ರಿಂಕು ಸಿಂಗ್, ಶ್ರೇಯಸ್ ಅಯ್ಯರ್ ಸೇರಿ 13 ಕ್ರಿಕೆಟಿಗರ ಉಳಿಸಿ, ಪ್ರಮುಖರ ಕೈಬಿಟ್ಟ ಕೆಕೆಆರ್!

By Suvarna NewsFirst Published Nov 26, 2023, 7:33 PM IST
Highlights

ಐಪಿಎಲ್ 2024ರ ಹರಾಜಿಗೂ ಮೊದಲು ಕೋಲ್ಕಾತಾ ನೈಟ್ ರೈಡರ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈಗಾಗಲೇ ಗೌತಮ್ ಗಂಭೀರ್ ತಂಡಕ್ಕೆ ವಾಪಸ್ ಆಗಿದ್ದಾರೆ. ಇದೀಗ 12 ಪ್ರಮುಖ ಕ್ರಿಕೆಟಿಗರನ್ನು ತಂಡದ ರಿಲೀಸ್ ಮಾಡಿರುವ ಕೆಕೆಆರ್ 13 ಕ್ರಿಕೆಟಿಗರ ಉಳಿಸಿಕೊಂಡಿದೆ. 

ಕೋಲ್ಕತಾ(ನ.26) ಐಪಿಎಲ್ ಟೂರ್ನಿ ಸಿದ್ಧತೆ ಆರಂಭಗೊಂಡಿದೆ. ಐಪಿಎಲ್ ಹರಾಜಿಗೆ ಫ್ರಾಂಚೈಸಿಗಳು ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ತಂಡದಲ್ಲಿ ಆಟಗಾರರನ್ನು ಉಳಿಸಲು, ಕೈಬಿಡಲು ಇಂದು(ನ.26) ಕೊನೆಯ ದಿನವಾಗಿದೆ. ಹೀಗಾಗಿ ಎಲ್ಲಾ ತಂಡಗಳು ತನ್ನ ನಿರ್ಧಾರ ಪ್ರಕಟಿಸುತ್ತಿದೆ. ಈ ಬಾರಿಯ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಹಲವು ಬದಲಾವಣೆ ಮಾಡಿದೆ. ಕೆಕೆಆರ್‌ಗೆ ಟ್ರೋಫಿ ತಂದುಕೊಟ್ಟ ಗೌತಮ್ ಗಂಭೀರ್ ಇದೀಗ ಮೆಂಟರ್ ಆಗಿ ತಂಡಕ್ಕೆ ಮರಳಿದ್ದಾರೆ. ಇತ್ತ 13 ಕ್ರಿಕೆಟಿಗರನ್ನು ತಂಡದಲ್ಲಿ ಉಳಿಸಿಕೊಂಡಿದೆ.

ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಜೇಸನ್ ರಾಯ್ ಸೇರಿದಂತೆ ಪ್ರಮುಖ ಕ್ರಿಕೆಟಿಗರನ್ನು ಕೋಲ್ಕತಾ ನೈಟ್ ರೈಡರ್ಸ್ ಉಳಿಸಿಕೊಂಡಿದೆ. ಆದರೆ ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಶಾರ್ದೂಲ್ ಠಾಕೂರ್,  ಮನ್ದೀಪ್ ಸಿಂಗ್, ಟಿಮ್ ಸೌಥಿ ಸೇರಿದಂತೆ ಪ್ರಮುಖ ಕ್ರಿಕೆಟಿಗರನ್ನು ತಂಡದಿಂದ ಕೈಬಿಟ್ಟಿದೆ.

Latest Videos

IPL RETENTION: ಹರ್ಷಲ್, ಹೇಜಲ್‌ವುಡ್ ಹಸರಂಗಗೆ ಗೇಟ್‌ಪಾಸ್‌..! ಹರಾಜಿಗೆ 40 ಕೋಟಿ ಉಳಿಸಿಕೊಂಡ RCB

ಕೆಕೆಆರ್ ತಂಡ ರಿಲೀಸ್ ಮಾಡಿದ ಆಟಗಾರರ ಪಟ್ಟಿ
ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಆರ್ಯ ದೇಸಾಯಿ, ಡೇವಿಡ್ ವೀಸ್, ಶಾರ್ದೂಲ್ ಠಾಕೂರ್, ನಾರಾಯಣ್ ಜಗದೀಶನ್, ಮನ್ದೀಪ್ ಸಂಗ್, ಕುಲ್ವಂತ್ ಕೇಜ್ರೋಲಿಯಾ, ಲ್ಯೂಕಿ ಫರ್ಗ್ಯೂಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾರ್ಲ್ಸ್

ಕೆಕೆಆರ್ ತಂಡ ಉಳಿಸಿಕೊಂ ಆಟಗಾರರ ಪಟ್ಟಿ
ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಶ್ರೇಯಸ್ ಅಯ್ಯರ್, ಜೇಸನ್ ರಾಯ್, ಸುನಿಲ್ ನರೈನ್, ಸೂಯಾಂಶ್ ಶರ್ಮಾ, ಅಂಕುಲ್ ರಾಯ್, ಆ್ಯಂಡ್ರೆ ರಸೆಲ್,  ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಆರೋರಾ, ವರುಣ್ ಚಕ್ರವರ್ತಿ

ಜೋ ರೂಟ್ ಸೇರಿ 9 ಮಂದಿ ತಂಡದಿಂದ ಕೈಬಿಟ್ಟ ರಾಜಸ್ಥಾನ ರಾಯಲ್ಸ್, ಏಕೈಕ ಕನ್ನಡಿಗ ರೀಟೈನ್!

ಆಟಗಾರರ ರಿಲೀಸ್‌ನಿಂದ ಕೆಕೆಆರ್ ಬಳಿಕ 10.75 ಕೋಟಿ ರೂಪಾಯಿ ಬಾಕಿ ಇದೆ. ಇದರ ಜೊತೆಗೆ 5 ಕೋಟಿ ಹೆಚ್ಚುವರಿ ಹಣದೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.  ಕೋರ್ ತಂಡವನ್ನು ಕೆಕೆಆರ್ ಉಳಿಸಿಕೊಂಡಿದೆ. ಹೀಗಾಗಿ ಹರಾಜಿನಲ್ಲಿ ಯುವ ಪ್ರತಿಭೆಗಳಿಗೆ ಕೆಕೆಆರ್ ಮಣೆ ಹಾಕಲಿದೆ.

10 ಐಪಿಎಲ್ ತಂಡಗಳು ಇದೀಗ ಆಟಗಾರರ ರಿಟೈನ್ ಹಾಗೂ ರಿಲೀಸ್ ಲಿಸ್ಟ್ ಘೋಷಣೆ ಮಾಡುತ್ತಿದೆ. ಇಂದು ಕೊನೆಯ ದಿನವಾಗಿರುವ ಕಾರಣ ತಂಡಗಳು ಮಹತ್ವದ ನಿರ್ಧಾರ ಘೋಷಿಸತ್ತಿದೆ. ಆರ್‌ಸಿಬಿ ಕೂಡ ಪ್ರಮುಖ ಕ್ರಿಕೆಟಿಗರ ಉಳಿಸಿಕೊಂಡಿದೆ. ಕೊಹ್ಲಿ ಸತತ 17ನೇ ವರ್ಷ ಆರ್‌ಸಿಬಿ ಪರ ಆಡಲು ಸಜ್ಜಾಗಿದ್ದಾರೆ.

 

click me!