ರನ್ ಮಷಿನ್ ವಿರಾಟ್ ಕೊಹ್ಲಿ, 16 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ ಹಲವು ದಾಖಲೆಗಳನ್ನ ಬರೆದಿದ್ದಾರೆ. ದೇಶ-ವಿದೇಶಗಳಲ್ಲಿ ಅದ್ಭುತ ಇನ್ನಿಂಗ್ಸ್‌ಗಳ ಮೂಲಕ ಅಬ್ಬರಿಸಿದ್ದಾರೆ. ಆದ್ರೆ, ಆ ಒಂದು ದಿನ ಕೊಹ್ಲಿನ ಕಟ್ಟಿಹಾಕೋದು ಸುಲಭ ಮಾತಲ್ಲ.
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಡು ಆರ್ ಡೈ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲು- ಗೆಲುವು ಈ ಆಟಗಾರನ ಕೈಯಲ್ಲಿದೆ. ಈ ಬಿಗ್ ಸ್ಟಾರ್ ಅಬ್ಬರಿಸಿದ್ರೆ ಮಾತ್ರ ಮೇ 18ರಂದು RCB ಪ್ಲೇ ಆಫ್ಗೆ ಎಂಟ್ರಿ ನೀಡಲಿದೆ. ಯಾಕಂದ್ರೆ, ಮೇ 18, ರನ್ ಮಷಿನ್ ಪಾಲಿಗೆ ಲಕ್ಕಿ ಡೇ. ಯಾರು ಆ ಆಟಗಾರ. ಏನ್ ಕಥೆ ಅಂತ ಹೇಳ್ತೀವಿ, ಈ ಸ್ಟೋರಿಲಿ.
ವಿರಾಟ್ ಅದೃಷ್ಟದ ದಿನವೇ ಬಿಗ್ ಮ್ಯಾಚ್..!
ರನ್ ಮಷಿನ್ ವಿರಾಟ್ ಕೊಹ್ಲಿ, 16 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ ಹಲವು ದಾಖಲೆಗಳನ್ನ ಬರೆದಿದ್ದಾರೆ. ದೇಶ-ವಿದೇಶಗಳಲ್ಲಿ ಅದ್ಭುತ ಇನ್ನಿಂಗ್ಸ್‌ಗಳ ಮೂಲಕ ಅಬ್ಬರಿಸಿದ್ದಾರೆ. ಆದ್ರೆ, ಆ ಒಂದು ದಿನ ಕೊಹ್ಲಿನ ಕಟ್ಟಿಹಾಕೋದು ಸುಲಭ ಮಾತಲ್ಲ. ಆ ದಿನವೇ ಮೇ ಹದಿನೆಂಟು. ಯೆಸ್, ಮೇ 18 ರಂದು ಕೊಹ್ಲಿ ಸೂಪರ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಈಗ ಅದೇ ದಿನದಂದು ಕೊಹ್ಲಿ ಸಿಎಸ್‌ಕೆ ವಿರುದ್ಧ ಡು ಆರ್ ಡೈ ಮ್ಯಾಚ್ ಆಡಲು ರೆಡಿಯಾಗಿದ್ದಾರೆ.
2013ರ ಮೇ 18 - CSK ವಿರುದ್ಧ ಸ್ಫೋಟಕ ಅರ್ಧಶತಕ..!
2013ರ ಐಪಿಎಲ್‌ನಲ್ಲಿ ಆರ್‌ಸಿಬಿ VS ಚೆನ್ನೈ ಸೂಪರ್ ಕಿಂಗ್ಸ್ ಮ್ಯಾಚ್ ಬೆಂಗಳೂರಿನಲ್ಲಿ ನಡೆದಿತ್ತು. ಮಳೆಯ ಅಡ್ಡಿಯಿಂದಾಗಿ ಪಂದ್ಯವನ್ನ 8 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ RCB 8 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಕಲೆಹಾಕಿತ್ತು. ವಿರಾಟ್ ಕೊಹ್ಲಿ ಕೇವಲ 29 ಎಸೆತಗಳಲ್ಲಿ 6 ಫೋರ್ ಮತ್ತು 4 ಸಿಕ್ಸ್ಗಳಿಂದ 56 ರನ್ ಬಾರಿಸಿದ್ರು. 107 ರನ್ ಗುರಿಯನ್ನ ಬೆನ್ನಟ್ಟಿದ CSK 8 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು, ಕೇವಲ 86 ರನ್ ಗಳಿಸಿತ್ತು. ಆ ಮೂಲಕ 24 ರನ್‌ಗಳಿಂದ ಸೋಲಿಗೆ ಶರಣಾಗಿತ್ತು.
ಬೆಂಗಳೂರಲ್ಲಿ RCB VS CSK ಹೈವೋಲ್ಟೇಜ್ ಮ್ಯಾಚ್: ಬಿಗ್ ಮ್ಯಾಚ್ ಟಿಕೆಟ್‌ಗಾಗಿ ಫುಲ್ ಡಿಮ್ಯಾಂಡ್..!
2016ರ ಮೇ 18 - ಪಂಜಾಬ್ ವಿರುದ್ಧ ಭರ್ಜರಿ ಶತಕ..!
2016ರಲ್ಲೂ ಮೇ 18ರಂದು RCB ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಿದ್ವು. ಈ ಪಂದ್ಯಕ್ಕೂ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಿತ್ತು. ಮಳೆಯಿಂದಾಗಿ ಪಂದ್ಯವನ್ನ 15 ಓವರ್‌ಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 15 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 211 ರನ್ ಗಳಿಸ್ತು. ಈ ಪಂದ್ಯದಲ್ಲಿ ವಿರಾಟ್ ವಿರಾಟರೂಪ ತಾಳಿದ್ರು. 50 ಬಾಲ್ಗಳಲ್ಲಿ 12 ಫೋರ್ 8 ಸಿಕ್ಸ್ಗಳೊಂದಿಗೆ 113 ರನ್ ಬಾರಿಸಿದ್ರು. ಕೊಹ್ಲಿಯ ಭರ್ಜರಿ ಶತದಿಂದಾಗಿ RCB 82 ರನ್‌ಗಳೊಂದಿಗೆ ಗೆಲುವಿನ ಬಾವುಟ ಹಾರಿಸಿತ್ತು.
2023ರ ಮೇ18 - SRH ವಿರುದ್ದ ಸೆಂಚುರಿ..!
2023ರ ಐಪಿಎಲ್ ಸೀಸನ್‌ನಲ್ಲೂ ಕೊಹ್ಲಿ ಮೇ 18ರಂದು ಘರ್ಜಿಸಿದ್ರು. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ರು. ಹೈದ್ರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ಪಡೆ, ಹೆನ್ರಿಚ್ ಕ್ಲಾಸೆನ್ ಅವ್ರ ಶತಕದಿಂದಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಬಾರಿಸಿತ್ತು. ಈ ಗುರಿಯನ್ನ ಬೆನ್ನಟ್ಟಿದ ರೆಡ್ ಆರ್ಮಿ, ಇನ್ನು 4 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತ್ತು. ಕೊಹ್ಲಿ 63 ಎಸೆತಗಳಲ್ಲಿ ಬರೋಬ್ಬರಿ 100 ರನ್ ಸಿಡಿಸಿದ್ರು.
IPL ಪ್ಲೇ ಆಫ್ ರೇಸ್‌ನಿಂದ ಗುಜರಾತ್ ಔಟ್: 3 ಸ್ಥಾನಕ್ಕೆ ಈ 6 ತಂಡಗಳ ಫೈಟ್..! ಹೀಗಿದೆ ನೋಡಿ ಹೊಸ ಲೆಕ್ಕಾಚಾರ
ಈ ಬಾರಿಯೂ ಕೊಹ್ಲಿ ಮೇ 18ರಂದು ಅಖಾಡಕ್ಕಿಳಿಯುತ್ತಿದ್ದು, ಪ್ಲೇ ಆಫ್ ಎಂಟ್ರಿ ದೃಷ್ಟಿಯಿಂದ RCB ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಬಿಗ್ ಮ್ಯಾಚ್ನಲ್ಲಿ ಒಂದು ವೇಳೆ RCB ಚೇಸ್ ಮಾಡಿದ್ರೆ, 18.2 ಓವರ್ಗಳಲ್ಲೇ ಗುರಿ ಮುಟ್ಟಬೇಕಿದೆ. ಮೇ 18 ಕೊಹ್ಲಿಯ ಅದೃಷ್ಟದ ದಿನ, ಮತ್ತೊಂದೆಡೆ ಅವ್ರ ಜೆರ್ಸಿಯ ನಂಬರ್ ಕೂಡ ಹದಿನೆಂಟು. ಇದ್ರಿಂದ ಆವತ್ತೂ ಕೊಹ್ಲಿ ಅಬ್ಬರಿಸೋದು ಪಕ್ಕಾ. RCB ಪ್ಲೇ ಆಫ್ಗೆ ಎಂಟ್ರಿ ನೀಡೋದು ಪಕ್ಕಾ ಅಂತ RCB ಫ್ಯಾನ್ಸ್ ಫುಲ್ ಕಾನ್ಫಿಡೆನ್ಸ್ನಲ್ಲಿದ್ದಾರೆ.
ಅದೇನೆ ಇರಲಿ, ಸದ್ಯ ಜಬರ್ದಸ್ತ್ ಫಾರ್ಮ್ನಲ್ಲಿರೋ ವಿರಾಟ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಆರ್ಭಟಿಸಲಿ. ಆ ಮೂಲಕ RCB ಪಾಲಿಗೆ ಪ್ಲೇ ಆಫ್ ಗೇಟ್ ಓಪನ್ ಆಗಲಿ ಅನ್ನೋದೆ ನಮ್ಮ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್