್ಸ್ ತಂಡ (ಅತ್ಯಂತ ಯಶಸ್ವಿ ತಂಡ)
  • ರಿಲಯನ್ಸ್ ಮಾಲೀಕತ್ವದ ಇಂಡಿಯನ್ ಸೂಪರ್ ಲೀಗ್(ISL) ಫುಟ್ಬಾಲ್ ಟೂರ್ನಿ
  • ಗ್ಲೋಬಲ್ ಸ್ಪೋರ್ಟ್ಸ್ ಮಾರ್ಕೆಟಿಂಗ್ IMG ಜೊತೆ ರಿಲಯನ್ಸ್ ಪಾಲುದಾರಿಕೆ(IMG ರಿಲಯನ್ಸ್)
  • ಏಷ್ಯಾದಲ್ಲಿ ಕ್ರೀಡಾ ಮಾನವ ಸಂಪನ್ಮೂಲ ಒದಗಿಸುತ್ತಿದೆ IMG ರಿಲಯನ್ಸ್
  • ರಿಲಯನ್ಸ್ ಜಿಯೋ ಹಲವು ಕ್ರೀಡೆಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!
ಶುಭ್‌ಮನ್ ಗಿಲ್‌ಗೆ ಇನ್ನೂ 2 ಮ್ಯಾಚ್‌ನಲ್ಲಿ ಅವಕಾಶ ಕೊಡಿ: ಅಶ್ವಿನ್ ಅಚ್ಚರಿಯ ಹೇಳಿಕೆ