IPL 2023 ಹರಾಜಿನ ಬಳಿಕ ಆರ್‌ಸಿಬಿ ತಂಡ ಹೀಗಿದೆ, ಈ ಬಾರಿ ಇದೆಯಾ ಟ್ರೋಫಿ ಅವಕಾಶ?

Published : Dec 23, 2022, 08:54 PM IST
IPL 2023 ಹರಾಜಿನ ಬಳಿಕ ಆರ್‌ಸಿಬಿ ತಂಡ ಹೀಗಿದೆ, ಈ ಬಾರಿ ಇದೆಯಾ ಟ್ರೋಫಿ ಅವಕಾಶ?

ಸಾರಾಂಶ

ಐಪಿಎಲ್ ಮಿನಿ ಹರಾಜು ಮುಕ್ತಾಯಗೊಂಡಿದೆ. ಕಡಿಮೆ ಹಣದಲ್ಲಿ ಹರಾಜಿನಲ್ಲಿ ಪಾಲ್ಗೊಂಡ ಆರ್‌ಸಿಬಿ ಸಮಾಧಾನಕರ ಖರೀದಿ ಮಾಡಿದೆ. ನಿರೀಕ್ಷಿತ ಆಟಗಾರರ ಖರೀದಿ ಸಾಧ್ಯವಾಗಿಲ್ಲ. ಆದರೆ ತಂಡ ಸಮತೋಲನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆ.  

ಕೊಚ್ಚಿ(ಡಿ.23):   ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಹರಾಜು ಮುಕ್ತಾಯಗೊಂಡಿದೆ. 8.75 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲಿ ಬೇಡಿಕೆ ಆಟಗಾರರ ಖರೀದಿಗೆ ಮನಸ್ಸು ಮಾಡಲಿಲ್ಲ. ಇದಕ್ಕೆ ಹಣದ ಅಭಾವ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಅಂತಿಮ ಹಂತದಲ್ಲಿ ಮೂಲ ಬೆಲೆಯ ಅಸುಪಾಸಿನಲ್ಲಿ ಆಟಗಾರರ ಖರೀದಿಸಿದ ಕೋಟಾ ಭರ್ತಿ ಮಾಡಿಕೊಂಡಿದೆ. ಸಮರ್ಥ ಬ್ಯಾಟ್ಸ್‌ಮನ್ ಹುಡುಕಾಟದಲ್ಲಿದ್ದ ಆರ್‌ಸಿಬಿ 3.2 ಕೋಟಿ ರೂಪಾಯಿ ನೀಡಿ ವಿಲ್ಸ್ ಜಾಕ್ಸ್‌ನ ತಂಡಕ್ಕೆ ಸೇರಿಸಿಕೊಂಡಿದೆ. ಒಟ್ಟು 7 ಆಟಗಾರರನ್ನು ಆರ್‌ಸಿಬಿ ಖರೀದಿ ಮಾಡಿದೆ. ಇದರಲ್ಲಿ ಕರ್ನಾಟಕ ಮೂಲದ ಮನೋಜ್ ಭಂಡಾಜೆ ಕೂಡ ಸೇರಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇದೀಗ ಒಟ್ಟು 25 ಆಟಗಾರರಿದ್ದಾರೆ. ಇದರಲ್ಲಿ 17 ಭಾರತೀಯ ಆಟಗಾರರು ಹಾಗೂ 8 ವಿದೇಶಿ ಆಟಗಾರರು ಸೇರಿದ್ದಾರೆ. ಸದ್ಯ ಆರ್‌ಸಿಬಿ ಬಳಿ 1.75 ಕೋಟಿ ರೂಪಾಯಿ ಬಾಕಿ ಉಳಿದಿದೆ.

IPL Auction 2023 ಕೊನೆಗೂ ಕನ್ನಡಿಗನ ಖರೀದಿಸಿದ ಆರ್‌ಸಿಬಿ!

ಐಪಿಎಲ್ ಹರಾಜು 2023ರಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ವಿವರ:
ವಿಲ್ ಜಾಕ್ಸ್, 3.2 ಕೋಟಿ ರೂಪಾಯಿ
ರೀಸ್ ಟಾಪ್ಲೆ, 1.90 ಕೋಟಿ ರೂಪಾಯಿ
ಹಿಮಾಂಶು ಶರ್ಮಾ, 20 ಲಕ್ಷ ರೂಪಾಯಿ
ಮನೋಜ್ ಭಂಡಾಜೆ, 20 ಲಕ್ಷ ರೂಪಾಯಿ
ರಾಜನ್ ಕುಮಾರ್, 70 ಲಕ್ಷ ರೂಪಾಯಿ
ಸೋನು ಯಾದವ್, 20 ಲಕ್ಷ ರೂಪಾಯಿ
ಅವಿನಾಶ್ ಸಿಂಗ್, 60 ಲಕ್ಷ ರೂಪಾಯಿ

ಆರ್‌ಸಿಬಿ ತನ್ನಲ್ಲೇ ಉಳಿಸಿಕೊಂಡಿರುವ ಆಟಗಾರರ ವಿವರ:
ಫಾಫ್ ಡುಪ್ಲಸಿಸ್(ನಾಯಕ), ವಿರಾಟ್ ಕೊಹ್ಲಿ,  ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ವಾನಿಂಡು ಹಸರಂಗ, ದಿನೇಶ್ ಕಾರ್ತಿಕ್, ಶಹಬಾಜ್ ಅಹಮ್ಮದ್, ಅನೂಜ್ ರಾವತ್, ಅಕಾಶ್ ದೀಪ್, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಕರಣ್ ಶರ್ಮಾ, ಸಿದ್ದಾರ್ಥ್ ಕೌಲ್, ಡೇವಿಡ್ ವಿಲೆ, ರಜತ್ ಪಾಟಿದಾರ್

IPL AUCTION 2023 ಸ್ಯಾಮ್ TO ಗ್ರೀನ್, ಹರಾಜು ಮಿನಿಯಾದ್ರೂ ಧಾರಾಳವಾಗಿ ಕೊಟ್ರು ಮನಿ!

ಆರ್‌ಸಿಬಿ ತಂಡದಲ್ಲಿ ಸದ್ಯ ಅತ್ಯುತ್ತಮ ಪ್ರದರ್ಶನದ ಮೂಲಕ ಮ್ಯಾಚ್ ವಿನ್ನರ್‌ಗಳಾಗಿ ದಿನೇಶ್ ಕಾರ್ತಿಕ್, ಮೊಹಮ್ಮದ್ ಸಿರಾಜ್ ಹಾಗೂ ಶ್ರೀಲಂಕಾ ಸ್ಪಿನ್ನರ್ ವಾನಿಂಡು ಹಸರಂಗ ಗುರುತಿಸಿಕೊಂಡಿದ್ದಾರೆ. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ರಿಟೈನ್ ಮಾಡಿಕೊಂಡಿರುವ ಆರ್‌ಸಿಬಿಯಲ್ಲಿ ತಲೆನೋವು ಹೆಚ್ಚಾಗಿದೆ. ಸದ್ಯ ಮ್ಯಾಕ್ಸ್‌ವೆಲ್ ಕಾಲಿನ ಗಾಯದಿಂದ ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದಾರೆ. ಆದರೆ ಐಪಿಎಲ್ ಟೂರ್ನಿ ವೇಳೆಗೆ ಮ್ಯಾಕ್ಸ್‌ವೆಲ್ ಚೇತರಿಸಿಕೊಳ್ಳುವ ವಿಶ್ವಾಸ ಆರ್‌ಸಿಬಿಗಿದೆ. ಯುವ ಪ್ರತಿಭಾನ್ವಿತ ಕ್ರಿಕೆಟಿಗ ನ್ಯೂಜಿಲೆಂಡ್‌ನ ಫಿನ್ ಅಲೆನ್ ಕೂಡ ಆರ್‌ಸಿಬಿ ತಂಡ ಬಲ ಹೆಚ್ಚಿಸಿದ್ದಾರೆ. ಇದರ ಜೊತೆಗೆ ಕಳೆದ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿರುವ ರಜತ್ ಪಾಟಿದಾರ್ ಕೂಡ ಆರ್‌ಸಿಬಿ ಬಲ ಹೆಚ್ಚಿಸಿದ್ದಾರೆ.

ಕಳೆದ 15 ಆವತ್ತಿಗಳಲ್ಲಿ ಆರ್‌ಸಿಬಿ ತಂಡಕ್ಕೆ ಟ್ರೋಫಿ ಮರೀಚಿಕೆಯಾಗಿದೆ. ಪ್ರತಿ ಬಾರಿ ಈ ಸಲ್ ಕಪ್ ನಮ್ದೆ ಅನ್ನೋವ ಅಭಿಮಾನಿಗಳು ಇದೀಗ 2023ರ  ಐಪಿಎಲ್ ಆವೃತ್ತಿ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫಾಫ್ ಡುಪ್ಲಸಿಸ್ ನೇತೃತ್ವದ ಆರ್‌ಸಿಬಿ ಗೆಲುವಿನ ನಗೆ ಬೀರಲಿದೆ ಅನ್ನೋ ವಿಶ್ವಾಸ ಹೆಚ್ಚಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!