
ಕೋಲ್ಕತಾ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಮುಂಬೈ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಯಶಸ್ವಿಯಾಗಿದೆ.
ಮುಂಬೈನ 315 ರನ್‌ಗೆ ಉತ್ತರವಾಗಿ 2ನೇ ದಿನ 5 ವಿಕೆಟ್‌ಗೆ 263 ರನ್ ಗಳಿಸಿದ್ದ ಹರ್ಯಾಣ, ಸೋಮವಾರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ತಂಡ 301ಕ್ಕೆ ಆಲೌಟಾಯಿತು. ಶಾರ್ದೂಲ್ ಠಾಕೂರ್ 6 ವಿಕೆಟ್ ಕಿತ್ತರು. 2ನೇ ಇನ್ನಿಂಗ್ಸ್‌ನಲ್ಲಿ ಮುಂಬೈ 3ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 278 ರನ್ ಗಳಿಸಿದ್ದು, ಒಟ್ಟು 292 ರನ್ ಮುನ್ನಡೆಯಲ್ಲಿದೆ. ರಹಾನೆ ಔಟಾಗದೆ 88, ಸೂರ್ಯಕುಮಾರ್ 70 ರನ್ ಗಳಿಸಿದರು.
ಕೇರಳಕ್ಕೆ ಲೀಡ್: ಜಮ್ಮು ಮತ್ತು ಕಾಶ್ಮೀರ ವಿರುದ್ಧ ಕೇರಳ ಕೇವಲ 1 ರನ್‌ನಿಂದ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಜಮ್ಮುವಿನ 280 ರನ್‌ಗೆ ಉತ್ತರವಾಗಿ ಕೇರಳ 281ಕ್ಕೆ ಆಲೌಟಾಯಿತು. ಸಲ್ಮಾನ್ ನಿಜಾರ್ 112 ರನ್ ಸಿಡಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ ಜಮ್ಮು 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 180 ರನ್ ಗಳಿಸಿದ್ದು, 179 ರನ್ ಮುನ್ನಡೆಯಲ್ಲಿದೆ.
ಸಚಿನ್ ತೆಂಡುಲ್ಕರ್ ಅಪರೂಪದ ದಾಖಲೆ ಮುರಿದ ರೋಹಿತ್ ಶರ್ಮಾ!
ವಿದರ್ಭ ಬಿಗಿ ಹಿಡಿತ: ತಮಿಳನಾಡು ವಿರುದ್ಧ ವಿದರ್ಭ ಬಿಗಿಹಿಡಿತ ಸಾಧಿಸಿದೆ. ವಿದರ್ಭ 353ಕ್ಕೆ ಆಲೌಟಾಗಿದ್ದರೆ, ತ.ನಾಡು 225 ರನ್ ಗಳಿಸಿತು. 2ನೇ ಇನ್ನಿಂಗ್ಸ್‌ನಲ್ಲಿ ವಿದರ್ಭ 5 ವಿಕೆಟ್‌ಗೆ 169 ರನ್ ಗಳಿಸಿದ್ದು, 297 ರನ್ ಮುನ್ನಡೆಯಲ್ಲಿದೆ. ಕರುಣ್ ನಾಯರ್ 29ಕ್ಕೆ ಔಟಾದರು.
ಗುಜರಾತ್ 511: ಮತ್ತೊಂದು ಕ್ವಾರ್ಟರ್‌ನಲ್ಲಿ ಸೌರಾಷ್ಟ್ರದ 216ಕ್ಕೆ ಉತ್ತರವಾಗಿ ಗುಜರಾತ್ 511 ರನ್ ಗಳಿಸಿತು. ಊರ್ವಿಲ್ ಪಟೇಲ್ 140, ಜಯ್‌ಮೀತ್ 103 ರನ್ ಸಿಡಿಸಿದರು. ಸೌರಾಷ್ಟ್ರ 2ನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿದ್ದು, ಇನ್ನೂ 262 ರನ್ ಹಿನ್ನಡೆಯಲ್ಲಿದೆ.
ಏಕದಿನ ಸರಣಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್! RCB ಆಟಗಾರ ಚಾಂಪಿಯನ್ಸ್ ಟ್ರೋಫಿಯಿಂದ ಔಟ್!
ಡಬ್ಲ್ಯುಪಿಎಲ್: ದೀಪ್ತಿ ಶರ್ಮಾ ಯುಪಿ ವಾರಿಯರ್ಸ್ ನಾಯಕಿ
ನವದೆಹಲಿ: ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನ ಯುಪಿ ವಾರಿಯರ್ಸ್ ತಂಡಕ್ಕೆ ಭಾರತದ ತಾರಾ ಆಲ್ರೌಂಡರ್ ದೀಪ್ತಿ ಶರ್ಮಾ ನಾಯಕಿಯಾಗಿ ನೇಮಕಗೊಂಡಿದ್ದಾರೆ. ತಂಡದ ಕಾಯಂ ನಾಯಕಿ, ಆಸ್ಟ್ರೇಲಿಯಾ ಅಲೀಸಾ ಹೀಲಿ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದ ಕಾರಣ, ದೀಪ್ತಿಗೆ ಹೊಣೆ ನೀಡಲಾಗಿದೆ. ದೀಪ್ತಿ ಕಳೆದೆಡು ಆವೃತ್ತಿಗಳಲ್ಲೂ ಯುಪಿ ಪರ ಆಡಿದ್ದು, 2024ರಲ್ಲಿ 8 ಪಂದ್ಯಗಳಲ್ಲಿ 295 ರನ್ ಕಲೆಹಾಕಿದ್ದಲ್ಲದೇ, 10 ವಿಕೆಟ್ ಪಡೆದಿದ್ದರು. ಅವರು ದೇಸಿ ಕ್ರಿಕೆಟ್‌ನಲ್ಲಿ ಬೆಂಗಾಲ್, ಈಸ್ಟ್ ಝೋನ್, ವುಮೆನ್ಸ್ ಟಿ20 ಚಾಲೆಂಜ್‌ನಲ್ಲಿ ವೆಲೋಸಿಟಿ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.