ಆರ್‌ಸಿಬಿ ಗೆಲುವಿಗೆ ಪಾಕಿಸ್ತಾನದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ, ಕೇಕ್ ಕತ್ತರಿಸಿ ಡ್ಯಾನ್ಸ್

Published : Jun 01, 2026, 09:02 PM IST
Pakistan Fans celebrate RCB Victory

ಸಾರಾಂಶ

ಆರ್‌ಸಿಬಿ ಗೆಲುವಿಗೆ ಬೆಂಗಳೂರು, ಅಹಮ್ಮದಾಬಾದ್, ಹೈದರಾಬಾದ್ ಸೇರಿದಂತೆ ದೇಶದ ವಿವಿಡೆದೆ ಸಂಭ್ರಮಾಚರಣೆ ನೋಡಿರುತ್ತೀರಿ. ಇದೀಗ ಪಾಕಿಸ್ತಾನದಲ್ಲೂ ಭರ್ಜರಿ ಸೆಲೆಬ್ರೇಷನ್ ನಡೆದಿದೆ. ಪಾಕ್ ಅಭಿಮಾನಿಗಳ ಸಂಭ್ರಮದ ವಿಡಿಯೋ ಇಲ್ಲಿದೆ. 

ಕರಾಚಿ (ಜೂ.01) ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 2ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ವಿರಾಟ್ ಕೊಹ್ಲಿ ವಿನ್ನಿಂಗ್ಸ್ ಸಿಕ್ಸರ್, ರಜತ್ ಪಾಟಿದಾರ್ ನಾಯಕತ್ವ, ಅತ್ಯುತ್ತಮ ಬೌಲಿಂಗ್ ದಾಳಿ ಮೂಲಕ ಆರ್‌ಸಿಬಿ ಹೊಸ ಇತಿಹಾಸ ರಚಿಸಿದೆ. 2025ರ ಬಳಿಕ ಇದೀಗ 2026ರಲ್ಲೂ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿ ಟ್ರೋಫಿ ಗೆದ್ದಿದೆ. ಆರ್‌ಸಿಬಿ ಗೆಲುವಿಗೆ ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲೆಡೆ ಸಂಭ್ರಮಾಚರಣೆ ನಡೆದಿದೆ. ಇನ್ನು ಪಂದ್ಯ ನಡೆದ ಅಹಮ್ಮದಾಬಾದ್‌, ಇತ್ತ ಹೈದರಾಬಾದ್ ಸೇರಿದಂತೆ ಭಾರತದ ಹಲೆವೆಡೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ವಿಶೇಷ ಅಂದರೆ ಇದೀಗ ಪಾಕಿಸ್ತಾನದಲ್ಲೂ ಆರ್‌ಸಿಬಿ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಪಾಕ್ ಅಭಿಮಾನಿಗಳ ಸಂಭ್ರಮ

ವಿರಾಟ್ ಕೊಹ್ಲಿ ವಿನ್ನಿಂಗ್ಸ್ ಸಿಕ್ಸರ್ ಸಿಡಿಸುತ್ತಿದ್ದಂತೆ ಪಾಕಿಸ್ತಾನದ ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಭರ್ಡರಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ. ಕೆಲ ಅಭಿಮಾನಿಗಳು ಕೇಕ್ ಕತ್ತರಿ ಸಂಭ್ರಮಿಸಿದ್ದಾರೆ. ಆರ್‌ಸಿಬಿ ಜರ್ಸಿ ತೊಟ್ಟು ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳು ಗೆಲುವು ದಾಖಲಿಸುತ್ತಿದ್ದಂತೆ ಆರ್‌ಸಿಬಿ, ಆರ್‌ಸಿಬಿ ಎಂದು ಕೂಗಿ ಸ್ಪೆಪ್ಸ್ ಹಾಕಿದ್ದಾರೆ.

ಆರ್‌ಸಿಬಿಗೆ ದೇಶ ವಿದೇಶದಲ್ಲಿ ಅಭಿಮಾನಿ ಬಳಗವಿದೆ. ವಿಶೇಷ ಅಂದರೆ ಪಾಕಿಸ್ತಾನದಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿದೆ. ಪ್ರತಿ ಆರ್‌ಸಿಬಿ ಅಭಿಮಾನಿಗಳು ಗೆಲುವು ಸಂಭ್ರಮಿಸಿದ್ದಾರೆ. ಬಹುತೇಕರು ವಿರಾಟ್ ಕೊಹ್ಲಿ ಹೆಸರಿನ ಜರ್ಸಿ ತೊಟ್ಟು ಸಂಭ್ರಮಿಸಿದ್ದಾರೆ. ಪಾಕಿಸ್ತಾನ ಜರ್ಸಿ ಮೇಲೆ ಆರ್‌ಸಿಬಿ ಜರ್ಸಿ ತೊಟ್ಟಿದ್ದಾರೆ. ಗೆಲುವಿನ ಸಂಭ್ರಮದಲ್ಲಿ ಜರ್ಸಿ ತೆಗೆದು ಕುಣಿದಾಡಿದ್ದಾರೆ.

 

 

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವನ್ನು ಆರ್‌ಸಿಬಿ ಅಬ್ಬರಿಸಲು ಅವಕಾಶವೇ ನೀಡಲಿಲ್ಲ. ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ರಸಿಕ್ ಸಲಾಂ ದಾರ್ ಹಾಗೂ ಕ್ರುನಾಲ್ ಪಾಂಡ್ಯ ಬೌಲಿಂಗ್ ದಾಳಿಗೆ ಗುಜರಾತ್ ತತ್ತರಿಸಿತ್ತು. ಹೀಗಾಗಿ ಗುಜರಾತ್ ಟೈಟಾನ್ಸ್ ಫೈನಲ್ ಪಂದ್ಯದಲ್ಲಿ ಕೇವಲ 155 ರನ್ ಸಿಡಿಸಿತು.

ಗುಜರಾತ್ ಟೈಟಾನ್ಸ್ ನೀಡಿದ 256 ರನ್ ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ ಬ್ಯಾಟಿಂಗ್‌ನಲ್ಲೂ ಉತ್ತಮ ಹೋರಾಟ ನೀಡಿತು. ವಂಕಟೇಶ್ ಅಯ್ಯರ್ 32, ಟಿಮ್ ಡೇವಿಡ್ 24 ರನ್ ಸಿಡಿಸಿದರು. ಇತ್ತ ವಿರಾಟ್ ಕೊಹ್ಲಿ ಅಜೇಯ 75 ರನ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಈ ಮೂಲಕ ಆರ್‌ಸಿಬಿ ಚಾಂಪಿಯನ್ ಕಿರೀಟ ಅಲಂಕರಿಸಿತ್ತು.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾವ್ಯ ಮಾರನ್ ಸೈಡ್‌ಲೈನ್, IPL ಹೊಸ ಕ್ರಶ್ 'ಅನನ್ಯಾ ಬಿರ್ಲಾ'! ₹16,600 ಕೋಟಿ RCB ಮಾಲೀಕನ ಮಗಳ ಹವಾ ಹೇಗಿದೆ ಗೊತ್ತಾ?
ಮದುವೆ ಮುಂದೂಡಿ ಆರ್‌ಸಿಬಿ ಸೇರಿಕೊಂಡ ರಜತ್ ಪಾಟಿದಾರ್ ಈಗ 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ