2ನೇ ಟಿ20ಯಲ್ಲಿ ಟೀಂ ಇಂಡಿಯಾದ ಮೂವರ ಹಾಫ್ ಸೆಂಚುರಿ, ಆಸ್ಟ್ರೇಲಿಯಾಗೆ 236 ರನ್ ಗುರಿ!

By Suvarna News  |  First Published Nov 26, 2023, 8:47 PM IST

ಕ್ರೀಸ್‌ಗಿಳಿದ ಮೂವರು ಬ್ಯಾಟ್ಸ್‌ಮನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಅರ್ಧ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ನೆರವಾಗಿದ್ದಾರೆ. 2ನೇ ಟಿ20ಯಲ್ಲಿ ಭಾರತದ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 236 ರನ್ ಟಾರ್ಗೆಟ್ ನೀಡಿದೆ.


ತಿರುವನಂತಪುರಂ(ನ.26) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಪ್ರತಿ ಪಂದ್ಯದಲ್ಲಿ ರೋಚಕ ಹೋರಾಟ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದೆ. 2ನೇ ಟಿ20 ಪಂದ್ಯದಲ್ಲಿ ಭಾರತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಇದರ ಪರಿಣಾಣ ಭಾರತ 4 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಬೃಹತ್ ಮೊತ್ತದ ಪ್ಲಾನ್ ಹಾಕಿಕೊಂಡಿತ್ತು. ಇದಕ್ಕೆ ತಕ್ಕಂತೆ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದರು. ಜೈಸ್ವಾಲ್ ಹಾಗೂ ರುತುರಾಜ್ ಮೊದಲ ವಿಕೆಟ್‌ಗೆ 77 ರನ್ ಜೊತೆಯಾಟ ನೀಡಿದರು. ಜೈಸ್ವಾಲ್ 25 ಎಸೆತದಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 53 ರನ್ ಸಿಡಿಸಿದರು. 

Latest Videos

undefined

ಜೈಸ್ವಾಲ್ ಬಳಿಕ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಹೋರಾಟ ಮುಂದುವರಿಯಿತು. ಗಾಯಕ್ವಾಡ್ ಹಾಗೂ ಇಶಾನ್ ಇಬ್ಬರೂ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇಶಾನ್ ಕಿಶನ್ 32 ಎಸೆತದಲ್ಲಿ 52 ರನ್ ಸಿಡಿಸಿದರು. ಇಶಾನ್ ಕಿಶನ್ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಬ್ಬರಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಇಂದು ಅಬ್ಬರಿಸಲು ಸಾಧ್ಯವಾಗಲಿಲ್ಲ. ಮೊದಲ ಟಿ20 ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ್ದ ಸೂರ್ಯಕುಮಾರ್ ಯಾದವ್, 2ನೇ ಪಂದ್ಯದಲ್ಲಿ 19 ರನ್ ಸಿಡಿಸಿ ಔಟಾದರು.

ಅಂತಿಮ ಹಂತದಲ್ಲಿ ರುತುರಾಜ್ ಗಾಯಕ್ವಾಡ್ 58 ರನ್ ಸಿಡಿಸಿ ಔಟಾದರು. ರಿಂಕು ಸಿಂಗ್ ಹಾಗೂ ತಿಲಕ್ ವರ್ಮಾ ಜೊತೆಯಾಟ ಟೀಂ ಇಂಡಿಯಾ ರನ್ ವೇಗ ಹೆಚ್ಚಿಸಿತು. ಬೌಂಡರಿ ಹಾಗೂ ಸಿಕ್ಸರ್ ಅಬ್ಬರದಿಂದ ಭಾರತ 4 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿತು. ರಿಂಕು ಸಿಂಗ್ 9 ಎಸೆತದಲ್ಲಿ ಅಜೇಯ 31 ರನ್ ಸಿಡಿಸಿದರೆ. ತಿಲಕ್ ವರ್ಮಾ 2 ಎಸೆತದಲ್ಲಿ ಅಜೇಯ 7 ರನ್ ಸಿಡಿಸಿದರು.

click me!