IPL Retention: ಐಪಿಎಲ್ ಸ್ಯಾಲರಿಯಲ್ಲಿ ಕೊಹ್ಲಿ, ಧೋನಿ ಹಿಂದಿಕ್ಕಿದ ಈ ಮೂವರು ಪ್ಲೇಯರ್ಸ್!

By Suvarna NewsFirst Published Dec 1, 2021, 6:36 PM IST
Highlights
  • IPL 2022 ಟೂರ್ನಿಗೆ ತಯಾರಿ ಚುರುಕು, ಹರಾಜಿಗೆ ಕೌಂಟ್‌ಡೌನ್
  • 8 ಫ್ರಾಂಚೈಸಿಗಳಿಂದ ರಿಟೈನ್ ಆಟಗಾರರ ಪಟ್ಟಿ ಬಿಡುಗಡೆ
  • ಕೊಹ್ಲಿ, ಧೋನಿ ಹಿಂದಿಕ್ಕಿ ಗರಿಷ್ಠ ಸ್ಯಾಲರಿ ಪಡೆದ ಮೂವರು ಕ್ರಿಕೆಟರ್ಸ್

ಮುಂಬೈ(ಡಿ.01):  IPL 2022 ಟೂರ್ನಿ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಮೊದಲನೆಯದಾಗಿ 10 ತಂಡಗಳು ಅಖಾಡಕ್ಕಿಳಿಯುತ್ತಿದೆ. ಇದಕ್ಕಾಗಿ ಮೆಘಾ ಹರಾಜು(IPL Auction) ನಡೆಯಲಿದೆ. ಹೀಗಾಗಿ ಹೊಸ ಮುಖಗಳು, ಹೊಸ ತಂಡ ರಚನೆಗೊಳ್ಳಲಿದೆ. ಈಗಾಗಲೇ 8 ಫ್ರಾಂಚೈಸಿಗಳು ರಿಟೈನ್ ಮಾಡಿದ ಆಟಗಾರರ ಪಟ್ಟಿ ಪ್ರಕಟಿಸಿದೆ. ಈ ರಿಟೈನ್(IPL Retention) ಬಳಿಕ ಗರಿಷ್ಠ ಸ್ಯಾಲರಿ(Salary) ಪಡೆಯುವ ಹೆಗ್ಗಳಿಗೆ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿಯಿಂದ ಕೈಜಾರಿದೆ. ಈ ಸ್ಥಾನವನ್ನು ರವೀಂದ್ರ ಜಡೇಜಾ, ರೋಹಿತ್ ಶರ್ಮಾ ಹಾಗೂ ರಿಷಬ್ ಪಂತ್ ಆಕ್ರಮಿಸಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ(Rohit Sharma), ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್(Rishabh pant) 16 ಕೋಟಿ ರೂಪಾಯಿ ಸ್ಯಾಲರಿ ಪಡೆಯಲಿದ್ದಾರೆ. ಕಳೆದ ಆವೃತ್ತಿವರೆಗೆ ಚೆನ್ನೈ ನಾಯಕ ಧೋನಿ(MS Dhoni), ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ(Virat Kohli) 16 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ 2022 ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವೇತನ ಪಡೆಯತ್ತಿದ್ದ ಆಟಗಾರರ ಸ್ಯಾಲರಿ ಕಟ್ ಆಗಿದೆ. 

IPL retention: ಜಡೇಜಾಗೆ 16 ಕೋಟಿ, ಧೋನಿಗೆ 12 ಕೋಟಿ ನಾಲ್ವರ ಉಳಿಸಿಕೊಂಡ ಸಿಎಸ್‌ಕೆ!

ಧೋನಿ ಸ್ಯಾಲರಿಯಲ್ಲಿ ಬರೋಬ್ಬರಿ 4 ಕೋಟಿ ರೂಪಾಯಿ ಕಟ್ ಆಗಿದೆ. 2022ರ ಐಪಿಎಲ್ ಟೂರ್ನಿಯಲ್ಲಿ ಧೋನಿ 12 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ. ಇನ್ನು ಕೊಹ್ಲಿ ಸ್ಯಾಲರಿ 1 ಕೋಟಿ ರೂಪಾಯಿ ಕಟ್ ಆಗಿದೆ. ಕೊಹ್ಲಿ 15 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ. ಕೊಹ್ಲಿ ಹಾಗೂ ಧೋನಿಗೆ ಕೊರೋನಾ ಟೈಮ್ ಸ್ಯಾಲರಿ ಕಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಮ್ಸ್ ಹರಿದಾಡುತ್ತಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ 14 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ. ಇನ್ನು ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸಾಮ್ಸನ್ ಕೂಡ 14 ಕೋಟಿ ರೂಪಾಯಿ ಪಡೆಯಲಿದ್ದಾರೆ. ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ, ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ , ಕೆಕೆಆರ್ ತಂಡದ ಆ್ಯಂಡ್ರೆ ರಸೆಲ್ ತಲಾ 12 ಕೋಟಿ ರೂಪಾಯಿ ಪಡೆಯಲಿದ್ದಾರೆ.

IPL retention: ಚಹಾಲ್, ಕನ್ನಡಿಗರ ಕೈಬಿಟ್ಟು, ಕೊಹ್ಲಿ ಸೇರಿ ಮೂವರ ಉಳಿಸಿಕೊಂಡ RCB!

ಇವರೆಲ್ಲರನ್ನು ಮೀರಿಸ್ತಾರಾ ಕೆಎಲ್ ರಾಹುಲ್?
ಕಳೆದೆರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ನಾಯಕನಾಗಿದ್ದ ಕೆಎಲ್ ರಾಹುಲ್(KL Rahul) ರಿಟೈನ್ ಮಾಡಿಕೊಳ್ಳಲು ಪಂಜಾಬ್ ಆಸಕ್ತಿ ವಹಿಸಿತ್ತು. ಗರಿಷ್ಠ ಮೊತ್ತ ನೀಡಿ ರಾಹುಲ್ ರಿಟೈನ್ ಮಾಡಲು ಬಯಸಿತ್ತು. ಕಳೆದ ಆವೃತ್ತಿಯಲ್ಲಿ ರಾಹುಲ್ 11 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ರಾಹುಲ್ ಪಂಜಾಬ್ ತಂಡಲ್ಲಿ ಇರಲು ಬಯಸಿಲ್ಲ. ತಾನು ಹರಾಜಿಗೆ ತೆರಳುವುದಾಗಿ ಪಟ್ಟು ಹಿಡಿದಿದ್ದಾರೆ. ಕೆಎಲ್ ರಾಹುಲ್ ಖರೀದಿಸಲು ಹೊಸ ಫ್ರಾಂಚೈಸಿ ಲಖ್ನೌ ಮುಂದಾಗಿದೆ ಅನ್ನೋ ವರದಿಗಳಿವೆ. ಲಖ್ನೌ  ತಂಡ 20 ಕೋಟಿ ರೂಪಾಯಿ ಆಫರ್ ನೀಡಿದೆ ಅನ್ನೋ ವರದಿ ಭಾರಿ ಸದ್ದು ಮಾಡುತ್ತಿದೆ. 20 ಕೋಟಿ ರೂಪಾಯಿಗೆ ರಾಹುಲ್ ಖರೀದಿ ನಡೆದರೆ ಅದು ಐಪಿಎಲ್ ಇತಿಹಾಸದಲ್ಲಿ ನಡೆದ ಅತೀ ಗರಿಷ್ಠ ಬಿಡ್ಡಿಂಗ್ ಆಗಲಿದೆ. ಈ ಹಿಂದಿನ ಎಲ್ಲಾ ದಾಖಲೆಗಳು ಪುಡಿ ಪುಡಿಯಾಗಲಿದೆ.

ಲಖ್ನೌ ಫ್ರಾಂಚೈಸಿ ಕೆಎಲ್ ರಾಹುಲ್‌ಗೆ ಆಫರ್ ನೀಡಿದೆ. ಈ ಕುರಿತು ಗಮನಹರಿಸುವಂತೆ ಪಂಜಾಬ್ ಕಿಂಗ್ಸ್ ಬಿಸಿಸಿಐಗೆ ಮೌಖಿಕ ದೂರು ನೀಡಿದೆ. ಈ ಆರೋಪ ನಿಜವಾದರೆ ಕೆಎಲ್ ರಾಹುಲ್ ಒಂದು ವರ್ಷ ಐಪಿಎಲ್ ಟೂರ್ನಿಯಿಂದ ನಿಷೇಧಕ್ಕೊಳಗಾಗಲಿದ್ದಾರೆ. 2010ರಲ್ಲಿ ರವೀಂದ್ರ ಜಡೇಜಾ ರಾಜಸ್ಥಾನ ರಾಯಲ್ಸ್ ಒಪ್ಪಂದವಿದ್ದರೂ ಮತ್ತೊಂದು ಫ್ರಾಂಚೈಸಿ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದರು. ಹೀಗಾಗಿ 1 ವರ್ಷ ನಿಷೇಧಕ್ಕೊಳಗಾಗಿದ್ದರು.

click me!