ಜಿತೇಶ್-ಮಯಾಂಕ್ ಜೊತೆಯಾಟದಿಂದ ಆರ್‌ಸಿಬಿಗೆ ಗೆಲುವು. ಮೇ.29ಕ್ಕೆ ಮೊದಲ ಕ್ವಾಲಿಫೈಯರ್

Published : May 27, 2025, 11:48 PM ISTUpdated : May 27, 2025, 11:50 PM IST
RCB TEAM IPL 2025

ಸಾರಾಂಶ

ಜಿತೇಶ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಹೋರಾಟಕ್ಕೆ ಆರ್‌ಸಿಬಿ ರೋಚಕ ಗೆಲುವು ಕಂಡಿದೆ. ಲಖನೌ ನೀಡಿದ್ದ 228 ರನ್ ಟಾರ್ಗೆಟ್ ಚೇಸ್ ಮಾಡಿ ಇದೀಗ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಲಖನೌ(ಮೇ.27) ಕೊನೆಯವರೆಗೂ ಕುತೂಹಲ, ಇದರ ನಡುವೆ ವಿಕೆಟ್ ಪತನ ಉಳಿಸಿದ ನೋ ಬಾಲ್, ಮಂಕಡ್ ರನೌಟ್ ಪ್ರಯತ್ನ ಸೇರಿದಂತೆ ಆರ್‌ಸಿಬಿ ಸೋಲಿಸಲು ಹಲವು ಪ್ರಯತ್ನ ನಡೆದಿತ್ತು. ಆದರೆ ಲಖನೌ ಸೂಪರ್ ಜೈಂಟ್ಸ್ ವಿರುದ್ದ ಆರ್‌ಸಿಬಿ ಗೆದ್ದು ಬೀಗಿದೆ. ನಾಯಕ ಜಿತೇಶ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಅತ್ಯುತ್ತಮ ಜೊತೆಯಾಟದಿಂದ ಆರ್‌ಸಿಬಿ 6 ವಿಕೆಟ್ ಗೆಲವು ದಾಖಲಿಸಿತು. ಜಿತೇಶ್ ಶರ್ಮಾ ಅಬ್ಬರದ ಬ್ಯಾಟಿಂಗ್, ಇತ್ತ ಮಯಾಂಕ್ ಅಗರ್ವಾಲ್ ಹಾಫ್ ಸೆಂಚುರಿ ಆರ್‌ಸಿಬಿ ತಂಡಕ್ಕೆ ಗೆಲುವಿನ ಸಂಭ್ರಮ ನೀಡಿತು.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿಗೆ ಪಂಜಾಬ್ ಎದುರಾಳಿ

ಪ್ಲೇ ಆಪ್ ಹಂತದಲ್ಲಿ ಮೊದಲೆರಡು ಸ್ಥಾನಕ್ಕೇರಲು ಆರ್‌ಸಿಬಿ ಭಾರಿ ಪ್ರಯತ್ನ ನಡೆಸಿತ್ತು. ಇದಕ್ಕೆ ಪ್ರತಿಫಲ ಸಿಕ್ಕಿದೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಗೆಲುವು ದಾಖಿಲಿಸುವ ಮೂಲಕ ಆರ್‌ಸಿಬಿ ಇದೀಗ ಅಂಕಪಟ್ಟಿಯಲ್ಲಿ ಮೊದಲ 2ನೇ ಸ್ಥಾನಕ್ಕೇರಿದೆ. ಮೇ.29ರಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ-ಪಂಜಾಬ್ ಕಿಂಗ್ಸ್ ವಿರುದ್ದ ಹೋರಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಿದರೆ, ಸೋತ ತಂಡಕ್ಕೆ ಪೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ಮೇ.30 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯ ಆಡಲಿದೆ.

ಆರ್‌ಸಿಬಿ ಚೇಸಿಂಗ್

228 ರನ್ ಟಾರ್ಗೆಟ್ ಪಡೆದ ಆರ್‌ಸಿಬಿ ಉತ್ತಮ ಆರಂಭ ಪಡೆಯಿತು. ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಜೊತೆ ಮೊದಲ ವಿಕೆಟ್‌ಗೆ 61 ರನ್ ಜೊತೆಯಾಟ ನೀಡಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಾಲ್ಟ್ 19 ಎಸೆತದಲ್ಲಿ 30 ರನ್ ಸಿಡಿಸಿದರು. ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ರಜತ್ ಪಾಟೀದಾರ್ 14 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ವಿರಾಟ್ ಕೊಹ್ಲಿ 54 ರನ್ ಸಿಡಿಸಿ ಔಟಾದರು. ಆರ್‌ಸಿಬಿ ದಿಢೀರ್ ವಿಕೆಟ್ ಪತನ ತಂಡಕ್ಕೆ ಸಮಸ್ಯೆ ತಂದೊಡ್ಡಿತ್ತು. ಲಿಯಾಮ್ ಲಿವಿಂಗ್ ಸ್ಟೋನ್ ಡಕೌಟ್ ಆದರು. ಈ ಮೂಲಕ ಆರ್‌ಸಿಬಿ ತಲೆನೋವು ಮತ್ತಷ್ಟು ಹೆಚ್ಚಾಯಿತು.

ಪಂದ್ಯ ಗತಿ ಬದಲಿಸಿದ ಮಯಾಂಕ್ ಅಗರ್ವಾಲ್ ಜಿತೇಶ್ ಶರ್ಮಾ

ಮಯಾಂಕ್ ಅಗರ್ವಾಲ್ ಹಾಗೂ ಜಿತೇಶ್ ಶರ್ಮಾ ಜೊತೆಯಾಟ ಆರ್‌ಸಿಬಿ ಪಂದ್ಯದ ಗತಿ ಬದಲಿಸಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿ ರನ್ ಕಲೆಹಾಕಿತು. ಇದರ ನಡುವೆ 49 ರನ್ ಸಿಡಿಸಿದ್ದಾಗ ಜಿತೇಶ್ ಶರ್ಮಾ ವಿಕೆಟ್ ಪತನಗೊಂಡಿತ್ತು. ಆದರೆ ನೋ ಬಾಲ್ ಆಗಿದ್ದ ಕಾರಣ ಆರ್‌ಸಿಬಿ ಅಬಿಮಾನಿಗಳು ನಿಟ್ಟುರಿಸು ಬಿಟ್ಟರು. ಬಳಿಕ ಮಂಕಡ್ ರನೌಟ್ ಪ್ರಯತ್ನ ಸೇರಿದಂತೆ ಹಲವು ಪ್ರಯತ್ನಗಳು ನಡೆದಿತ್ತು. ಆದರೆ ಆರ್‌ಸಿಬಿ ಹೋರಾಟ ದಿಟವಾಗಿತ್ತು.

ಜಿತೇಶ್ ಶರ್ಮಾ ಅಜೇಯ 85 ರನ್ ಸಿಡಿಸಿದರೆ, ಮಯಾಂಕ್ ಅಗರ್ವಾಲ್ ಅಜೇಯ 41 ರನ್ ಸಿಡಿಸಿದರು. ಜಿತೇಶ್ ಶರ್ಮಾ ಸಿಕ್ಸರ್ ಸಿಡಿಸುವ ಮೂಲಕ ಆರ್‌ಸಿಬಿ ಗೆಲುವು ದಾಖಲಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!