
ಅಹಮ್ಮಾದಾಬಾದ್(ಜೂ.03) ಐಪಿಎಲ್ ಫೈನಲ್ ಪಂದ್ಯದ ರೋಚಕತೆ ಹೆಚ್ಚುತ್ತಿದೆ. ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದಿದ್ದರೂ 190 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ. ಫೈನಲ್ ಪಂದ್ಯ, ಅಹಮ್ಮದಾಬಾದ್‌ನ ಬ್ಯಾಟಿಂಗ್ ಪಿಚ್ ಕಾರಣ ಇದೀಗ ಆರ್‌ಸಿಬಿ ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿದೆ.190 ರನ್ ಆರ್‌ಸಿಬಿ ಡಿಫೆಂಡ್ ಮಾಡಿಕೊಳ್ಳುತ್ತಾ? ಕುತೂಹಲಗಳು ಹೆಚ್ಚಾಗುತ್ತಿದೆ. ಚೇಸಿಂಗ್ ತಂಡಕ್ಕೆ ಕೆಲ ಅಡ್ವಾಂಟೇಜ್ ಇರುವ ಕಾರಣ ಪೈಪೋಟಿ ಹೆಚ್ಚಾಗಲಿದೆ. ಆದರೆ ಆರ್‌ಸಿಬಿ ವೇಗಿ ಜೋಶ್ ಹೇಜಲ್‌ವುಡ್ ಆಡಿದ ಯಾವುದೇ ಫೈನಲ್ ಪಂದ್ಯ ಸೋತಿಲ್ಲ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ.
8 ಫೈನಲ್‌ನಲ್ಲಿ 8ರಲ್ಲಿ ಗೆಲುವು
ಆರ್‌ಸಿಬಿ ವೇಗಿ ಜೋಶ್ ಹೇಜಲ್‌ವುಡ್ ಅಂಡರ್ 19, ವಿಶ್ವಕಪ್, ಐಪಿಎಲ್ ಸೇರಿದಂತೆ ಸೇರಿದಂತೆ ಒಟ್ಟು 8 ಫೈನಲ್ ಪಂದ್ಯ ಆಡಿದ್ದಾರೆ. ಈ 8ರಲ್ಲೂ ಗೆಲುವು ಸಾಧಿಸಿದ್ದಾರೆ. ಇದೀಗ 9ನೇ ಫೈನಲ್ ಪಂದ್ಯ ಆಡುತ್ತಿದ್ದಾರೆ. ಈ ಪಂದ್ಯದಲ್ಲೂ ಜೋಶ್ ಹೇಜಲ್‌ವುಡ್ ತಮ್ಮ ರೆಕಾರ್ಡ್ ಮುಂದುವರಿಸುತ್ತಾರಾ ಅನ್ನೋ ಕುತೂಹಲ ಮನೆ ಮಾಡಿದೆ.
ಜೋಶ್ ಹೇಜಲ್‌ವುಡ್ ಪ್ರಮುಖ ಫೈನಲ್
2012ರಲ್ಲಿ ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಆಡಿದ್ದರು. ಸಿಡ್ನಿ ಸಿಕ್ಸರ್ ಪರ ಆಢಿದ್ದ ಜೋಶ್ ಹೇಜಲ್‌ವುಡ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದರು. ಇನ್ನು 2015ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್ ಆಗಿದ್ದ ಜೋಶ್ ಹೇಜಲ್‌ವುಡ್ ಟ್ರೋಫಿ ಸಂಭ್ರಮ ಆಚರಿಸಿದ್ದಾರೆ. 2021ರ ಐಪಿಎಲ್ ಟೂರ್ನಿಯಲ್ಲಿ ಜೋಶ್ ಹೇಜಲ್‌ವುಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. 2021ರಲ್ಲಿ ಸಿಎಸ್‌ಕೆ ಟ್ರೋಫಿ ಗೆದ್ದಿತ್ತು. 2021ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಈ ಬಾರಿ ಆಸ್ಟ್ರೇಲಿಯಾ ಟ್ರೋಫಿ ಗೆದ್ದಿತ್ತು. 2023ರಲ್ಲಿ ಜೋಶ್ ಹೇಜಲ್‌ವುಡ್ ವಿಶ್ವಕಪ ಟೂರ್ನಿ ಫೈನಲ್ ಪಂದ್ಯ ಆಡಿದ್ದರು. ಆಸ್ಟ್ರೇಲಿಯಾ ಟ್ರೋಫಿ ಗೆದ್ದಿತ್ತು. ಇದೀಗ ಆರ್‌ಸಿಬಿ ಪರ ಫೈನಲ್ ಪಂದ್ಯ ಆಡುತ್ತಿದ್ದಾರೆ.
ದುಬಾರಿಯಾಗುತ್ತಾ ಕ್ಯಾಚ್ ಡ್ರಾಪ್
190 ರನ್ ಚೇಸಿಂಗ್ ವೇಳೆ ಪಂಜಾಬ್ ಉತ್ತಮ ಆರಂಭ ಪಡೆದಿತ್ತು. ಬೌಂಡರಿ ಸಿಕ್ಸರ್ ಮೂಲಕ ಪಂಜಾಬ್ ಅಬ್ಬರಿಸಿತ್ತು. ಇದು ಆರ್‌ಸಿಬಿ ಆತಂಕ ಹೆಚ್ಚಿಸಿತ್ತು.ಇದರ ನಡುವೆ ಜೋಶ್ ಹೇಜಲ್‌ವುಡ್ ಎಸೆತದಲ್ಲಿ ಪ್ರಭಸಿಮ್ರನ್ ಸಿಡಿಸಿದ ಕ್ಯಾಚ್ ಡ್ರಾಪ್ ಆಗಿತ್ತು. ರೋಮಾರಿಯೋ ಶೆಫರ್ಡ್ ಬೌಂಡರಿ ಲೈನ್ ಬಳಿ ಕ್ಯಾಚ್ ಡ್ರಾಪ್ ಮಾಡಿದ್ದರು. ಈ ಕ್ಯಾಚ್ ದುಬಾರಿಯಾಗುತ್ತಾ? ಇದು ಸದ್ಯ ಚರ್ಚೆಯಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.