
ನವದೆಹಲಿ: ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ನಕಾರಾತ್ಮಕ ಟಿಪ್ಪಣಿ ಮಾಡಿದ್ದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇದೀಗ ಉಲ್ಟಾ ಹೊಡೆದಿದ್ದಾರೆ. ಸಂದರ್ಶನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕಪ್ ಗೆಲ್ಲಲಿ ಎಂದು ಇಡೀ ವಿಶ್ವವೇ ಬಯಸುತ್ತಿದೆ ಎಂದು ಹೇಳಿದ್ದಾರೆ. ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವೆ ಪಂದ್ಯ ನಡೆದಿತ್ತು. 2 ಅಂತರಗಳಿಂದ ಪಂದ್ಯವನ್ನು ತನ್ನದಾಗಿಸಿಕೊಂಡ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದ ವಿಶ್ಲೇಷಣೆ ಮಾಡುತ್ತಿರುವ ಸಂದರ್ಭದಲ್ಲಿ ವೀರೇಂದ್ರ ಸೆಹ್ವಾಗ್, ಯಾರು ಎಲ್ಲಿ ತಪ್ಪು ಮಾಡಿದ್ರು ಎಂಬುದನ್ನು ಹೇಳಿದ್ದಾರೆ.
ಇಂದಿನ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯ ಒಂದು ರೀತಿ ಸಿನಿಮಾದಂತಿತ್ತು. ಈ ಸಿನಿಮಾದಲ್ಲಿ ಕಾಮಿಡಿ, ರೊಮ್ಯಾನ್ಸ್, ಆಕ್ಷನ್, ಥ್ರಿಲರ್ ಮತ್ತು ಸಸ್ಪೆನ್ಸ್ ಎಲ್ಲವೂ ಇತ್ತು. ಒಂದು ಸಿನಿಮಾದಲ್ಲಿ ನೋಡಲು ಏನೆಲ್ಲಾ ಬಯಸುತ್ತವೆಯೋ ಆ ಎಲ್ಲಾ ಅಂಶಗಳು ಇಂದಿನ ಪಂದ್ಯದಲ್ಲಿತ್ತು. ಆರ್‌ಸಿಬಿ 200ರ ಗಡಿ ದಾಟಲ್ಲ ಅಂತ ಅನ್ನಿಸಿತ್ತು. ಆದ್ರೆ ಕೊನೆಯ 2 ಓವರ್‌ಗಳಲ್ಲಿ ಆರ್‌ಸಿಬಿ ತನ್ನ ಮೊತ್ತಕ್ಕೆ 55 ರನ್‌ಗಳನ್ನು ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಿಂದ ಒನ್ ಸೈಡ್ ಮ್ಯಾಚ್‌ನಂತೆ ಬಿಂಬಿತವಾಯ್ತು.
ಚೆನ್ನೈ ಬ್ಯಾಟಿಂಗ್ ಆರಂಭಿಸಿದಾಗ ಎರಡು ವಿಕೆಟ್‌ಗಳು ಬಿದ್ದವು. ನಂತರ ಆಯುಷ್ ಮ್ಹಾತ್ರೆ ಮತ್ತು ರವೀಂದ್ರ ಜಡೇಜಾ ದೃಢವಾಗಿ ನಿಂತು ಬ್ಯಾಟ್ ಬೀಸಲಾರಂಭಿಸಿದರು. ಕೊನೆಯ ಮೂರು ಎಸೆತಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಕ್ಸ್ ಅಥವಾ ಫೋರ್ ಅವಶ್ಯಕತೆ ಇತ್ತು. ಆದರೆ ಕೇವಲ ಸಿಂಗಲ್ ರನ್ ಮಾತ್ರ ಕಲೆ ಹಾಕುವಲ್ಲಿ ಜಡೇಜಾ ಮತ್ತು ಶಿವಂ ದುಬೆ ಶಕ್ತರಾದರು. ಈ ಬಾರಿ ಆರ್‌ಸಿಬಿ ಆತ್ಮವಿಶ್ವಾಸದ ಪ್ರದರ್ಶನ ಮತ್ತು ಅದೃಷ್ಟದಿಂದಾಗಿ ಭಿನ್ನವಾಗಿ ಕಾಣುತ್ತಿದೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಆದ್ರೆ ಸಂದರ್ಶನದಲ್ಲಿ ಆರ್‌ಸಿಬಿ ಗೆದ್ದ ಖುಷಿಗಿಂತ ಸಿಎಸ್‌ಕೆ ಸೋತ ಬೇಸರ ವೀರೆಂದ್ರ ಸೆಹ್ವಾಗ್ ಮಾತುಗಳಲ್ಲಿ ಕಾಣಿಸುತ್ತಿತ್ತು.
ಈ ಹಿಂದೆ ಆರ್‌ಸಿಬಿಯನ್ನು ಟ್ರೋಲ್ ಮಾಡಿದ್ದ ಸೆಹ್ವಾಗ್!
ಆರ್‌ಸಿಬಿ ಐಪಿಎಲ್ 2025 ರ ಟೇಬಲ್ ಟಾಪರ್ ಆಗಿರುವುದಕ್ಕೆ ಕಾಲೆಳೆದಿದ್ದ ವೀರೇಂದ್ರ ಸೆಹ್ವಾಗ್, ‘ಬಡವರು’ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲಿರುತ್ತಾರೆ, ಪಂದ್ಯಾವಳಿ ಮುಂದುವರೆದಂತೆ ಅವರು ಎಷ್ಟು ಕಾಲ ಅಗ್ರಸ್ಥಾನದಲ್ಲಿರುತ್ತಾರೆ ಎಂದು ಅವರಿಗೆ ತಿಳಿದಿಲ್ಲ ಎಂದು ಬೆಂಗಳೂರು ತಂಡವನ್ನು ತಮಾಷೆ ಮಾಡಿದ್ದರು.ಈ ಹೇಳಿಕೆಗೆ ಆರ್‌ಸಿಬಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಅವನೀತ್ ಕೌರ್ ಫೋಟೋ ಲೈಕ್ ಮಾಡಿ ಸ್ಪಷ್ಟನೆ ಕೊಟ್ಟರೂ ಕೊಹ್ಲಿ ಬೆಂಬಿಡದ ಮೀಮ್ಸ್
ಕೊಹ್ಲಿ ಈ ಯುಗದ ಶ್ರೇಷ್ಠ ಆಟಗಾರ
ವಿರಾಟ್ ಕೊಹ್ಲಿ ಬಗ್ಗೆ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಭವಿಷ್ಯದಲ್ಲಿ ಕೊಹ್ಲಿಯಂತಹ ಕ್ರಿಕೆಟಿಗರು ಬರಲ್ಲ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಕೊಹ್ಲಿ ಈ ಯುಗದ ಶ್ರೇಷ್ಠ ಆಟಗಾರ. ಎಲ್ಲಾ ಮಾದರಿಯಲ್ಲೂ ಸ್ಥಿರ ಆಟವಾಡುವ ಕೊಹ್ಲಿಯಂತಹ ಆಟಗಾರರು ಭವಿಷ್ಯದಲ್ಲಿ ಬರುತ್ತಾರೆ ಎಂದು ನನಗನಿಸುವುದಿಲ್ಲ’ ಎಂದಿದ್ದಾರೆ.
ನಿನ್ನೆಯ ಪಂದ್ಯದ ಬಗ್ಗೆ ಹರ್ಭಜನ್ ಸಿಂಗ್ ಹೇಳಿದ್ದೇನು?
ಸಿಎಸ್‌ಕೆ ಕೊನೆಯವರೆಗೂ ಉತ್ತಮ ಪ್ರದರ್ಶನ ನೀಡಿತು. ದೊಡ್ಡ ಸ್ಕೋರ್ ಆಗಿರೋದರಿಂದ ಆರ್‌ಸಿಬಿಗೆ ಗೆಲುವು ಸಿಕ್ಕಿದೆ. ಆರ್‌ಸಿಬಿಗೆ ಹೋಲಿಸಿದ್ರೆ ಸಿಎಸ್‌ಕೆ ಸಾಕಷ್ಟು ಬಲಿಷ್ಠವಾಗಿರಲಿಲ್ಲ. ಸಿಎಸ್‌ಕೆ ಆರಂಭದಿಂದ ಹಲವು ತಪ್ಪುಗಳನ್ನು ಮಾಡಿದ್ದರಿಂದ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಪಡೆದುಕೊಂಡಿದೆ. ಆರ್‌ಸಿಬಿ ತನ್ನ ಸಾಮರ್ಥ್ಯದಿಂದ ರೋಚಕ ಗೆಲುವನ್ನು ತನ್ನದಾಗಿಸಿಕೊಂಡಿದೆ. ಪಂದ್ಯ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆಗೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: RCB vs CSK ಮ್ಯಾಚ್ ವೇಳೆ ಬ್ಲಾಕ್ ಟಿಕೆಟ್ ಮಾರಾಟ, ಸಿಸಿಬಿ ಪೊಲೀಸರಿಂದ ನಾಲ್ವರ ಬಂಧನ, ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.