ಪುಣೆಯಲ್ಲೂ ಲಂಕಾ ದಹನ; 2020ರ ಮೊದಲ ಸರಣಿ ಭಾರತದ ಕೈವಶ!

By Suvarna News  |  First Published Jan 10, 2020, 10:13 PM IST

2020ರಲ್ಲೂ ಭಾರತದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಈ ವರ್ಷದ ಮೊದಲ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ, ಟಿ20 ಸರಣಿ ತನ್ನದಾಗಿಸಿಕೊಂಡಿದೆ. 
 


ಪುಣೆ(ಜ.10): ಹೊಸ ವರ್ಷದ ಮೊದಲ ಸರಣಿ ಭಾರತದ ಪಾಲಾಗಿದೆ. ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ 78 ರನ್ ಗೆಲುವು ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು. ಇಷ್ಟೇ ಅಲ್ಲ 2020ರ ಅಭಿಯಾನವನ್ನು ಸರಣಿ ಗೆಲುವಿನೊಂದಿಗೆ ಆರಂಭಿಸಿತು.

202 ರನ್ ಬೃಹತ್ ಟಾರ್ಗೆಟ್ ಪಡೆದ ಶ್ರೀಲಂಕಾ ಯಾವ ಹಂತದಲ್ಲೂ ಭಾರತಕ್ಕೆ ಸವಾಲು ಒಡ್ಡಲಿಲ್ಲ. ಕಾರಣ ಭಾರತದ ಬಲಿಷ್ಠ ಬೌಲಿಂಗ್ ದಾಳಿ ವಿರುದ್ಧ ಹೋರಾಟ ನೀಡಲು ಲಂಕಾ ವಿಫಲವಾಯಿತು. ಕಾರಣ 5 ರನ್‌ಗೆ ಲಂಕಾ ಮೊದಲ ವಿಕೆಟ್ ಕಳೆದುಕೊಂಡಿತು. ಇಷ್ಟೇ ಅಲ್ಲ ಇಲ್ಲಿಂದ ಲಂಕಾ ತಂಡದ ವಿಕೆಟ್ ಪತನ ಆರಂಭಗೊಂಡಿತು.

Tap to resize

Latest Videos

ಧನುಷ್ಕಾ ಗುಣತಿಲಕ, ಆವಿಷ್ಕಾ ಫರ್ನಾಾಂಡೋ, ಕುಸಾಲ್ ಪರೇರಾ ಹಾಗೂ ಒಶಾಡೋ ಫರ್ನಾಂಡೋ ಯಾವ ಹೋರಾಟವನ್ನು ನೀಡಲಿಲ್ಲ. ಎಂಜಲೋ ಮ್ಯಾಥ್ಯೂಸ್ ಹಾಗೂ ಧನಂಜಯ ಡಿಸಿಲ್ವ ಅಲ್ಪ ಹೋರಾಟ ನೀಡಿದರು. ಮ್ಯಾಥ್ಯೂಸ್ 20 ಎಸೆತದಲ್ಲಿ 31 ರನ್ ಸಿಡಿಸಿ ಔಟಾದರು.

ಧನಂಜಯ ಹೋರಾಟ ಮುಂದುವರಿಸಿದರೆ, ದಸೂನ್ ಶನಕ, ವಾನಿಂಡು ಹಸರಂಗ, ಲಕ್ಸನ್ ಸಂದಕನ್ ನಿರಾಸೆ ಅನುಭವಿಸಿದರು. ಧನಂಜಯ್ ಡಿಸಿಲ್ವ 57 ರನ್ ಸಿಡಿಸಿ ಔಟಾದರು. ವಿಕೆಟ್ ಪತನದೊಂದಿಗೆ ಶ್ರೀಲಂಕಾ 15.5 ಓವರ್‌ಗಳಲ್ಲಿ 123 ರನ್ ಸಿಡಿಸಿ ಆಲೌಟ್ ಆಯಿತು. ಈ ಮೂಲಕ ಭಾರತ 78ರನ್ ಗಳಿಂದ ಪಂದ್ಯ ಗೆದ್ದುಕೊಂಡಿತು. 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. 

click me!