40 ವರ್ಷದ ಹಿಂದೆ ಪ್ರಶಸ್ತಿಯಾಗಿ ಗೆದ್ದ ಐಕಾನಿಕ್ ಆಡಿ ಕಾರನ್ನು ಡ್ರೈವ್ ಮಾಡಿದ ರವಿಶಾಸ್ತ್ರಿ: ಫೋಟೋ

By Anusha Kb  |  First Published Jan 15, 2025, 7:37 PM IST

ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರು 40 ವರ್ಷಗಳ ಹಿಂದೆ 1985 ರಲ್ಲಿ ಬೆನ್ಸನ್ & ಹೆಡ್ಜಸ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಫ್ ದಿ ಚಾಂಪಿಯನ್ ಪ್ರಶಸ್ತಿಯಾಗಿ ಪಡೆದ ಆಡಿ 100 ಕಾರನ್ನು ಮತ್ತೆ ಚಾಲನೆ ಮಾಡಿದ್ದಾರೆ.


ಮಾಜಿ ಕ್ರಿಕೆಟಿಗ ಅಲ್ರೌಂಡರ್‌, ಭಾರತ ತಂಡದ ಮಾಜಿ ಕೋಚ್ ಹಾಗೂ ಕ್ರಿಕೆಟ್‌ನ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿಯವರು ತಮಗೆ 40 ವರ್ಷಗಳ ಹಿಂದೆ ಉಡುಗೊರೆಯಾಗಿ ಸಿಕ್ಕ ಐತಿಹಾಸಿಕ ಆಡಿ 100 ಕಾರನ್ನು ಡ್ರೈವ್‌ ಮಾಡಿದ್ದು, ಅದರ ಫೋಟೋ ಹಾಗೂ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಅದರ ಜೊತೆಗಿನ ಸವಿನಯ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ. ಈ ಆಡಿ ಕಾರನ್ನು ಅವರಿಗೆ 1985ರಲ್ಲಿ ಬೆನ್ಸನ್ & ಹೆಡ್ಜೆಸ್‌ ಚಾಂಪಿಯನ್‌ಶಿಪ್‌ ಆಫ್ ಕ್ರಿಕೆಟ್‌ ಮ್ಯಾಚ್‌ನಲ್ಲಿ ಚಾಂಪಿಯನ್ ಆಫ್ ದಿ ಚಾಂಪಿಯನ್ ಆಗಿದ್ದಕ್ಕೆ ಉಡುಗೊರೆಯಾಗಿ ನೀಡಲಾಗಿತ್ತು. ಇದನ್ನು ಸ್ವೀಕರಿಸಿದ ವೇಳೆ ಇದೊಂದು ಪ್ರಶಸ್ತಿಯಾಗಿದ್ದಾರೆ. ಈಗ ಇದು ಐತಿಹಾಸಿಕ ಹಾಗೂ ರವಿಶಾಸ್ತ್ರಿಯವರ ನೆಚ್ಚಿನ ಕಾರು ಎನಿಸಿದೆ. 

ಈ ಕಾರಿನ ಜೊತೆ ತಾವಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರವಿಶಾಸ್ತ್ರಿ ಪೋಸ್ಟ್ ಮಾಡಿದ್ದಾರೆ. ಇದು ಭಾರತ ಉಪಖಂಡ ಪ್ರವೇಶಿಸಿದ ಆಡಿಯ ಮೊದಲ ಐಷಾರಾಮಿ ವಾಹನಗಳಲ್ಲಿ ಒಂದಾಗಿದೆ. ಗೌತಮ್ ಸಿಂಘಾನಿಯಾ ಮತ್ತು ಅವರ ಸೂಪರ್ ಕಾರ್ ಕ್ಲಬ್ ಗ್ಯಾರೇಜ್ ಆಯೋಜಿಸಿದ್ದ ರೇಮಂಡ್ 100 ಆಟೋಫೆಸ್ಟ್ ಕಾರು ಪ್ರದರ್ಶನಕ್ಕಾಗಿ ಈ ಕಾರನ್ನು ನವೀಕರಿಸಲಾಯಿತು ಮತ್ತು ಪ್ರದರ್ಶಿಸಲಾಯಿತು. ರೇಮಂಡ್ ಸಮೂಹದ ಶತಮಾನೋತ್ಸವದ ಸ್ಮರಣಾರ್ಥವಾಗಿ ಈ ಕಾರ್ಯಕ್ರಮವನ್ನು ಥಾಣೆಯಲ್ಲಿ ಆಯೋಜಿಸಲಾಗಿತ್ತು.

Tap to resize

Latest Videos

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ರವಿಶಾಸ್ತ್ರಿ, ನನ್ನ ಮಗು 25 ವರ್ಷದ ನಂತರ... ರೇಮಂಡ್ ಆಟೋ ಫೆಸ್ಟ್‌ನಲ್ಲಿ ಅದನ್ನು ಓಡಿಸಲು ರೋಮಾಂಚನಗೊಂಡಿದ್ದೇನೆ, ಭಾರತದ ವಿಂಟೇಜ್ ರತ್ನಗಳನ್ನು ಪುನಃಸ್ಥಾಪಿಸಲು @SinghaniaGautam ಅವರ ಅದ್ಭುತ ಕಾರ್ಯಕ್ಕೆ ಧನ್ಯವಾದಗಳು' ಎಂದು ಶಾಸ್ತ್ರಿ ತಮ್ಮ  ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ, ಇದರಲ್ಲಿ ರವಿ ಶಾಸ್ತ್ರಿ ವಿಂಟೇಜ್ ಆಡಿಯೊಂದಿಗೆ ಪೋಸ್ ನೀಡುವ ಮತ್ತು ಅದಕ್ಕೆ ಸಹಿ ಹಾಕುತ್ತಿರುವ ಫೋಟೋಗಳಿವೆ. 

ಗೌತಮ್ ಸಿಂಘಾನಿಯಾ ಆಯೋಜಿಸಿದ್ದ ಮೂರು ದಿನಗಳ ಕಾಲ ನಡೆದ ಆಟೋ ಪ್ರದರ್ಶನದಲ್ಲಿ ಶಾಸ್ತ್ರಿ ಅವರ ಆಡಿ ಕಾರು ಕೇಂದ್ರಬಿಂದುವಾಗಿತ್ತು. ಇಲ್ಲಿ 1985 ರ ಬೆನ್ಸನ್ & ಹೆಡ್ಜಸ್ ಕಪ್‌ನಲ್ಲಿ ಭಾರತದ ಯಶಸ್ಸನ್ನು ಸ್ಮರಿಸಲಾಯ್ತು. ಆ ಆವೃತ್ತಿಯ ಟೂರ್ನಮೆಂಟ್‌ನಲ್ಲಿ ಶಾಸ್ತ್ರಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರಿಗೆ ಈ ಕಾರನ್ನು ನೀಡಲಾಯಿತು. ಭಾರತ ತಂಡವು ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ ಶಾಸ್ತ್ರಿ ಅವರು ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಔಟ್‌ಫೀಲ್ಡ್‌ನಲ್ಲಿ ಕಾರನ್ನು ಓಡಿಸುತ್ತಿದ್ದರೆ, ಈ ಸಂಭ್ರಮಾಚರಣೆಯ ವೇಳೆ ಕಾರಿನ ಹುಡ್, ಟ್ರಂಕ್ ಮತ್ತು ಮೇಲ್ಭಾಗದಲ್ಲಿ ಕುಳಿತು ಭಾರತೀಯ ತಂಡ ಸಂಭ್ರಮಿಸಿದ ಅಪೂರ್ವ ಕ್ಷಣಗಳಿಗೆ ಈ ಕಾರು ಸಾಕ್ಷಿಯಾಗಿತ್ತು. 

40 ವರ್ಷಗಳ ಹಿಂದೆ ಭಾರತ ಗೆದ್ದಾಗ ಹೇಗೆ ಹೊಳೆಯಿತೋ ಹಾಗೆಯೇ ಈಗಲೂ ಹೊಳೆಯುತ್ತಿದೆ ಎಂಬುದು ನಂಬಲಾಗದ ಸಂಗತಿ ಎಂದು ಶಾಸ್ತ್ರಿ ತಮ್ಮ ಟ್ವಿಟ್ಟರ್  ಪೋಸ್ಟ್‌ನಲ್ಲಿ ಹೇಳಿದ್ದಾರೆ. 1985 ರಲ್ಲಿ ತಂಡದ ಒಟ್ಟಾರೆ ಯಶಸ್ಸಿಗೆ ಪ್ರತಿಫಲವಾಗಿ ಈ ಕಾರು ಸಿಕ್ಕಿದ ಕಾರಣ ಈ ಕಾರು ಇಡೀ ಭಾರತಕ್ಕೆ ಸೇರಿದ್ದು ಎಂದು ಶಾಸ್ತ್ರಿ ಬಹಳ ಹಿಂದಿನಿಂದಲೂ ಹೇಳುತ್ತಾ ಬಂದಿದ್ದಾರೆ. 

ಗೌತಮ್ ಸಿಂಘಾನಿಯಾ, ಶಾಸ್ತ್ರಿ ಮತ್ತು ಈ ಆಡಿ ನಡುವೆ ಒಂದು ಬಾಂಧವ್ಯವಿದೆ, ಸಿಂಘಾನಿಯಾದ ಸೂಪರ್ ಕಾರ್ ಕ್ಲಬ್ ಗ್ಯಾರೇಜ್ (SCCG)ನಲ್ಲಿ 2022 ರಲ್ಲಿ ಕಾರನ್ನು ಪುನಃಸ್ಥಾಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು., ವಾಹನದ ವರ್ಷ ಮತ್ತು ವಿರಳತೆಯು ಅದನ್ನು ಅಮೂಲ್ಯವಾಗಿಸಿದೆ. ರೇಮಂಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರಾಗಿರುವ ಸಿಂಘಾನಿಯಾ, 2020 ರಿಂದ ಐಷಾರಾಮಿ ವಾಹನಗಳ ಉತ್ಸಾಹಿಯಾಗಿ ಗ್ಯಾರೇಜ್ ಅನ್ನು ನಡೆಸುತ್ತಿದ್ದಾರೆ.

ಹಾಗೆಯೇ ಥಾಣೆಯಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಕಾರುಗಳು, ಮೋಟಾರ್‌ಸೈಕಲ್‌ಗಳು ಒಳಗೊಂಡಂತೆ 500 ಕ್ಕೂ ಹೆಚ್ಚು ಐಷಾರಾಮಿ ಆಟೋಮೊಬೈಲ್‌ಗಳು ಒಂದೇ ಸೂರಿನಡಿ ಸೇರಿದ್ದವು. ಇದನ್ನು ಭಾರತದಲ್ಲಿ ಇದುವರೆಗಿನ ಅತಿದೊಡ್ಡ ಆಟೋ ಶೋ ಎಂದು ಹೇಳಲಾಗುತ್ತಿದೆ. SCCG ರವಿಶಾಸ್ತ್ರಿ ಜೊತೆಗೆ, ಮೋಟಾರ್‌ಸ್ಪೋರ್ಟ್‌ನ ದೊಡ್ಡ ಹೆಸರುಗಳಾದ ಮಿಕಾ ಹಕ್ಕಿನೆನ್, ನರೇನ್ ಕಾರ್ತಿಕೇಯನ್ ಮತ್ತು ಗೌರವ್ ಗಿಲ್ ಅವರನ್ನು ಕೂಡ ಈ ಸಂದರ್ಭದಲ್ಲಿ ಸ್ಮರಿಸಿದೆ. 

India's – my baby after 25 years! Thrilled to drive it at the Raymond Auto Fest, thanks to 's incredible initiative to restore 's vintage gems. Unbelievable how it still shines like it did 40 years ago when India won it. pic.twitter.com/TSLUQmNLsP

— Ravi Shastri (@RaviShastriOfc)

 

click me!