ಆರ್‌ಸಿಬಿ ಖರೀದಿ ಬಳಿಕ ಮತ್ತೊಂದು ಹೊಸ ಉದ್ಯಮ ಆರಂಭಿಸಿದ ಅನನ್ಯಾ ಬಿರ್ಲಾ, ಅಧಿಕೃತ ಘೋಷಣೆ

Published : Aug 04, 2026, 06:15 PM IST
Ananya Birla Lifestyle

ಸಾರಾಂಶ

ಆರ್‌ಸಿಬಿ ಖರೀದಿಸಿದ ಬಳಿಕ ಮಾಲಕಿ ಅನನ್ಯಾ ಬಿರ್ಲಾ ಹೊಸ ಉದ್ಯಮ ಆರಂಭಿಸಿದ್ದಾರೆ. ಭಾರತದ ಪ್ರಮುಖ ಎರಡು ಕ್ಷೇತ್ರಗಳಲ್ಲಿ ಅನನ್ಯಾ ಬಿರ್ಲಾ ಇದೀಗ ಮಿಂಚಲು ಸಜ್ಜಾಗಿದ್ದಾರೆ. ಬಿರ್ಲಾ ಆರಂಭಿಸಿದ ಹೊಸ ಉದ್ಯಮ ಯಾವುದು?

ಮುಂಬೈ (ಆ.04) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಿದ ಅನನ್ಯಾ ಬಿರ್ಲಾ ಇದೀಗ ಮತ್ತೊಂದು ಉದ್ಯಮ ಆರಂಭಿಸುತ್ತಿದ್ದಾರೆ. ಭಾರತದಲ್ಲಿ ಎರಡು ಕ್ಷೇತ್ರ ಒಂದಕ್ಕೊಂದು ಲಿಂಕ್ ಮಾತ್ರವಲ್ಲ, ಅತೀ ದೊಡ್ಡ ಕ್ಷೇತ್ರಗಳು. ಒಂದು ಕ್ರಿಕೆಟ್, ಮತ್ತೊಂದು ಸಿನಿಮಾ. ಇದೀಗ ಅನನ್ಯಾ ಬಿರ್ಲಾ ಈ ಎರಡು ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಆರ್‌ಸಿಬಿ ಖರೀದಿ ಮೂಲಕ ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಟ್ಟ ಅನನ್ಯಾ ಬಿರ್ಲಾ ಇದೀಗ ಬಿರ್ಲಾ ಸ್ಟುಡಿಯೋಸ್ ಆರಂಭಿಸಿದ್ದಾರೆ. ಈ ಮೂಲಕ ಸಿನಿಮಾ ನಿರ್ಮಾಣಕ್ಕೆ ಧುಮುಕಿದ್ದಾರೆ.

ಆದಿತ್ಯ ಬಿರ್ಲಾ ಗ್ರೂಪ್ ನಿರ್ದೇಶಕಿ ಅನನ್ಯಾ ಬಿರ್ಲಾ ಕಮರ್ಷಿಯಲ್ ಸೇರಿದಂತೆ ಹಲವು ಸಿನಿಮಾ ನಿರ್ಮಾಣಕ್ಕೆ ಬಿರ್ಲಾ ಸ್ಟುಡಿಯೋಸ್ ಆರಂಭಿಸಿದ್ದಾರೆ. ವಿಶೇಷ ಅಂದರೆ ಬಿರ್ಲಾ ಸ್ಟುಡಿಯೋಸ್ ಕೇವಲ ಹಿಂದಿ ಸಿನಿಮಾ ಮಾತ್ರವಲ್ಲ, ಇಂಗ್ಲೀಷ್, ಕನ್ನಡ, ಮಲೆಯಾಳಂ, ಗುಜರಾತಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಈ ಮೂಲಕ ಭಾರತದಲ್ಲಿ ಇದೀಗ ಸಿನಿಮಾ ನಿರ್ಮಾಣದಲ್ಲಿ ಬಿರ್ಲಾ ಸ್ಟುಡಿಯೋಸ್ ಮಹತ್ವದ ಹೆಜ್ಜೆ ಇಟ್ಟಿದೆ. ಬಿಗ್ ಬಜೆಟ್ ಮೂವಿಗಳನ್ನು ನಿರ್ಮಾಣ ಮಾಡುವ ಮೂಲಕ ಭಾರತದ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ.

ಅನನ್ಯಾ ಬಿರ್ಲಾಗೆ ಸಿನಿಮಾ ದಿಗ್ಗಜರಿಂದ ಶುಭಾಶಯ

ಅನನ್ಯಾ ಬಿರ್ಲಾ ತಮ್ಮ ಬಿರ್ಲಾ ಸ್ಟುಡಿಯೋಸ್ ಅಧಿಕೃತ ಘೋಷಣೆ ಮಾಡುತ್ತಿದ್ದಂತೆ ಸಿನಿಮಾ ದಿಗ್ಜರು ಶುಭಾಶಯ ಕೋರಿದ್ದಾರೆ. ಹೊಸ ಉದ್ಯಮಕ್ಕೆ ಅಭಿನಂದನೆಗಳು, ಉತ್ತಮ ಸಿನಿಮಾಗಳು ಮೂಡಿ ಬರಲಿ ಎಂದು ನಿರ್ದೇಶ ಕರಣ್ ಜೋಹರ್ ಶುಭಕೋರಿದ್ದಾರೆ. ಇತ್ತ ನಟ ಸಿದ್ಧಾರ್ಥ ಮಲ್ಹೋತ್ರ ಪ್ರತಿಕ್ರಿಯಿಸಿದ್ದು, ಸಿನಿಮಾ ಕ್ಷೇತ್ರಕ್ಕೆ ಸ್ವಾಗತ ಎಂದಿದ್ದಾರೆ. ಸಂಜಯ್ ದತ್ ಸೇರಿದಂತೆ ಹಲವು ಪ್ರಮುಖರು ಅನನ್ಯಾ ಬಿರ್ಲಾಗೆ ಶುಭಕೋರಿದ್ದಾರೆ.

ಬಿರ್ಲಾ ಸ್ಟುಡಿಯೋಸ್ ಅಧಿಕೃತವಾಗಿ ಆರಂಭಗೊಂಡಿದೆ. ಈ ಕುರಿತು ಮಾತನಾಡಿದ ಅನನ್ಯಾ ಬಿರ್ಲಾ, ಸಿನಿಮಾ ಅತ್ಯಂತ ಪ್ರಬಲ ಮಾಧ್ಯವಾಗಿದೆ. ಅತೀ ಹೆಚ್ಚು ಮಂದಿ ಇಷ್ಟಪಡುವ ಕ್ಷೇತ್ರವಾಗಿದೆ. ಹಲವು ವೈವಿದ್ಯತೆಯ ಭಾರತದಲ್ಲಿ ಅಸಂಖ್ಯಾತ ಕತೆಗಳಿವೆ. ಬಹುತೇಕರಿಗೆ ತಿಳಿದಿಲ್ಲ ಹಲವು ರೋಚಕ ಕತೆಗಳನ್ನು ಭಾರತಕ್ಕೆ ಹೇಳಬೇಕಿದೆ. ಉತ್ತಮ ಕತೆಗಳು, ಸಂದೇಶಗಳು ಎಲ್ಲೆಡೆ ಪಸರಿಸಬೇಕು. ಬಿರ್ಲಾ ಸ್ಟುಡಿಯೋಸ್ ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಅನನ್ಯಾ ಬಿರ್ಲಾ ಹೇಳಿದ್ದಾರೆ.

ಫಿಲ್ಮ್ ಪ್ರೊಡಕ್ಷನ್‌ನಲ್ಲಿ ಮಹತ್ವದ ಹೆಜ್ಜೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಕಿ ಅನನ್ಯಾ ಬರ್ಲಾ ಸಿಂಗರ್ ಆಗಿಯೂ ಗಮನಸೆಳೆದಿದ್ದಾರೆ. ಕೆಲ ಆಲ್ಬಮ್ ಸಾಂಗ್ ಕೂಡ ರಿಲೀಸ್ ಮಾಡಿದ್ದಾರೆ. ಇನ್ನು ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಉದ್ಯಮಿಯಾಗಿ ಯಶಸ್ಸು ಕಂಡಿರುವ ಅನನ್ಯಾ ಬಿರ್ಲಾ ಮೊದಲಿನಿಂದಲೂ ಸಿನಿಮಾ ಕ್ಷೇತ್ರದ ಜೊತೆ ಬೆಸೆದುಕೊಂಡಿದ್ದಾರೆ. ಸಿನಿಮಾ ನಿರ್ಮಾಣ, ಸಿನಿಮಾ ಜೊತೆ ಕೆಲಸ ಅನನ್ಯಾ ಬಿರ್ಲಾಗೆ ಹೊಸದೇನಲ್ಲ. ಇದೀಗ ಅತೀ ದೊಡ್ಡ ಫಿಲ್ಮ್ ಪ್ರೊಡಕ್ಷನ್ ಕಂಪನಿ ಮೂಲಕ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Ind vs SL: ಶ್ರೀಲಂಕಾ ಸರಣಿಯಿಂದ ಔಟ್‌? ಕನ್ನಡಿಗನಿಗೆ ಸ್ಥಾನ! ಕೊನೆ ಕ್ಷಣದಲ್ಲಿ ಬಿಗ್‌ ಡ್ರಾಮಾ! ಆ ಸ್ಟಾರ್ ಯುವ ಆಟಗಾರನಿಗೆ ಆಗಿದ್ದೇನು?
ಕೊಹ್ಲಿ-ಗಂಭೀರ್ ಐಪಿಎಲ್ ಕಿರಿಕ್! 13 ವರ್ಷಗಳ ನಂತರ ಶಾಕಿಂಗ್ ಸತ್ಯ ಬಿಚ್ಚಿಟ್ಟ ಅಂಪೈರ್!