ನಮ್ಮದಾಯ್ತು ಕಪ್, ಪಂಜಾಬ್ ಮಣಿಸಿ ಟ್ರೋಫಿ ಗೆದ್ದ ಆರ್‌ಸಿಬಿ, ಭಾವುಕರಾದ ಕೊಹ್ಲಿ

Published : Jun 03, 2025, 11:24 PM ISTUpdated : Jun 03, 2025, 11:26 PM IST
Royal Challengers Bengaluru

ಸಾರಾಂಶ

ಪಂಜಾಬ್ ಕಿಂಗ್ಸ್ ಮಣಿಸಿದ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಸಲ್ ಕಪ್ ನಮ್ದಾಗಿದೆ. ಇತ್ತ ಅಭಿಮಾನಿಗಳ ಸಂಭ್ರಮಾಚರಣೆ ಡಬಲ್ ಆಗಿದೆ.

ಅಹಮ್ಮಾದಾಬಾದ್(ಜೂ.03) ಒಂದಲ್ಲ, ಎರಡಲ್ಲ ಬರೋಬ್ಬರಿ 18 ವರ್ಷಗಳ ಕಾಯುವಿಕೆ. ಸೋಲು, ಹೀನಾಯ ಸೋಲು, ಟ್ರೋಲ್ಸ ಮುಖಭಂಗ ಎಲ್ಲದರ ನಡುವೆ ನಿರಂತರವಾಗಿ ಆರ್‌ಸಿಬಿಗೆ ಅಭಿಮಾನಿಗಳು ಬೆಂಬಲ ನೀಡಿದ್ದಾರೆ. ಪ್ರತಿ ಸಲ ಕಪ್ ನಮ್ದೆ ಎಂದು ಕಾಯುತ್ತಾ ಕುಳಿತಿದ್ದ ಕಾಲ ಹೋಯಿತು. ಇದೀಗ ಕಪ್ ನಮ್ಮದೇ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ದ 6 ರನ್ ಗೆಲುವು ದಾಖಲಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ.

ಇಡೀ ತಂಡ ಭಾವುಕ

ಆರ್‌ಸಿಬಿ ಗೆಲುವು ದಾಖಲಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿದ್ದರೆ. ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ. ಇತ್ತ ಸಂಭ್ರಮ ಮುಗಿಲು ಮುಟ್ಟಿದೆ. ಇಡೀ ತಂಡ ಭಾವುಕಗೊಂಡಿದೆ.

ಒಂದೊಂದು ವಿಕೆಟ್ ಪತನ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿತ್ತು. ತಡ ರಾತ್ರಿಯಾದರೂ ಆರ್‌‌‌ಸಿಬಿ ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ. ಬೆಂಗಳೂರಿನ ಬೀದಿ ಬೀದಿಯಲ್ಲಿ ಪಟಾಕಿ ಸಿಟಿಸಿ ಸಂಭ್ರಮ ಶುರುವಾಗಿದೆ. 18ನೇ ಆವೃತ್ತಿಯಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದುಕೊಂಡಿತು. ಈ ಮೂಲಕ ಐಪಿಎಲ್ ಟೂರ್ನಿಗೆ ಹೊಸ ಚಾಂಪಿಯನ್ ಆಗಿದೆ.

ಪಂಜಾಬ್ ಇನ್ನಿಂಗ್ಸ್

191 ರನ್ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್ ಆರಂಭ ಉತ್ತವಾಗಿತ್ತು. ಮೊದಲ ವಿಕೆಟ್‌ಗೆ ಪಂಜಾಬ್ ಕಿಂಗ್ಸ್ 43 ರನ್ ಸಿಡಿಸಿತ್ತು. ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಬ್ರಮನ್ ಸಿಂಗ್ ಜೊತೆಯಾಟ ಪಂಜಾಬ್‌ ಆತ್ಮವಿಶ್ವಾಸ ಹೆಚ್ಚಿಸಿತ್ತು. ಪ್ರಿಯಾಂಶ್ 24 ರನ್ ಕಾಣಿಕೆ ನೀಡಿದರೆ, ಪ್ರಬಸಿಮ್ರನ್ 26 ರನ್ ಸಿಡಿಸಿ ಔಟಾದರು. ಆದರೆ ಜೋಶ್ ಇಂಗ್ಲಿಸ್ ಆಟ ಆರ್‌ಸಿಬಿಗೆ ತಲೆನೋವಾಗಿ ಪರಿಣಿಸಿತು. 4 ಸಿಕ್ಸರ್ ಮೂಲಕ ಇಂಗ್ಲಿಸ್ ಅಬ್ಬರಿಸಿದರು. ಈ ಮೂಲಕ 39 ರನ್ ಸಿಡಿಸಿದರು. ಆದರೆ ನಾಯಕ ಶ್ರೇಯಸ್ ಅಯ್ಯರ್ 1 ರನ್ ಸಿಡಿಸಿ ಮುಗ್ಗರಿಸಿದರು. ನೆಹಾಲ್ ವಾದೆರಾ 15 ರನ್ ಸಿಡಿಸಿ ಔಟಾದರು. ಭರ್ಜರಿ ಸಿಕ್ಸರ್ ಮೂಲಕ ಅಬ್ಬರಿಸಿದ ಮಾರ್ಕಸ್ ಸ್ಟೊಯ್ನಿಸ್ ಮರು ಎಸೆದಲ್ಲಿ ವಿಕೆಟ್ ಕೈಚೆಲ್ಲಿದರು. ಶಶಾಂಕ್ ಸಿಂಗ್ ಹೋರಾಟ ನೀಡಿದರೂ ಪ್ರಯೋಜನವಾಗಲಿಲ್ಲ.

ಆರ್‌ಸಿಬಿ ಇನ್ನಿಂಗ್ಸ್

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದದಲ್ಲಿ ವಿಕೆಟ್ ಕಳೆದುಕೊಂಡು ನಿರೀಕ್ಷಿತ ರನ್ ಗಳಿಸಲು ಹೋರಾಟ ನಡೆಸಿತು. ಅಬ್ಬರದ ಬ್ಯಾಟಿಂಗ್ ಇಲ್ಲದಿದ್ದರೂ ಬೌಂಡರಿ ಸಿಕ್ಸರ್ ಮೂಲಕ ಆರ್‌ಸಿಬಿ 190 ರನ್ ಸಿಡಿಸಿತ್ತು. ಫಿಲ್ ಸಾಲ್ಟ್ 16 ರನ್ ಸಿಡಿಸಿ ಔಟಾದರು. ಸಾಲ್ಟ್ ಆರಂಭಿಕ ವಿಕೆಟ್ ಪತನ ಆರ್‌ಸಿಬಿ ರನ್‌ರೇಟ್ ಕಡಿತಗೊಳಿಸಿತು. ವಿರಾಟ್ ಕೊಹ್ಲಿ ಹಾಗೂ ಮಯಾಂಕ್ ಅಗರ್ವಾಲ್ ಜೊತೆಯಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು. ಆದರೆ ಇವರ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. ಮಯಾಂಕ್ ಅಗರ್ವಾಲ್ 24 ರನ್ ಸಿಡಿಸಿ ಮಿಂಚಿದರು. ನಾಯಕ ರಜತ್ ಪಾಟೀದಾರ್ 26 ರನ್ ಕಾಣಿಕೆ ನೀಡಿದರು. ಸತತ ವಿಕೆಟ್ ಪತನದ ನಡುವೆ ವಿರಾಟ್ ಕೊಹ್ಲಿ 43 ರನ್ ಸಿಡಿಸಿದರು. ಕೊಹ್ಲಿ ವಿಕೆಟ್ ಪತನ ತಂಡದ ಆತಂಕ ಹೆಚ್ಚಿಸಿತ್ತು. ಪ್ರಮುಖವಾಗಿ ಆರ್‌ಸಿಬಿ ರನ್‌ರೇಟ್ ಕುಸಿತಗೊಂಡಿತ್ತು. ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ ಜೊತೆಯಾಟದಿಂದ ಮತ್ತೆ ಆರ್‌ಸಿಬಿ ಹೋರಾಟ ನಡೆಸಿತು. ಲಿವಿಂಗ್‌ಸ್ಟೋನ್ 25 ರನ್ ಸಿಡಿಸಿದರು. ಇತ್ತ ಜಿತೇಶ್ ಶರ್ಮಾ 24 ರನ್ ಸಿಡಿಸಿ ಔಟಾದರು. ರೊಮಾರಿಯೋ ಶೆಫರ್ಡ್ 17 ರನ್ ಸಿಡಿಸಿದರು. ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಯಶ್ ದಯಾಳ್ ಹೋರಾಟದಿಂದ ಆರ್‌ಸಿಬಿ 9 ವಿಕೆಟ್ ಕಳೆದುಕೊಂಡು 190 ರನ್ ಸಿಡಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು
ಬೊಂಡಿ ಬೀಚ್ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಕ್ರಿಕೆಟಿಗ ವಾನ್, ಭಯಾನಕ ಘಟನೆ