Ranji Trophy: ಸಮರ್ಥ್‌ ಆಕರ್ಷಕ ಶತಕ, ಕರ್ನಾಟಕ ಗೆಲುವಿನತ್ತ ದಾಪುಗಾಲು

By Kannadaprabha NewsFirst Published Dec 22, 2022, 9:31 AM IST
Highlights

ರಣಜಿ ಟ್ರೋಫಿಯಲ್ಲಿ ಪುದುಚೆರಿ ವಿರುದ್ದ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ
ಈ ಆವೃತ್ತಿಯ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಮಯಾಂಕ್‌ ಅಗರ್‌ವಾಲ್ ಪಡೆ
ಆಕರ್ಷಕ ಶತಕ ಸಿಡಿಸಿ ಮಿಂಚಿದ ರವಿಕುಮಾರ್ ಸಮರ್ಥ್

ಬೆಂಗಳೂರು(ಡಿ.22): 2022-23ರ ರಣಜಿ ಟ್ರೋಫಿ 2ನೇ ಪಂದ್ಯದಲ್ಲಿ ಕರ್ನಾಟಕ, ಪುದುಚೇರಿ ವಿರುದ್ಧ ಮೊದಲ ಇನ್ನಿಂಗ್‌್ಸ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ದಾಪುಗಾಲಿಟ್ಟಿದೆ. ಪುದುಚೇರಿಯ 170 ರನ್‌ಗೆ ಉತ್ತರವಾಗಿ ಮೊದಲ ಇನ್ನಿಂಗ್‌್ಸನಲ್ಲಿ ಕರ್ನಾಟಕ 304 ರನ್‌ಗೆ ಆಲೌಟಾಗಿ, 134 ರನ್‌ ಲೀಡ್‌ ಪಡೆಯಿತು. 2ನೇ ಇನ್ನಿಂಗ್‌್ಸ ಆರಂಭಿಸಿದ ಪುದುಚೇರಿ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 58 ರನ್‌ ಗಳಿಸಿದ್ದು, ಇನ್ನೂ 76 ರನ್‌ ಹಿನ್ನಡೆಯಲ್ಲಿದೆ.

ಮೊದಲ ದಿನ 1 ವಿಕೆಟ್‌ಗೆ 111 ರನ್‌ ಗಳಿಸಿದ್ದ ರಾಜ್ಯ ತಂಡ ಬುಧವಾರವೂ ಉತ್ತಮ ಆಟವಾಡಿತು. ಸತತ 2ನೇ ಶತಕ ಸಿಡಿಸಿದ ಆರ್‌.ಸಮರ್ಥ್‌ 137 ರನ್‌ಗೆ ಔಟಾದರೆ, ಮನೀಶ್‌ ಪಾಂಡೆ 45, ನಿಕಿನ್‌ ಜೋಸ್‌ 30 ರನ್‌ ಕೊಡುಗೆ ನೀಡಿದರು. ತಂಡದ ಕೊನೆ 5 ವಿಕೆಟ್‌ 24 ರನ್‌ಗಳಿಗೆ ಪತನಗೊಂಡಿತು. ಅಂಕಿತ್‌ ಶರ್ಮಾ 6 ವಿಕೆಟ್‌ ಪಡೆದರು. ಪುದುಚೇರಿ ತನ್ನ 2ನೇ ಇನ್ನಿಂಗ್‌್ಸನಲ್ಲೂ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. ಜಯ್‌ ಪಾಂಡೆ 25 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ವೈಶಾಖ್‌, ರೋನಿತ್‌, ಗೌತಮ್‌ ತಲಾ 1 ವಿಕೆಟ್‌ ಪಡೆದರು.

ಸ್ಕೋರ್‌: ಪುದುಚೇರಿ 170/10 ಮತ್ತು (2ನೇ ದಿನದಂತ್ಯಕ್ಕೆ) 58/3 (ಜಯ್‌ ಪಾಂಡೆ 25*, ರೋನಿತ್‌ 1-9, ವೈಶಾಕ್‌ 1-13), 
ಕರ್ನಾಟಕ 304/10 (ಸಮರ್ಥ್ 137, ಪಾಂಡೆ 45, ಅಂಕಿತ್‌ 6-60)

ಅಪಾಯಕಾರಿ ಪಿಚ್‌: ರಣಜಿ ಪಂದ್ಯ 2ನೇ ದಿನಕ್ಕೇ ಸ್ಥಗಿತ!

ನವದೆಹಲಿ: ಪಿಚ್‌ ಅಪಾಯಕಾರಿ ಎನಿಸಿದ ಕಾರಣ ಪಂಜಾಬ್‌-ರೈಲ್ವೇಸ್‌ ನಡುವಿನ ರಣಜಿ ಪಂದ್ಯ ಸ್ಥಗಿತಗೊಂಡ ಅಪರೂಪದ ಘಟನೆ ನಡೆದಿದೆ. ಗುರುವಾರ ಹೊಸ ಪಿಚ್‌ನಲ್ಲಿ ಪಂದ್ಯ ಆರಂಭಗೊಳ್ಳಲಿದ್ದು, 2 ದಿನಕ್ಕೆ ಸೀಮಿತಗೊಳಿಸಲಾಗಿದೆ. ನಿಗದಿಯಂತೆ ಪಂದ್ಯ ಶುಕ್ರವಾರ ಕೊನೆಗೊಳ್ಳಲಿದೆ.

ದೆಹಲಿಯ ಕರ್ನೈಲ್‌ ಸಿಂಗ್‌ ಮೈದಾನದಲ್ಲಿ ಮಂಗಳವಾರ ಪಂದ್ಯ ಆರಂಭಗೊಂಡಿತ್ತು. ಆದರೆ 103 ಓವರಲ್ಲಿ ಒಟ್ಟು 24 ವಿಕೆಟ್‌ ಪತನಗೊಂಡವು. ಇದರಲ್ಲಿ 20 ವಿಕೆಟ್‌ ವೇಗಿಗಳ ಪಾಲಾಯಿತು. ಪಂಜಾಬ್‌ ಮೊದಲ ಇನ್ನಿಂಗ್‌್ಸನಲ್ಲಿ 48.1 ಓವರಲ್ಲಿ 162 ರನ್‌ ಗಳಿಸಿದರೆ, ರೈಲ್ವೇಸ್‌ 150ಕ್ಕೆ ಆಲೌಟಾಗಿತ್ತು. 12 ರನ್‌ ಮುನ್ನಡೆ ಪಡೆದಿದ್ದ ಪಂಜಾಬ್‌ ಬುಧವಾರ 8 ಓವರಲ್ಲಿ 18 ರನ್‌ಗೆ 4 ವಿಕೆಟ್‌ ಕಳೆದುಕೊಂಡ ಬಳಿಕ ಬ್ಯಾಟಿಂಗ್‌ ಮುಂದುವರಿಸಲು ನಿರಾಕರಿಸಿತು. ಬಳಿಕ ಅಂಪೈರ್‌ಗಳು ದಿನದ 2ನೇ ಅವಧಿ ವೇಳೆ ಪಿಚ್‌ ಅಪಾಯಕಾರಿ ಹಾಗೂ ಆಡಲು ಯೋಗ್ಯವಾಗಿಲ್ಲ ಎಂದು ನಿರ್ಧರಿಸಿ ಪಂದ್ಯವನ್ನು ಸ್ಥಗಿತಗೊಳಿಸಿದರು.

Ranji Trophy: ಪುದುಚೆರಿ ಎದುರು ಕರ್ನಾಟಕಕ್ಕೆ ಮೊದಲ ದಿನದ ಗೌರವ

ವಿವಾದ ಹೊಸದಲ್ಲ

ಈ ಮೊದಲು 2009ರಲ್ಲಿ ಕಳಪೆ ಪಿಚ್‌ ತಯಾರಿಸಿದ ಕಾರಣಕ್ಕೆ ಕರ್ನೈಲ್‌ ಸಿಂಗ್‌ ಕ್ರೀಡಾಂಗಣ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ 2011ರಲ್ಲಿ ರೈಲ್ವೇಸ್‌ ತಂಡಕ್ಕೆ ಅನುಕೂಲವಾಗುವಂತೆ ಪಿಚ್‌ ತಯಾರಿಸಿದ ಕಾರಣಕ್ಕೆ ಕ್ರೀಡಾಂಗಣಕ್ಕೆ ಬಿಸಿಸಿಐ 2 ವರ್ಷ ನಿಷೇಧ ಹೇರಿತ್ತು.

click me!