ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರೇಮಿಗಳ ದಿನ ಅಭಿಮಾನಿಗಳಿಗೆ ಹೊಸ ಲೋಗೋ ಬಿಡುಗಡೆ ಮಾಡಿ ಸರ್ಪ್ರೈಸ್ ನೀಡಿತ್ತು. ಹೊಸ ಲೋಗೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಆರ್‌ಸಿಬಿ ಲೋಗೋ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು(ಫೆ.15): 2020ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB) ಹಲವು ಬದಲಾವಣೆ ಮಾಡಿದೆ. ಈ ಮೂಲಕ ಪ್ರಶಸ್ತಿ ಕೊರಗನ್ನು ನೀಗಿಸಲು ರೆಡಿಯಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ RCB ಹೊಸ ಲೋಗೋ ಅನಾವರಣ ಮಾಡಿತು. ಇದಕ್ಕೆ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಟೋಲ್ ಮಾಡಿದ್ದಾರೆ.
If you know, you know. #PlayBold #NewDecadeNewRCB
A post shared by Royal Challengers Bangalore (@royalchallengersbangalore) on Feb 13, 2020 at 11:36pm PST
ಇದನ್ನೂ ಓದಿ: IPL ಟೂರ್ನಿಗೂ ಮುನ್ನ ಹೊಸ ಲೋಗೋ ಅನಾವರಣ ಮಾಡಿದ RCB
RCB ತಂಡದ ಹೊಸ ಲೋಗೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಲೋಗೋ, ಉತ್ತಮ ಸರಣಿ ತಂಡದ್ದಾಗಲಿ ಎಂದು ಹಾರೈಸಿದ್ದಾರೆ. ಇತ್ತ ಬುಮ್ರಾ ಲೋಗೋ ಕೂಲ್ ಆಗಿದೆ. ಆದರೆ ನನ್ನ ಬೌಲಿಂಗ ಶೈಲಿ ರೀತಿಯಲ್ಲಿದೆ ಎಂದಿದ್ದಾರೆ.
ಬುಮ್ರಾ ಪ್ರತಿಕ್ರಿಯೆ ಬಳಿಕ ಮುಂಬೈ ಇಂಡಿಯನ್ಸ್ ಅಭಿಮಾನಿಗಳು, ಲೋಗೋ ಡಿಸೈನ್ ಕಾಂಪಿ ಮಾಡಲಾಗಿದೆಯಾ ಎಂದು RCB ತಂಡವನ್ನು ಪ್ರಶ್ನಿಸಿದ್ದಾರೆ.
IPL ಟೂರ್ನಿಯಲ್ಲಿ 3 ಬಾರಿ ಫೈನಲ್ ಪ್ರವೇಶಿಸಿರುವ RCB ತಂಡ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಕಳೆದೆರಡು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಿಂದ ಹೊರಬಿದ್ದಿತ್ತು.