
ಮೀರ್‌ಪುರ್(ಡಿ.22): ಬಾಂಗ್ಲಾದೇಶ ವಿರುದ್ಧ ಗುರುವಾರದಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ನಲ್ಲೂ ಆಲ್ರೌಂಡ್ ಪ್ರದರ್ಶನ ತೋರಿ ಸರಣಿಯನ್ನು 2-0ಯಲ್ಲಿ ಗೆಲ್ಲುವ ಮೂಲಕ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಿಡಲು ಭಾರತ ಕಾತರಿಸುತ್ತಿದೆ. ಮೊದಲ ಪಂದ್ಯದಲ್ಲಿ ದೊಡ್ಡ ಗೆಲುವು ಸಂಪಾದಿಸಿದ್ದ ಟೀಂ ಇಂಡಿಯಾ, ಈ ಪಂದ್ಯದಲ್ಲೂ ತನ್ನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.
ಚಿತ್ತಗಾಂಗ್‌ನಲ್ಲಿ ಚೇತೇಶ್ವರ್ ಪೂಜಾರ ಎರಡೂ ಇನ್ನಿಂಗ್ಸ್‌ಗಳಲ್ಲಿ ಆಕರ್ಷಕ ಆಟವಾಡಿದ್ದರು. ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್ ಹಾಗೂ ಆರ್.ಅಶ್ವಿನ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಕುಲ್ದೀಪ್ ಯಾದವ್‌ರ ಆಲ್ರೌಂಡ್ ಪ್ರದರ್ಶನ ತಂಡಕ್ಕೆ ನೆರವಾಗಿತ್ತು. ಮೊದಲ ಇನ್ನಿಂಗ್ಸಲ್ಲಿ ಮೊಹಮದ್ ಸಿರಾಜ್ ಮಾರಕ ದಾಳಿ ನಡೆಸಿದರೆ, 2ನೇ ಇನ್ನಿಂಗ್‌್ಸನಲ್ಲಿ ಅಕ್ಷರ್ ಪಟೇಲ್ ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದ್ದರು. ಇಲ್ಲಿನ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳ ಸ್ವರ್ಗ ಎನಿಸಿದ್ದು, ಬ್ಯಾಟರ್‌ಗಳು ಹೆಚ್ಚು ಪರಿಶ್ರಮ ವಹಿಸಬೇಕಾಗಬಹುದು. ಭಾರತೀಯ ಸ್ಪಿನ್ನರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಿದರೆ ಗೆಲ್ಲಲು ಕಷ್ಟವಾಗದು.
ಪೂಜಾರ ನಾಯಕ?: ಬುಧವಾರ ನೆಟ್ಸ್ ಅಭ್ಯಾಸದ ವೇಳೆ ಕೆ.ಎಲ್.ರಾಹುಲ್ ಕೈಗೆ ಚೆಂಡು ಬಡಿದ ಕಾರಣ ಅವರು ಗಾಯಗೊಂಡಿದ್ದಾರೆ. ವೈದ್ಯಕೀಯ ತಂಡ ರಾಹುಲ್‌ರ ಗಾಯದ ಪ್ರಮಾಣದ ಮೇಲೆ ಕಣ್ಣಿಟ್ಟಿದ್ದು, ಅವರು ಪಂದ್ಯದಲ್ಲಿ ಆಡಲಿದ್ದಾರೋ ಇಲ್ಲವೋ ಎನ್ನುವುದು ಗುರುವಾರ ಬೆಳಗ್ಗೆ ಟಾಸ್‌ಗೂ ಮೊದಲು ನಿರ್ಧರಿಸುವುದಾಗಿ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಹೇಳಿದ್ದಾರೆ. ಒಂದು ವೇಳೆ ರಾಹುಲ್ ಹೊರಗುಳಿದರೆ, ಉಪನಾಯಕ ಚೇತೇಶ್ವರ್ ಪೂಜಾರ ತಂಡ ಮುನ್ನಡೆಸಲಿದ್ದಾರೆ. ರೋಹಿತ್ ಬದಲು ತಂಡ ಕೂಡಿಕೊಂಡಿರುವ ಅಭಿಮನ್ಯು ಈಶ್ವರನ್‌ಗೆ ಟೆಸ್ಟ್ ಕ್ಯಾಪ್ ಸಿಗಬಹುದು.
ಒತ್ತಡದಲ್ಲಿ ಬಾಂಗ್ಲಾ: ಮತ್ತೊಂದೆಡೆ ಬಾಂಗ್ಲಾದೇಶ ತವರಿನಲ್ಲಿ ಸರಣಿ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಸಮಾಧಾನಕರ ವಿಷಯವೆಂದರೆ ಭುಜದ ನೋವಿನಿಂದ ಚೇತರಿಸಿಕೊಂಡಿರುವ ನಾಯಕ ಶಕೀಬ್ ಅಲ್ ಹಸನ್ ಈ ಪಂದ್ಯದಲ್ಲಿ ಬೌಲ್ ಮಾಡಲಿದ್ದಾರೆ ಎಂದು ಬೌಲಿಂಗ್ ಕೋಚ್ ಆ್ಯಲೆನ್ ಡೊನಾಲ್ಡ್ ಖಚಿತಪಡಿಸಿದ್ದಾರೆ. ವೇಗಿ ಎಬಾದತ್ ಬದಲಿಗೆ ಟಸ್ಕಿನ್ ಅಥವಾ ಸ್ಪಿನ್ನರ್ ನಸುಂ ಅಹ್ಮದ್ ಆಡಬಹುದು.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಗಿಲ್, ರಾಹುಲ್/ಅಭಿಮನ್ಯು, ಪೂಜಾರ, ಕೊಹ್ಲಿ, ರಿಷಭ್ ಪಂತ್, ಶ್ರೇಯಸ್, ಅಕ್ಷರ್, ಅಶ್ವಿನ್, ಕುಲ್ದೀಪ್, ಉಮೇಶ್, ಸಿರಾಜ್.
ಬಾಂಗ್ಲಾ: ನಜ್ಮುಲ್, ಜಾಕಿರ್, ಯಾಸಿರ್, ಲಿಟನ್ ದಾಸ್, ಶಕೀಬ್, ಮುಷ್ಫಿಕುರ್, ನುರುಲ್, ಮೆಹಿದಿ ಹಸನ್, ತೈಜುಲ್, ಟಸ್ಕಿನ್, ಖಾಲಿದ್.
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ, ನೇರ ಪ್ರಸಾರ: ಸೋನಿ ಸ್ಪೋಟ್ಸ್‌ರ್ 5
ಪಿಚ್ ರಿಪೋರ್ಚ್
ಮೀರ್‌ಪುರ್ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಲಿದ್ದು, ಮೊದಲ ದಿನ ಬ್ಯಾಟರ್‌ಗಳಿಗೆ ತಕ್ಕಮಟ್ಟಿಗೆ ಅನುಕೂಲವಾಗಬಹುದು. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.