ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಲೋಗೋ ಭಾರಿ ಸದ್ದು ಮಾಡುತ್ತಿದೆ. IPL ಫ್ರಾಂಚೈಸಿ, ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಲೋಗೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದರ ನಡುವೆ ತಂಡದ ಹಳೇ ಬಾಸ್ ವಿಜಯ್ ಮಲ್ಯ ದೂರದ ಲಂಡನ್‌ನಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಲಂಡನ್(ಫೆ.15): ಐಪಿಎಲ್ ಟೂರ್ನಿಗೆ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಲೋಗೋ ಅನಾವರಣ ಮಾಡಿದೆ. ನೂತನ ಲೋಗೋ ಕುರಿತು RCB ತಂಡದ ಮಾಜಿ ಬಾಸ್ ವಿಜಯ್ ಮಲ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: IPL ಟೂರ್ನಿಗೂ ಮುನ್ನ ಹೊಸ ಲೋಗೋ ಅನಾವರಣ ಮಾಡಿದ RCB
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಲೋಗೋ ಅನಾವರಣ ಬೆನ್ನಲ್ಲೇ ತಂಡಕ್ಕೆ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದಾರೆ. ಹೊಸ ಲೋಗೋ ತಂಡದ ಅದೃಷ್ಠ ಬದಲಿಸಲಿ. ನೂತನ ಲೋಗೋ ಪ್ರಶಸ್ತಿ ಗೆಲುವಿಗೆ ಸಹಕಾರಿಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
Congratulations. Hope this helps in winning the IPL https://t.co/fy54wt3mNH
— Vijay Mallya (@TheVijayMallya)ಇದನ್ನೂ ಓದಿ: RCB ಹೊಸ ಲೋಗೋ ಟ್ರೋಲ್ ಮಾಡಿದ ಜಸ್ಪ್ರೀತ್ ಬುಮ್ರಾ
ಇನ್ನು ನಾಯಕ ವಿರಾಟ್ ಕೊಹ್ಲಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಮಲ್ಯ ಸಲಹೆ ನೀಡಿದ್ದಾರೆ. ಅಂಡರ್ 19 ತಂಡದಲ್ಲಿದ್ದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡ ಸೇರಿಕೊಂಡರು . ಇದೀಗ ವಿರಾಟ್ ಕೊಹ್ಲಿ ಭಾರತ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಕೊಹ್ಲಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕಿದೆ. ಎಲ್ಲಾ ಆರ್‌ಸಿಬಿ ಅಭಿಮಾನಿಗಳು ಪ್ರಶಸ್ತಿ ಕೊರಗನ್ನು ನೀಗಿಸಲು ಬಯಸುತ್ತಿದ್ದಾರೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.
Virat came to RCB from the India U 19 squad. Virat has led India to great success and has been an outstanding performer himself. Leave it to him and give him the freedom. All RCB fans want that long overdue IPL trophy. https://t.co/RT7cNdWgWN
— Vijay Mallya (@TheVijayMallya)ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೈ ಮುತ್ತೂಟ್ ಫಿನ್‌ಕಾರ್ಪ್ ಜೊತೆ ಒಪ್ಪಂದ ಮಾಡಿಕೊಂಡಿದೆ. 3 ವರ್ಷಗಳ ಕಾಲ ಮುತ್ತೂಟ್ ಜೊತೆ ಟೈಟಲ್ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದೆ.