
ಲಖನೌ(ಮೇ.27) ಐಪಿಎಲ್ 2025 ಟೂರ್ನಿಯ ಕೊನೆಯ ಲೀಗ್ ಪಂದ್ಯ. ಈಗಾಗಲೇ ಪ್ಲೇ ಆಫ್‌ಗೆ ಲಗ್ಗೆ ಇಟ್ಟರೂ ಆರ್‌ಸಿಬಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಟೂರ್ನಿಯಿಂದ ಹೊರಬಿದ್ದ ಲಖನೌ ಸೂಪರ್ ಜೈಂಟ್ಸ್‌ಗೆ ಗೆಲುವಿನೊಂದಿಗೆ ವಿದಾಯ ಹೇಳುವ ತವಕ. ಹೀಗಾಗಿ ಕೊನೆ ಲೀಗ್ ಪಂದ್ಯ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ರಿಷಬ್ ಪಂತ್ ಈ ಬಾರಿಯ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆದರೆ ಕೊನೆ ಲೀಗ್ ಪಂದ್ಯದಲ್ಲಿ ಪಂತ್ ಅಬ್ಬರಿಸಿದರು. 54 ಎಸೆತದಲ್ಲಿ ಪಂತ್ ಶತಕ ಸಿಡಿಸಿ ಮಿಂಚಿದರು. ಇತ್ತ ಮಿಚೆಲ್ ಮಾರ್ಶ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಲಖನೌ ಸೂಪರ್ ಜೈಂಟ್ಸ್ 3 ವಿಕೆಟ್ ಕಳೆದುಕೊಂಡು 227 ರನ್ ಸಿಡಿಸಿತು.
ರಿಷಬ್ ಪಂತ್ ಸೆಂಚುರಿ
ಟಾಸ್ ಆರ್‍ಸಿಬಿ ಗೆದ್ದರೂ ಬ್ಯಾಟಿಂಗ್‌ನಲ್ಲಿ ಲಖನೌ ಅಬ್ಬರಿಸಿತ್ತು. ಆರಂಭದಿಂದಲೇ ಲಖನೌ ಬ್ಯಾಟರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದರ ನಡುವೆ ಮ್ಯಾಥ್ಯೂ ಬ್ರೇಟ್ಜ್ಕೆ 14 ರನ್ ಸಿಡಿಸಿ ಔಟಾದರು. ಆರಂಭಿಕ ಹಂತದಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಿದರೂ ಮಿಚೆಲ್ ಮಾರ್ಶ್ ಹಾಗೂ ರಿಷಬ್ ಪಂತ್ ಜೊತೆಯಾಟ ಲೆಕ್ಕಾಚಾರ ಉಲ್ಟಾ ಮಾಡಿತು. ರಿಷಬ್ ಪಂತ್ ಶತಕ ಸಿಡಿಸಿ ಮಿಂಚಿದರು. 54 ಎಸೆತದಲ್ಲಿ ಪಂತ್ ಸೆಂಚುರಿ ಪೂರೈಸಿದರು. ಪಂತ್ ಶತಕದಿಂದ ಇತ್ತ ಲಖನೌ ರನ್ 200ರ ಗಡಿ ದಾಟಿತು.
ರಿಷಪ್ ಬಂತ್ ಸೆಂಚುರಿ ಬಳಿಕವೂ ಅಬ್ಬರಿಸಿದರು. ರಿಷಬ್ ಪಂತ್ ಅಜೇಯ 118 ರನ್ ಸಿಡಿಸಿದರು. ಪಂತ್ 61 ಎಸೆತದಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದರು. ಇತ್ತ ಮಿಚೆಲ್ ಮಾರ್ಶ್ 37 ಎಸೆತದಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 67 ರನ್ ಸಿಡಿಸಿ ನಿರ್ಗಮಿಸಿದ್ದರು. ನಿಕೋಲಸ್ ಪೂರನ್ 13 ರ್ ಸಿಡಿಸಿ ಔಟಾದರು.
ಆರ್‌ಸಿಬಿ ಬೌಲಿಂಗ್
ಲಖನೌ ವಿರುದ್ಧ ಆರ್‌ಸಿಬಿ ಮಹತ್ವದ 2 ಬದಲಾವಣೆ ಮಾಡಿ ಕಣಕ್ಕಿಳಿದಿತ್ತು. ಈ ಪೈಕಿ ನುವಾನ್ ತುಷಾರ್ ಆರಂಭದಲ್ಲೇ 1 ವಿಕೆಟ್ ಕಬಳಿಸಿ ಆರ್‌ಸಿಬಿ ನೆರವಾದರು. ತುಷಾರ್ 4 ಓವರ್‌ನಲ್ಲಿ 6.50ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ದುಬಾರಿಯಾದರೂ ಮಿಚೆಲ್ ಮಾರ್ಶ್ ವಿಕೆಟ್ ಕಬಳಿಸಿದರು. ಅಂತಿಮ ಹಂತದಲ್ಲಿ ರೋಮಾರಿಯಾ ಶೆಫರ್ಡ್ 1 ವಿಕೆಟ್ ಕಬಳಿಸದು. ಆದರೆ 12ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ ದುಬಾರಿಯಾದರು. ಮಿಕ್ಕವರು ದುಬಾರಿಯಾಗಿದ್ದು ಮಾತ್ರವಲ್ಲ, ವಿಕೆಟ್ ಕೂಡ ಕಬಳಿಸಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.