
ಬೆಂಗಳೂರು(ಮೇ.04) ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಇನ್ನು ನಿಂತಿಲ್ಲ. ಐಪಿಎಲ್ ಟೂರ್ನಿಯಲ್ಲೇ ಬದ್ಧವೈರಿಗಳ ರೀತಿ ಹೋರಾಡುವ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಕೊನೆಯ ಎಸೆತದಲ್ಲಿ ಆರ್‌ಸಿಬಿ ಗೆದ್ದು ಬೀಗಿತ್ತು. ಸಿಎಸ್‌ಕೆ ವಿರುದ್ದದ ಗೆಲುವು ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಇತ್ತ ಆರ್‌ಸಿಬಿ ಪ್ಲೇ ಸ್ಥಾನ ಖಚಿತಪಡಿಸಿಕೊಳ್ಳುತ್ತ ಸಾಗುತ್ತಿದೆ. ಪ್ರತಿ ಎದುರಾಳಿಗಳ ವಿರುದ್ದ ವಿರಾಟ್ ಕೊಹ್ಲಿ ಅಗ್ರೆಸ್ಸೀವ್ ಸೆಲೆಬ್ರೇಶನ್ ಇದ್ದೇ ಇರುತ್ತೆ. ಒಂದು ವಿಕೆಟ್ ಪಡೆದಾಗಲು ಕೊಹ್ಲಿ ಸಂಭ್ರಮ ಮಕ್ಕಳ ಜೋಶ್‌ಗಿಂತ ಡಬಲ್ ಇರುತ್ತೆ. ಆದರೆ ಚೆನ್ನೈ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾತ್ರ ಫುಲ್ ಡಲ್ ಆಗಿದ್ದರು. ಮುಖದಲ್ಲಿ ನಗುವೇ ಇರಲಿಲ್ಲ. ಗೆದ್ದಾಗ ವಿರಾಟ್ ಕೊಹ್ಲಿ ಎಂದಿನಂತೆ ಸಂಭ್ರಮಿಸಲಿಲ್ಲ. ಡ್ರೆಸ್ಸಿಂಗ್ ರೂಂನಲ್ಲೂ ಕೊಹ್ಲಿ ಮುಖದಲ್ಲಿ ಸಣ್ಣ ನಗು ಕಾಣಲಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿರಾಟ್ ಕೊಹ್ಲಿಗೆ ಏನಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಈ ರೀತಿ ನೋಡಲು ಸಾಧ್ಯವಿಲ್ಲ. ಕೊಹ್ಲಿಗೆ ಏನಾಗಿದೆ? ನಾವೆಲ್ಲ ಕೊಹ್ಲಿ ಜೊತೆಗಿದ್ದೇವೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿಎಸ್‌ಕೆ ವಿರುದ್ಧ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಆದರೆ ಕೊಹ್ಲಿ ತಮ್ಮ ಅರ್ಧಶತಕವನ್ನು ಸಂಭ್ರಮಿಸಲಿಲ್ಲ. ಇನ್ನು ಸಿಎಸ್‌ಕೆ ವಿಕೆಟ್ ಕಳಚಿ ಬಿದ್ದಾಗಲೂ ಕೊಹ್ಲಿ ಎಂದಿನ ಸಂಭ್ರಮ ಇರಲಿಲ್ಲ. ಕೊಹ್ಲಿ ಆನ್‌ಫೀಲ್ಡ್‌ನಲ್ಲಿನ ಜೋಶ್ ಇಡೀ ತಂಡವನ್ನೇ ಹುರಿದುಂಬಿಸುತ್ತೆ. ಆದರೆ ಸಿಎಸ್‌ಕೆ ವಿರುದ್ಧ ಕೊಹ್ಲಿ ಕಂಪ್ಲೀಟ್ ಆಫ್ ಆಗಿದ್ದರು ಎಂದು ಅಭಿಮಾನಿಗಳು ಗುರುತಿಸಿದ್ದಾರೆ.
RCB ಗೆದ್ದ ಖುಷಿಗಿಂತ CSK ಸೋತ ದುಃಖದಲ್ಲಿ ಬೆಂಗಳೂರು ತಂಡದ ಬಗ್ಗೆ ಸೆಹ್ವಾಗ್ ಅಚ್ಚರಿ ಹೇಳಿಕೆ
ಮೀಮ್ಸ್‌ನಿಂದ ಬೇಸತ್ತಿದ್ದಾರ ವಿರಾಟ್ ಕೊಹ್ಲಿ
ಬೆಂಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಎಂದಿನಂತೆ ಇರಲಿಲ್ಲ ಅನ್ನೋದು ಸ್ಪಷ್ಟ. ಆದರೆ ಇದಕ್ಕೆ ಕಾರಣವೇನು? ಎಂದು ಹಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ವಿರಾಟ್ ಕೊಹ್ಲಿ ವಿರುದ್ದ ಹರಿದಾಡಿದ ಮೀಮ್ಸ್‌ನಿಂದ ಬೇಸತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಿಂದ ಅಚಾನಕ್ಕಾಗಿ ನಟಿ ಅವನೀತ್ ಕೌರ್ ಫೋಟೋ ಒಂದನ್ನು ಲೈಕ್ ಮಾಡಲಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ವಿರಾಟ್ ಕೊಹ್ಲಿ ಇದೀಗ ಅನುಷ್ಕಾ ಬದಲು ಬೇರೊಂದು ನಟಿಯನ್ನು ಲೈಕ್ ಮಾಡಿದ್ದಾರೆ ಎಂದು ಹಲವು ಮೀಮ್ಸ್ ಹರಿದಾಡಿತ್ತು. ಈ ವಿಚಾರ ವಿರಾಟ್ ಕೊಹ್ಲಿ ವೈಯುಕ್ತಿಕ ಬದುಕಿನ ಮೇಲೂ ಪರಿಣಾಮ ಬೀರಿದೆ ಅನ್ನೋ ಮಾತುಗಳು ಕೇಳಿಬಂದಿತ್ತು.
ಸ್ಪಷ್ಟನೆ ನೀಡಿದರೂ ನಿಲ್ಲದ ಟ್ರೋಲ್
ಮೀಮ್ಸ್, ಟ್ರೋಲ್ ಹೆಚ್ಚಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದರು. ಇನ್‌ಸ್ಟಾಗ್ರಾಂ ಫೀಡ್ ಕ್ಲಿಯರ್ ಮಾಡುತ್ತಿದ್ದಾಗ ಅಲ್ಗೋರಿದಂನಲ್ಲಿ ಆದ ತಪ್ಪಿನಿಂದ ಆಗಿರುವ ಸಾಧ್ಯತೆ ಇದೆ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ. ದಯವಿಟ್ಟು ಊಹಾಪೋಹಳನ್ನ ಹರಡಬೇಡಿ, ಅರ್ಥಮಾಡಿಕೊಂಡಿದ್ದಕ್ಕ ಧನ್ಯವಾದಗಳು ಎಂದು ಕೊಹ್ಲಿ ಇನ್‌ಸ್ಟಾ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ್ದರು. ಆದರೂ ಮೀಮ್ಸ್ ಮಾತ್ರ ಹರಿದಾಡುತ್ತಲೇ ಇತ್ತು. ಕೊಹ್ಲಿ ಸ್ಪಷ್ಟನೆಯನ್ನು ಟ್ರೋಲ್ ಮಾಡಲಾಗಿತ್ತು. ಈ ಬೆಳವಣಿಗೆಯಿಂದ ವಿರಾಟ್ ಕೊಹ್ಲಿ ಬೇಸರವಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
ಮೀಮ್ಸ್ ಟ್ರೋಲ್‌ನಿಂದ ವಿರಾಟ್ ಕೊಹ್ಲಿ ಕುಗ್ಗುವ ವ್ಯಕ್ತಿಯಲ್ಲಿ. ಕೊಹ್ಲಿ ಇತರ ಯಾವುದೇ ಕಾರಣಗಳಿಂದ ಬೇಸತ್ತಿದ್ದಾರೆ. ಆದರೆ ಆರ್‌ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ಬೆಂಬಲಕ್ಕಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲವನ್ನು ಮರೆತೆ ಮುಂದೆ ಸಾಗುವಂತೆ ಸಲಹೆ ನೀಡಿದ್ದಾರೆ.
ಕಳಪೆ ದಾಖಲೆ ಅಳಿಸಿ ಹಾಕಿದ್ದಕ್ಕೆ ಖುಷಿಯಿಂದ ಕುಣಿದಾಡಿದ RCB ಫ್ಯಾನ್ಸ್; ಏನದು ರೆಕಾರ್ಡ್?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.