ಐಪಿಎಲ್ ಹರಾಜಿಗೂ ಮೊದಲು ಟ್ವಿಸ್ಟ್, 17.5 ಕೋಟಿ ರೂಗೆ ಕ್ಯಾಮರೂನ್ ಗ್ರೀನ್ ಖರೀದಿಸಿದ ಆರ್‌‌ಸಿಬಿ!

By Suvarna NewsFirst Published Nov 26, 2023, 9:45 PM IST
Highlights

ಐಪಿಎಲ್ ಹರಾಜಿಗೂ ಮೊದಲು ನಡೆಯುತ್ತಿರುವ ಆಟಗಾರರ ರಿಟೇನ್ ಹಾಗೂ ರಿಲೀಸ್ ಈ ಬಾರಿ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಗುಜರಾತ್ ತಂಡ ನಾಯಕ ಹಾರ್ದಿಕ್ ಪಾಂಡ್ಯ ರಿಟೇನ್ ಮಾಡಿಕೊಂಡರೂ, ಮುಂಬೈ ಇಂಡಿಯನ್ಸ್ ಟ್ರೇಡ್ ಮೂಲಕ ಖರೀದಿಸಿತ್ತು. ಇದರ ಬೆನ್ನಲ್ಲೇ ಆರ್‌ಸಿಬಿ ಮುಂಬೈನಿಂದ ಕ್ಯಾಮರೂನ್ ಗ್ರೀನ್ ಖರೀದಿಸಿದೆ.
 

ಬೆಂಗಳೂರು(ನ.26) ಐಪಿಎಲ್ 2024 ಟೂರ್ನಿ ಆರಂಭಕ್ಕೆ ಇನ್ನೂ 4 ತಿಂಗಳು ಬಾಕಿ ಇದೆ. ಆದರೆ ರೋಚಕತೆ ಈಗಿನಿಂದಲೇ ಶುರುವಾಗಿದೆ. ರಿಟೇನ್ ಹಾಗೂ ರಿಲೀಸ್ ನಿರ್ಧಾರ ಘೋಷಣೆಯಲ್ಲಿ ಹಲವು ಟ್ವಿಸ್ಟ್ ಎದುರಾಗಿದೆ. ಗುಜರಾತ್ ಟೈಟಾನ್ಸ್ ಉಳಿಸಿಕೊಂಡ ಆಟಾಗರರ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಡೆಸಿದ ಟ್ರೇಡ್ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಗುಜರಾತ್ ರಿಟೇನ್ ತಂಡದಲ್ಲಿದ್ದ ನಾಯಕ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಟ್ರೇಡ್ ಮೂಲಕ ಖರೀದಿ ಮಾಡಿತ್ತು. ಇದರ ಬೆನ್ನಲ್ಲೇ ಮುಂಬೈ ಪರ್ಸ್ ಖಾಲಿಯಾಗಿತ್ತು.ಹೀಗಾಗಿ ಕ್ಯಾಮರೂನ್ ಗ್ರೀನ್ ತಂಡದಿಂದ ಬಿಡುಗಡೆ ಮಾಡಿತ್ತು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17.5 ಕೋಟಿ ರೂಪಾಯಿಗೆ ಕ್ಯಾಮರೂನ್ ಗ್ರೀನ್ ಖರೀದಿಸಿದೆ. 

ಆರ್‌ಸಿಬಿ ಹರಾಜಿಗೂ ಮೊದಲೇ ಕ್ಯಾಶ್ ಡೀಲ್ ಮೂಲಕ ದುಬಾರಿ ಆಟಾಗಾರನ ಖರೀದಿಸಿದೆ. ರಿಲೀಸ್ ಹಾಗೂ ರಿಟೇನ್ ಬಳಿಕ ಆರ್‌ಸಿಬಿ ತಂಡದಲ್ಲಿ 40.75 ಕೋಟಿ ರೂಪಾಯಿ ಬಾಕಿ ಉಳಿದಿತ್ತು. ಈ ಮೊತ್ತದಲ್ಲಿ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ಸಜ್ಜಾಗಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಆರ್‌ಸಿಬಿ 17.5 ಕೋಟಿ ರೂಪಾಯಿಗೆ ಕ್ಯಾಮರೂನ್ ಗ್ರೀನ್ ಖರೀದಿಸಿದೆ. ಈ ಮೂಲಕ ಆರ್‌ಸಿಬಿ ಮತ್ತೊಬ್ಬ ಆಲ್ರೌಂಡರ್ ಆಟಗಾರನ ತಂಡಕ್ಕೇ ಸೇರಿಸಿಕೊಂಡಿದೆ. ಆಸ್ಟ್ರೇಲಿಯಾ ಕ್ರಿಕೆಟಿಗ ಕ್ಯಾಮರೂನ್ ಗ್ರೀನ್ ಈ ಬಾರಿ ಆರ್‌ಸಿಬಿ ತಂಡದಲ್ಲಿ ಆಡಲಿದ್ದಾರೆ.

Latest Videos

ಗುಜರಾತ್ ಟೈಟಾನ್ಸ್‌ಗೆ ಶಾಕ್, ರೀಟೈನ್ ಆದರೂ ಮುಂಬೈ ಇಂಡಿಯನ್ಸ್‌ಗೆ ಹಾರಿದ ಹಾರ್ದಿಕ್ ಪಾಂಡ್ಯ!

ಗ್ರೀನ್ ಆಗಮನದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ:
ಫಾಫ್ ಡುಪ್ಲೆಸಿಸ್(ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸೂಯೂಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಂಡಜೆ, ಮಯಾಂಕ್ ಡಗರ್, ವೈಶಾಕ್ ವಿಜಯ ಕುುಮಾರ್, ಅಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ, ರಜನ್ ಕುಮಾರ್, ಕ್ಯಾಮರೂನ್ ಗ್ರೀನ್

ರಿಂಕು ಸಿಂಗ್, ಶ್ರೇಯಸ್ ಅಯ್ಯರ್ ಸೇರಿ 13 ಕ್ರಿಕೆಟಿಗರ ಉಳಿಸಿ, ಪ್ರಮುಖರ ಕೈಬಿಟ್ಟ ಕೆಕೆಆರ್!

ಆರ್‌ಸಿಬಿ ತಂಡದಿಂದ ಹೊರಬಿದ್ದ ಆಟಗಾರರ ಪಟ್ಟಿ
ವನಿಂದು ಹಸಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಮಿಚೆಲ್ ಬ್ರಾಸ್‌ವೆಲ್, ಫಿನ್ ಅಲೆನ್, ವೇಯ್ನ್ ಪಾರ್ನೆಲ್, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ಸೋನು ಸಿಂಗ್, ಕೇದಾರ್ ಯಾದವ್, ಸಿದ್ಧಾರ್ಥ್ ಕೌಲ್

click me!