ಇಲ್ಲಿನ ಶ್ರೀಕಂಠದತ್ತ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 498 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 177 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಗೋವಾ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 93 ರನ್ ಗಳಿಸಿದ್ದು, ಇನ್ನೂ 84 ರನ್ ಹಿನ್ನಡೆಯಲ್ಲಿದೆ.
ಮೈಸೂರು(ಜ.22): ಯುವ ಬ್ಯಾಟರ್ ನಿಕಿನ್ ಜೋಸ್ ತಮ್ಮ ತವರಿನಲ್ಲಿ ಬಾರಿಸಿದ ಅತ್ಯಾಕರ್ಷಕ ಶತಕ, ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡಕ್ಕೆ ಗೋವಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಒದಗಿಸಿದೆ. ಬೃಹತ್ ಮೊತ್ತದೊಂದಿಗೆ ಗೋವಾ ಮೇಲೆ ಪ್ರಾಬಲ್ಯ ಸಾಧಿಸಿರುವ ಕರ್ನಾಟಕ, ಕೊನೆ ದಿನವಾದ ಸೋಮವಾರ ಅತ್ಯುತ್ತಮ ಪ್ರದರ್ಶನ ತೋರಿ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಮೂಲಕ ಕಳೆದ ಪಂದ್ಯದಲ್ಲಿ ಎದುರಾದ ಆಘಾತಕಾರಿ ಸೋಲಿನ ಕಹಿಯನ್ನು ಮರೆಯುವ ತವಕದಲ್ಲಿದೆ.
ಇಲ್ಲಿನ ಶ್ರೀಕಂಠದತ್ತ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 498 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 177 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಗೋವಾ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 93 ರನ್ ಗಳಿಸಿದ್ದು, ಇನ್ನೂ 84 ರನ್ ಹಿನ್ನಡೆಯಲ್ಲಿದೆ.
3ನೇ ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಯಾರೂ ಮಾಡದ ದಾಖಲೆ ಬರೆದ ಶೋಯೆಬ್ ಮಲಿಕ್..!
ಆರಂಭಿಕ ಆಟಗಾರ ಇಶಾನ್ ವಾಡೇಕರ್ ಅವರನ್ನು ರನ್ ಖಾತೆ ತೆರೆಯುವ ಮೊದಲೇ ವೇಗಿ ವಿಜಯ್‌ಕುಮಾರ್ ವೈಶಾಖ್ ಪೆವಿಲಿಯನ್‌ಗೆ ಅಟ್ಟಿದರು. ಆದರೆ ಮುರಿಯದ 2ನೇ ವಿಕೆಟ್‌ಗೆ ಸುಯಶ್ ಪ್ರಭುದೇಸಾಯಿ ಹಾಗೂ ಕನ್ನಡಿಗ ಕೆ.ವಿ.ಸಿದ್ಧಾರ್ಥ್ 92 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಸಿದ್ಧಾರ್ಥ್ 57 ರನ್ ಗಳಿಸಿದ್ದು, ಸುಯಾಶ್ 34 ರನ್‌ಗಳೊಂದಿಗೆ ಕೊನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ನಿಕಿನ್ ಅಬ್ಬರ: ಇದಕ್ಕೂ ಮೊದಲ 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 253 ರನ್ ಗಳಿಸಿದ್ದ ರಾಜ್ಯ ತಂಡಕ್ಕೆ ಶನಿವಾರ ನಿಕಿನ್ ಜೋಸ್ ಹಾಗೂ ಶ್ರೀನಿವಾಸ್ ಶರತ್ ಆಪತ್ಬಾಂಧವರಾದರು. ಈ ಜೋಡಿ 5ನೇ ವಿಕೆಟ್‌ಗೆ 148 ರನ್ ಸೇರಿಸಿತು. ಶ್ರೀನಿವಾಸ್(49) ಅರ್ಧಶತಕದ ಅಂಚಿನಲ್ಲಿ ಎಡವಿದರೆ, ಜವಾಬ್ದಾರಿಯುವ ಆಟವಾಡಿದ 23ರ ನಿಕಿನ್, 215 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 107 ರನ್ ಸಿಡಿಸಿದರು. ಶುಭಾಂಗ್ ಹೆಗ್ಡೆ 36 ರನ್ ಕೊಡುಗೆ ನೀಡಿ, ತಂಡದ ಮೊತ್ತವನ್ನು 500ರ ಸನಿಹಕ್ಕೆ ತಲುಪಿಸಿದರು. ನಾಯಕ ದರ್ಶನ್ ಮಿಶಾಲ್ 6, ಮೋಹಿತ್ 3 ವಿಕೆಟ್ ಕಿತ್ತರು.
ಅಂಡರ್ 19 ವಿಶ್ವಕಪ್: ಚಾಂಪಿಯನ್ ಭಾರತ ಶುಭಾರಂಭ
ಸ್ಕೋರ್: ಗೋವಾ 321/10 ಮತ್ತು 93/1 (ಸಿದ್ಧಾರ್ಥ್ 57*, ಸುಯಾಶ್ 34*, ವೈಶಾಕ್ 1-18)
ಕರ್ನಾಟಕ 498/9 ಡಿಕ್ಲೇರ್(ನಿಕಿನ್ 107, ಶ್ರೀನಿವಾಸ್ 49, ದರ್ಶನ್ 6-134)
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರ 20,000 ರನ್:
ಹಿರಿಯ ಬ್ಯಾಟರ್ ಚೇತೇಶ್ವರ್ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 20 ಸಾವಿರ ರನ್ ಮೈಲಿಗಲ್ಲು ತಲುಪಿದ್ದಾರೆ. ಪೂಜಾರ ಈ ಸಾಧನೆ ಮಾಡಿದ ಭಾರತದ 4ನೇ ಬ್ಯಾಟರ್. ಸೌರಾಷ್ಟ್ರ ಪರ ಆಡುತ್ತಿರುವ 35ರ ಪೂಜಾರ ವಿದರ್ಭ ವಿರುದ್ಧದ ಪಂದ್ಯದಲ್ಲಿ ಭಾನುವಾರ ಈ ಮೈಲಿಗಲ್ಲು ಸಾಧಿಸಿದರು. ಅವರು 260 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸುನಿಲ್ ಗವಾಸ್ಕರ್(348 ಪಂದ್ಯದಲ್ಲಿ 25,834 ರನ್), ಸಚಿನ್ ತೆಂಡುಲ್ಕರ್(310 ಪಂದ್ಯಗಳಲ್ಲಿ 25,396 ರನ್), ರಾಹುಲ್ ದ್ರಾವಿಡ್(298 ಪಂದ್ಯಗಳಲ್ಲಿ 23,794 ರನ್) ಕೂಡಾ 20 ಸಾವಿರ ರನ್ ಕ್ಲಬ್‌ನಲ್ಲಿದ್ದಾರೆ.
ಡೆಲ್ಲಿಗೆ ಮತ್ತೆ ಸೋಲು!
7 ಬಾರಿ ಚಾಂಪಿಯನ್ ಡೆಲ್ಲಿಗೆ ಈ ಬಾರಿ 2ನೇ ಸೋಲಿನ ಆಘಾತ ಎದುರಾಗಿದೆ. ಭಾನುವಾರ ಮಧ್ಯಪ್ರದೇಶ ವಿರುದ್ಧ ಡೆಲ್ಲಿ 86 ರನ್‌ಗಳಿಂದ ಶರಣಾಯಿತು. ಆರಂಭಿಕ ಪಂದ್ಯದಲ್ಲಿ ಪುದುಚೇರಿ ವಿರುದ್ಧವೂ ಸೋತಿದ್ದ ಡೆಲ್ಲಿ, ಕಳೆದ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು.