"ನಮಾಝ್ ಮಾಡುವಾಗ ಸಿಗುವ ನೆಮ್ಮದಿ, ಶತಕ ಚಚ್ಚಿದರೂ ಸಿಗಲ್ಲ": ಭಾರತೀಯ ಕ್ರಿಕೆಟಿಗನ ದಿಟ್ಟ ಮಾತು..!

By Naveen Kodase  |  First Published Aug 31, 2024, 12:55 PM IST

ಚೆನ್ನೈ ಸೂಪರ್ ಕಿಂಗ್ಸ್ ತಂಡದ 20 ವರ್ಷದ ಯುವ ಕ್ರಿಕೆಟಿಗ ಇದೀಗ ಅಚ್ಚರಿಯ ಹೇಳಿಕೆಯೊಂದರ ಮೂಲಕ ಸುದ್ದಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಬಲಗೈ ಬ್ಯಾಟರ್ ಸಮೀರ್ ರಿಜ್ವಿಯನ್ನು ಕಳೆದ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ಬರೋಬ್ಬರಿ ₹8.4 ಕೋಟಿ ನೀಡಿ ಖರೀದಿಸಿತ್ತು. ಆಗ ಹೆಚ್ಚು ಗಮನ ಸೆಳೆದಿದ್ದ ರಿಜ್ವಿ, ಇದೀಗ ಮತ್ತೊಮ್ಮೆ ತಮ್ಮ ದಿಟ್ಟ ಮಾತಿನ ಮೂಲಕ ಸುದ್ದಿಯಾಗಿದ್ದಾರೆ.

ಸದ್ಯ ಯುಪಿ ಟಿ20 ಲೀಗ್‌ನಲ್ಲಿ ಪಾಲ್ಗೊಂಡಿರುವ ಸಮೀರ್ ರಿಜ್ವಿ, ತಮ್ಮ ಅದ್ಭುತ ಪ್ರದರ್ಶನದ ಜತೆಗೆ ಇದೀಗ ತಮ್ಮ ಹೇಳಿಕೆಯೊಂದರ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಅವರು ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ತಾವು ಪ್ರತಿ ನಿತ್ಯ ನಮಾಜ್ ಮಾಡುವ ಧಾರ್ಮಿಕ ಒಲವಿರುವ ವ್ಯಕ್ತಿ ಎಂದು ಹೇಳಿದ್ದಾರೆ. ಇಷ್ಟೇ ಆಗಿದ್ದರೇ ಅದು ಸುದ್ದಿಯಾಗುತ್ತಿರಲಿಲ್ಲ, ಇದೇ ಸಂದರ್ಶನದಲ್ಲಿ ಮುಂದುವರೆದು, ತಮಗೆ ನಮಾಝ್ ಪಠಣ ಮಾಡುವುದರಿಂದ ಸಿಗುವ ಶಾಂತಿ-ನೆಮ್ಮದಿ, ಶತಕ ಸಿಡಿಸಿದಾಗಲೂ ಸಿಗುವುದಿಲ್ಲ ಎಂದು ತಾವು ಅನುಸರಿಸುವ ಧರ್ಮದ ಕುರಿತಾಗಿ ತಮ್ಮ ದಿಟ್ಟ ನಿಲುವನ್ನು ಪ್ರಕಟಿಸಿದ್ದಾರೆ. ಇನ್ನು ಇದೇ ವೇಳೆ ತಮಗೆ ಕ್ರಿಕೆಟ್ ಲೆಜೆಂಡ್‌ಗಳಾದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಎಂದರೆ ಅಚ್ಚುಮೆಚ್ಚು ಎಂದು ಹೇಳಿದ್ದಾರೆ. 

Tap to resize

Latest Videos

ಕೊಹ್ಲಿ - ರೋಹಿತ್ ಬಯೋಪಿಕ್‌ನಲ್ಲಿ ಈ ನಟರೇ ಅಭಿನಯಿಸಲಿ ಎಂದು ಫ್ಯಾನ್ಸ್ ಆಗ್ರಹ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಎಂತಹದ್ದೇ ಒತ್ತಡದ ಪರಿಸ್ಥಿತಿಯಿದ್ದರೂ ಶಾಂತವಾಗಿರಬೇಕು ಎನ್ನುವುದನ್ನು ತಮಗೆ ಧೋನಿ ಕಲಿಸಿಕೊಟ್ಟಿದ್ದಾರೆ ಎಂದು ಸಮೀರ್ ರಿಜ್ವಿ ತಿಳಿಸಿದ್ದಾರೆ. ಇನ್ನು ಇದೇ ವೇಳೆ ವಿರಾಟ್ ಕೊಹ್ಲಿ ದಿಗ್ಗಜ ಕ್ರಿಕೆಟಿಗನಾಗಿದ್ದರೂ, ಯಾವುದೇ ಹಮ್ಮುಬಿಮ್ಮುಗಳಿಲ್ಲದೇ ಎಲ್ಲರ ಜತೆ ಬೆರೆಯುವ ರೀತಿ ಕಂಡರೆ ನಮಗಿಷ್ಟ ಎಂದು ರಿಜ್ವಿ ಹೇಳಿದ್ದಾರೆ. ಇದೇ ವೇಳೆ ಐಪಿಎಲ್‌ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಮ್ಮನ್ನು ಸ್ವಾಗತಿಸಿದ ರೀತಿ ಅದ್ಭುತವಾಗಿತ್ತು. ಮುಂದೆಯೂ ಅವಕಾಶ ಸಿಕ್ಕಿದರೆ ತಾವು ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುವ ಒಲವನ್ನು ರಿಜ್ವಿ ವ್ಯಕ್ತಪಡಿಸಿದ್ದಾರೆ.

ಇನ್ನು ಆಟಗಾರರ ರೀಟೈನ್ ಕುರಿತಂತೆ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ತಮ್ಮ ಜತೆ ಯಾವುದೇ ಮಾತುಕತೆ ನಡೆಸಿಲ್ಲ ಎನ್ನುವುದನ್ನು ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಐಪಿಎಲ್‌ನಿಂದ ಹಣ ಗಳಿಸಬೇಕು ಎನ್ನುವುದು ನಮ್ಮ ಉದ್ದೇಶವಲ್ಲ, ಅದಕ್ಕೆ ಬದಲಾಗಿ ದೊಡ್ಡ ಟೂರ್ನಿಯಲ್ಲಿ ತಮ್ಮ ಕ್ರಿಕೆಟ್ ಪ್ರತಿಭೆ ಅನಾವರಣಗೊಳಿಸಲು ಎದುರು ನೋಡುತ್ತಿದ್ದೇನೆ ಎಂದು ರಿಜ್ವಿ ಹೇಳಿದ್ದಾರೆ. ಸಾಕಷ್ಟು ಭರವಸೆಯನ್ನಿಟ್ಟು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಮೀರ್ ರಿಜ್ವಿಯವರನ್ನು ಖರೀದಿಸಿತ್ತು. ಆದರೆ 2024ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಪರ ಬಲಗೈ ಸುರೇಶ್ ರೈನಾ ಖ್ಯಾತಿಯ ರಿಜ್ವಿ 8 ಪಂದ್ಯಗಳನ್ನಾಡಿ ಕೇವಲ 51 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಸಾವಿರ ಕೋಟಿ ಆಸ್ತಿ ಒಡೆಯ ಮಹೇಂದ್ರ ಸಿಂಗ್ ಧೋನಿ..! ನಿವೃತ್ತಿಯಾದ್ರೂ ಕಮ್ಮಿಯಾಗಿಲ್ಲ ಧೋನಿ ಬ್ರ್ಯಾಂಡ್ ವ್ಯಾಲ್ಯೂ..!

ಯುಪಿ ಟಿ20 ಲೀಗ್ ಟೂರ್ನಿಯಲ್ಲಿ ಕಾನ್ಪುರ್ ಸೂಪರ್‌ಸ್ಟಾರ್ಸ್‌ ತಂಡವನ್ನು ಮುನ್ನಡೆಸುತ್ತಿರುವ ಸಮೀರ್ ರಿಜ್ವಿ, 3 ಪಂದ್ಯಗಳನ್ನಾಡಿ 45ರ ಸರಾಸರಿಯಲ್ಲಿ 137 ರನ್ ಸಿಡಿಸಿದ್ದಾರೆ. 

click me!