2011ರ ವಿಶ್ವಕಪ್ ಟೂರ್ನಿ ಗೆಲುವಿನ ರೂವಾರಿ ಯುವರಾಜ್ ಸಿಂಗ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರೂ ಹೋರಾಟ ಮಾಡಿದ್ದರು. ಬಳಿಕ ಸಾವನ್ನೇ ಗೆದ್ದು ಬಂದು ಮತ್ತೆ ತಂಡ ಸೇರಿ ಅಬ್ಬರಿಸಿದ ಕ್ರಿಕೆಟಿಗ ಯುವರಾಜ್ ಸಿಂಗ್. ಇದೀಗ ಯುವಿ ರೀತಿಯಲ್ಲೇ ಕ್ಯಾನ್ಸರ್ ಗೆದ್ದು ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾನೆ. ಈ 18ರ ಪೋರನ ಜರ್ನಿ ಇಲ್ಲಿದೆ.
ಬಾರಮತಿ(ಫೆ.14): ಯುವರಾಜ್ ಸಿಂಗ್ ಅದೆಂಥಾ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದನ್ನು ವಿವರಿಸಬೇಕಿಲ್ಲ.ಟಿ20 ವಿಶ್ವಕಪ್ ಟೂರ್ನಿಯಲ್ಲಿ ಓವರ್‌ನ 6 ಎಸೆತಗಳನ್ನೂ ಸಿಕ್ಸರ್ ಸಿಡಿಸಿದ ಕ್ರಿಕೆಟಿಗ. 2011ರ ವಿಶ್ವಕಪ್ ಟೂರ್ನಿ ವೇಳೆಗೆ ಯುವಿ ದೇಹಕ್ಕೆ ಕ್ಯಾನ್ಸರ್ ರೋಗ ಪ್ರವೇಶಿಸಿತ್ತು. ಇದ್ಯಾವುದನ್ನು ಲೆಕ್ಕಿಸದೆ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೀರ. ಇದೀಗ ಇದೇ ರೀತಿ 15ನೇ ವರ್ಷಕ್ಕೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಸಾವನ್ನೇ ಗೆದ್ದು ಬಂದ ಉತ್ತರ ಖಂಡ ರಣಜಿ ತಂಡ 18ರ ಪೋರ ಕಮಲ್ ಸಿಂಗ್ ಜರ್ನಿ ಎಲ್ಲರಿಗೂ ಸ್ಫೂರ್ತಿಯಾಗಿದೆ.
ಇದನ್ನೂ ಓದಿ: ಬರೋಡ ಬಗ್ಗುಬಡಿದು ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ಲಗ್ಗೆ
ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಕಮಲ್ ಸಿಂಗ್ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. 160 ಎಸೆತ ಎದುರಿಸಿದ 17 ಬೌಂಡರಿ ನೆರವಿನಿಂದ 101 ರನ್ ಸಿಡಿಸಿದರು. ಕಮಲ್ ಸಿಂಗ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಮಲ್ ಸಿಂಗ್‍ಗೆ 15 ವರ್ಷವಿದ್ದಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ನೋಯ್ಡಾದ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದ ಬಳಿಕ ಕಮಲ್ ತಂದೆಗೆ ಆಘಾತಕಾರಿ ವರದಿ ಬಹಿರಂಗ ಪಡಿಸಿದ್ದರು. ನಿಮ್ಮ ಮಗನಿಗೆ ಕ್ಯಾನ್ಸರ್ ಇದೆ, ಈಗಲೇ ಚಿಕಿತ್ಸೆ ಆರಂಭಿಸಿ ಎಂದು ಸೂಚಿಸಿದ್ದರು.
ಇದನ್ನೂ ಓದಿ: ಯೋ-ಯೋ ಟೆಸ್ಟ್ ಪಾಸಾದ್ರೂ ಆಯ್ಕೆ ಮಾಡಲಿಲ್ಲ; ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ!
47% ರಕ್ತಕ್ಕೆ ಕ್ಯಾನ್ಸರ್ ಆವರಿಸಿತ್ತು. ಚಿಕಿತ್ಸೆ ಆರಂಭಿಸಿದ ಕಮಲ್ ಸಿಂಗ್ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. 1 ವರ್ಷ ಸತತ ಚಿಕಿತ್ಸೆ ಪಡೆದ ಕಮಲ್ ಸಿಂಗ್,ಕ್ಯಾನ್ಸರ್ ಗೆದ್ದ ಹೊರಬಂದಿದ್ದರು. ಕ್ಯಾನ್ಸರ್ ಮಹಾಮಾರಿ ಬಂದ ಮೂರೇ ವರ್ಷಕ್ಕೆ ಕಮಲ್ ಸಿಂಗ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.