ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ ಕೇವಲ 1 ಅಭ್ಯಾಸ ಪಂದ್ಯ?

By Kannadaprabha News  |  First Published May 16, 2024, 1:49 PM IST

ಅಭ್ಯಾಸ ಪಂದ್ಯಗಳನ್ನು ಫ್ಲೋರಿಡಾದಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದ್ದು, ನ್ಯೂಯಾರ್ಕ್‌ನಿಂದ ಫ್ಲೋರಿಡಾಗೆ ಅಭ್ಯಾಸ ಪಂದ್ಯಕ್ಕಾಗಿ ಮಾತ್ರ ಪ್ರಯಾಣಿಸಲು ಭಾರತ ತಂಡ ನಿರಾಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ.


ನವದೆಹಲಿ(ಮೇ.16) ಜೂನ್‌ 1ರಿಂದ 29ರ ವರೆಗೆ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಕೇವಲ 1 ಅಭ್ಯಾಸ ಪಂದ್ಯವನ್ನಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾಮಾನ್ಯವಾಗಿ ವಿಶ್ವಕಪ್‌ ಟೂರ್ನಿಗಳಿಗೂ ಮುನ್ನ ಭಾರತ ಸೇರಿದಂತೆ ಬಹುತೇಕ ತಂಡಗಳು 2 ಅಭ್ಯಾಸ ಪಂದ್ಯಗಳನ್ನಾಡುತ್ತವೆ. ಆದರೆ ಈಗಾಗಲೇ ಐಪಿಎಲ್‌ ವೇಳೆ ಪ್ರಯಾಣದಿಂದ ಬಳಲಿರುವ ಭಾರತೀಯ ಆಟಗಾರರು ವಿಶ್ವಕಪ್‌ಗೂ ಮುನ್ನ ಸುದೀರ್ಘ ಪ್ರಯಾಣ ತಪ್ಪಿಸಲು ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದ್ದಾರೆ ಎಂದು ವರದಿಯಾಗಿದೆ.

ಅಭ್ಯಾಸ ಪಂದ್ಯಗಳನ್ನು ಫ್ಲೋರಿಡಾದಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದ್ದು, ನ್ಯೂಯಾರ್ಕ್‌ನಿಂದ ಫ್ಲೋರಿಡಾಗೆ ಅಭ್ಯಾಸ ಪಂದ್ಯಕ್ಕಾಗಿ ಮಾತ್ರ ಪ್ರಯಾಣಿಸಲು ಭಾರತ ತಂಡ ನಿರಾಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‌ ಮುಗಿದ ಬೆನ್ನಲ್ಲೇ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಆರಂಭಗೊಳ್ಳಲಿದ್ದು, ಈಗಾಗಲೇ ತಂಡಗಳು ಸಜ್ಜಾಗಿವೆ. ಈ ನಡುವೆ ಟೂರ್ನಿಯ ವೇಳಾಪಟ್ಟಿಗೆ ಸಂಬಂಧಿಸಿ ಶುರುವಾಗಿದ್ದ ಕೆಲ ಗೊಂದಲಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಸ್ಪಷ್ಟನೆ ನೀಡಿದೆ. ಆದರೆ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಐಸಿಸಿ ಇನ್ನಷ್ಟೇ ಪ್ರಕಟಿಸಬೇಕಿದೆ.

Tap to resize

Latest Videos

ಪ್ಲೇ-ಆಫ್‌ ಮೇಲೆ ಕಣ್ಣಿಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್‌ಗೆ ಗುಜರಾತ್‌ ಟೈಟಾನ್ಸ್ ಸವಾಲು

ಭಾರತ ಟೂರ್ನಿಯ ಮೊದಲ ಪಂದ್ಯದಲ್ಲಿ ಜೂ.5ಕ್ಕೆ ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್‌ ವಿರುದ್ಧ ಸೆಣಸಲಿದೆ. ಬಳಿಕ ಬದ್ಧವೈರಿ ಪಾಕಿಸ್ತಾನ ವಿರುದ್ಧ ಜೂ.9ಕ್ಕೆ ಆಡಲಿರುವ ಭಾರತ, ಜೂ.12ರಂದು ಅಮೆರಿಕ ಹಾಗೂ ಜೂ.15ರಂದು ಕೆನಡಾ ಸವಾಲು ಎದುರಿಸಲಿದೆ.

ಜೂ.26ರಂದು ಟ್ರಿನಿಡಾಡ್‌ನಲ್ಲಿ ಮೊದಲ ಸೆಮಿಫೈನಲ್‌ ನಡೆಯಲಿದೆ. ಜೂ.27ರಂದು ಗಯಾನದಲ್ಲಿ 2ನೇ ಸೆಮೀಸ್‌ ನಿಗದಿಯಾಗಿದೆ.

ಟಿ20 ವಿಶ್ವಕಪ್‌: 2ನೇ ಸೆಮೀಸ್‌ಗಿಲ್ಲ ಮೀಸಲು ದಿನ, ಭಾರತಕ್ಕೆ ಸಂಕಷ್ಟ?

ದುಬೈ: ಐಪಿಎಲ್‌ ಮುಗಿದ ಬೆನ್ನಲ್ಲೇ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಆರಂಭಗೊಳ್ಳಲಿದ್ದು, ಈಗಾಗಲೇ ತಂಡಗಳು ಸಜ್ಜಾಗಿವೆ. ಈ ನಡುವೆ ಟೂರ್ನಿಯ ವೇಳಾಪಟ್ಟಿಗೆ ಸಂಬಂಧಿಸಿ ಶುರುವಾಗಿದ್ದ ಕೆಲ ಗೊಂದಲಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಸ್ಪಷ್ಟನೆ ನೀಡಿದೆ. 

2ನೇ ಸೆಮಿಫೈನಲ್‌ಗೆ ಮೀಸಲು ದಿನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಐಸಿಸಿ, ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಅದೇ ದಿನದಂದು ಪಂದ್ಯ ಮುಕ್ತಾಯಗೊಳಿಸಲು 4 ಗಂಟೆಗಳ ಹೆಚ್ಚುವರಿ ಸಮಯ ಮೀಸಲಿಟ್ಟಿರುವುದಾಗಿ ತಿಳಿಸಿದೆ. ಜೂ.26ರಂದು ಟ್ರಿನಿಡಾಡ್‌ನಲ್ಲಿ ಮೊದಲ ಸೆಮೀಸ್‌ ನಡೆಯಲಿದೆ. ಪಂದ್ಯ ಸ್ಥಳೀಯ ಸಮಯ ರಾತ್ರಿ 8.30 (ಭಾರತದಲ್ಲಿ ಜೂ.27ರ ಬೆಳಗ್ಗೆ 6 ಗಂಟೆ)ಕ್ಕೆ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಮೀಸಲು ದಿನ ಇದೆ.

IPL 2024 ರಾಜಸ್ಥಾನ ರಾಯಲ್ಸ್‌ಗೆ ಸತತ 4ನೇ ಸೋಲು

ಜೂ.27ರಂದು ಗಯಾನದಲ್ಲಿ 2ನೇ ಸೆಮೀಸ್‌ ನಡೆಯಲಿದೆ. ಪಂದ್ಯ ಸ್ಥಳೀಯ ಸಮಯ ಬೆಳಗ್ಗೆ 10.30 (ಭಾರತದಲ್ಲಿ ಜೂ.27ರ ರಾತ್ರಿ 8.30)ಕ್ಕೆ ಆರಂಭಗೊಳ್ಳಲಿದೆ. ಈ ಪಂದ್ಯ ಹಗಲಿನಲ್ಲಿ ನಡೆಯಲಿರುವ ಕಾರಣ, ಮೀಸಲು ದಿನ ಇಲ್ಲ. ಒಂದು ವೇಳೆ ಭಾರತ ಅಂತಿಮ-4 ಸುತ್ತು ಪ್ರವೇಶಿಸಿದರೆ, 2ನೇ ಸೆಮೀಸ್‌ನಲ್ಲಿ ಆಡಲಿದೆ. ಜೂ.29ಕ್ಕೆ ಬಾರ್ಬೊಡಾಸ್‌ನಲ್ಲಿ ಫೈನಲ್‌ ನಡೆಯಲಿದೆ.

click me!