ತಮ್ಮ ಕ್ರಿಕೆಟ್ ಬದುಕನ್ನು ತಾವೇ ಹಾಳು ಮಾಡಿಕೊಳ್ತಿದ್ದಾರಾ ಇಶಾನ್ ಕಿಶನ್..?

By Suvarna News  |  First Published Jan 21, 2024, 3:15 PM IST

ಇಶಾನ್ ಕಿಶನ್.! ಟೀಂ ಇಂಡಿಯಾದ ಯಂಗ್ ವಿಕೆಟ್ ಕೀಪರ್ ಬ್ಯಾಟರ್.  ಆದ್ರೆ, ಸದ್ಯ ತಂಡದಿಂದ ಈ ರಾಂಚಿ ಬಾಯ್ ಹೊರಗುಳಿದಿದ್ದಾರೆ. 2023ರಲ್ಲಿ ಏಷ್ಯಾಕಪ್, ವಿಶ್ವಕಪ್ ಸೇರಿದಂತೆ ಟೀಂ ಇಂಡಿಯಾ ಆಡಿದ ಬಹುತೇಕ ಸರಣಿಗಳಲ್ಲಿ ಇಶಾನ್ ತಂಡದ ಭಾಗವಾಗಿದ್ರು.


ಬೆಂಗಳೂರು(ಡಿ.21): ಯಾವುದೋ ಒಂದು ನಿರ್ಧಾರ ಕೈಗೊಳ್ಳಬೇಕಾದ್ರೂ ನೂರು ಸಾರಿ ಯೋಚಿಸ್ಬೇಕು ಅಂತ ದೊಡ್ಡವರು ಸುಮ್ನೆ ಹೇಳಲ್ಲ. ಯಾಕಂದ್ರೆ, ಯಾವುದೋ ಕೆಟ್ಟ ಘಳಿಗೆಯಲ್ಲಿ ತೆಗೆದುಕೊಳ್ಳೋ ನಿರ್ಧಾರ ಒಂದಲ್ಲ ಒಂದು ದಿನ ನಮಗೆ ಮುಳುವಾಗುತ್ತೆ. ಸದ್ಯ ಟೀಂ ಇಂಡಿಯಾದ ಈ ಆಟಗಾರ ವಿಷ್ಯದಲ್ಲೂ ಇದೇ ಆಗಿದೆ. ಯಾರು ಆ ಆಟಗಾರ ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ.

ತಮ್ಮ ಕರಿಯರ್‌ನ ತಾವೇ ಹಾಳು ಮಾಡಿಕೊಳ್ತಿದ್ದಾರಾ ಇಶಾನ್..? 

Latest Videos

undefined

ಇಶಾನ್ ಕಿಶನ್.! ಟೀಂ ಇಂಡಿಯಾದ ಯಂಗ್ ವಿಕೆಟ್ ಕೀಪರ್ ಬ್ಯಾಟರ್.  ಆದ್ರೆ, ಸದ್ಯ ತಂಡದಿಂದ ಈ ರಾಂಚಿ ಬಾಯ್ ಹೊರಗುಳಿದಿದ್ದಾರೆ. 2023ರಲ್ಲಿ ಏಷ್ಯಾಕಪ್, ವಿಶ್ವಕಪ್ ಸೇರಿದಂತೆ ಟೀಂ ಇಂಡಿಯಾ ಆಡಿದ ಬಹುತೇಕ ಸರಣಿಗಳಲ್ಲಿ ಇಶಾನ್ ತಂಡದ ಭಾಗವಾಗಿದ್ರು. ಆದ್ರೆ, 2024ರ ಆರಂಭದಲ್ಲೇ ಇಶಾನ್ಗೆ ಶಾಕ್ ಮೇಲೆ ಶಾಕ್ ಎದುರಾಗ್ತಿದೆ. ಇದ್ರಿಂದ ಇಶಾನ್ ಕಿಶನ್ ಇಂಟರ್ನ್ಯಾಷನಲ್ ಕ್ರಿಕೆಟ್ ಕರಿಯರ್ ಡೇಂಝರ್ ಝೋನ್ ತಲುಪಿದೆ. 

3ನೇ ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಯಾರೂ ಮಾಡದ ದಾಖಲೆ ಬರೆದ ಶೋಯೆಬ್ ಮಲಿಕ್..!

ಯೆಸ್, ಇಶಾನ್ ಕಿಶನ್ರನ್ನ ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದ್ರೀಗ, ಇಶಾನ್ ಪಾಲಿಗೆ ಟೀಮ್ ಇಂಡಿಯಾದ ಡೋರ್ ಆಲ್ಮೋಸ್ಟ್ ಕ್ಲೋಸ್ ಆಗಿದೆ. ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡೋದು ಕಷ್ಟ ಎನ್ನಲಾಗ್ತಿದೆ. ಇಶಾನ್ಗೆ ಇಂತಹ ಪರಿಸ್ಥಿತಿ ಬರೋದಕ್ಕೆ ಬೇಱರು ಕಾರಣ ಅಲ್ಲ, ಅವ್ರೇ ಕಾರಣ..! ದೊಡ್ಡವರ ಮಾತು ಕೇಳದೇ, ತಮ್ಮ ಕರಿಯರ್‌ನ ತಮ್ಮ ಕೈಯಾರೆ ಹಾಳು ಮಾಡಿಕೊಳ್ತಿದ್ದಾರೆ.

ದೊಡ್ಡವರ ಮಾತು ಕೇಳದೇ ಪದೇ ಪದೆ ಅದೇ ತಪ್ಪು..!

ಕಳೆದ ವರ್ಷ ಇಶಾನ್ ಕಿಶನ್ ಟೀಂ ಇಂಡಿಯಾ ಪರ ಆಡಿದ್ದಕ್ಕಿಂತ  ಬೆಂಚ್ ಕಾದಿದ್ದೇ ಹೆಚ್ಚು. ಯಾರಿಗಾದ್ರೂ ಇಂಜುರಿಯಾದ್ರೆ ಮಾತ್ರ ಆಡೋ ಚಾನ್ಸ್ ಸಿಕ್ತಾ ಇತ್ತು. ವಿಶ್ವಕಪ್ ನಂತರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಕೆಲ ಪಂದ್ಯಗಳಿಂದ ಕೊಕ್ ನೀಡಲಾಯ್ತು. ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯಲ್ಲೂ  ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗಲಿಲ್ಲ. ಇದೆಲ್ಲದರಿಂದ ಇಶಾನ್ ಖಿನ್ನತೆಗೊಳಗಾಗಿದ್ರು. ಅಲ್ಲದೇ ಮಾನಸಿಕವಾಗಿಯೂ ಕುಗ್ಗಿದ್ರು. ಅದೇ ಕಾರಣಕ್ಕೆ ಟೆಸ್ಟ್ ಸರಣಿಗೆ ಆಯ್ಕೆಯಾದ್ರೂ ಆಡೋ ಮನಸ್ಸು ಮಾಡಲಿಲ್ಲ. ಇದ್ದಕ್ಕಿದ್ದಂತೆ ತಂಡ ತೊರೆಯುವ ನಿರ್ಧಾರ ಮಾಡಿದ್ರು.

ಏಕಾಏಕಿ ಇಂತಹ ನಿರ್ಧಾರ ಕೈಗೊಳ್ಳೋಕೆ ಏನು ಕಾರಣ ಅಂತ ಬಿಸಿಸಿಐ ಪ್ರಶ್ನಿಸಿತ್ತು. ಅದಕ್ಕೆ ಇಶಾನ್ ವೈಯಕ್ತಿಕ, ಮೆಂಟಲ್ ಫಿಟ್ನೆಸ್ ಕಾರಣ ಅಂತ ಹೇಳಿದ್ರು. ಇಶಾನ್ ಮನವಿಯನ್ನ ಬಿಸಿಸಿಐ ಒಪ್ಪಿಸಿತ್ತು. ಅದರಂತೆ ಇಶಾನ್ ಟೆಸ್ಟ್ ಸರಣಿ ಆಡೋದು ಬಿಟ್ಟು, ಪಾರ್ಟಿ, ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ್ರು. ಈಗ ಗುರು ರಾಹುಲ್ ದ್ರಾವಿಡ್ ಮಾತನ್ನೂ ಧಿಕ್ಕರಿಸಿದ್ದಾರೆ.

ಸಾರಾ ಸುದ್ದಿ ನಡುವೆ ಭಾರತೀಯರಿಗೆ ಶಾಕ್‌ ಕೊಟ್ಟ ಸನಾ, ಯಾರೀಕೆ ಸಾನಿಯಾ ಮಿರ್ಜಾ ಸವತಿ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಬೇಕಾದ್ರೆ, ರಣಜಿಯಲ್ಲಿ ಆಡ್ಬೇಕು ಅಂತ ದ್ರಾವಿಡ್ ಇಶಾನ್‌ಗೆ ಸೂಚಿಸಿದ್ರು. ಆದ್ರೆ, ದ್ರಾವಿಡ್ ಸೂಚನೆಗೆ ಇಶಾನ್ ತಲೆಕೆಡಿಸಿಕೊಂಡಿಲ್ಲ. ರಣಜಿಯಲ್ಲಿ ಜಾರ್ಖಂಡ್ ಪರ ಆಡ್ತಿಲ್ಲ. ಈ ಬಗ್ಗೆ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯನ್ನ ಸಂಪರ್ಕಿಸಿಲ್ಲ. ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಇಶಾನ್, ಮೂರನೇ ಪಂದ್ಯದಲ್ಲಿ ಆಡ್ತಾರೆ ಅಂತ ಹೇಳಲಾಗಿತ್ತು. ಆದ್ರೆ, ಸರ್ವೀಸಸ್ ವಿರುದ್ಧ ಪಂದ್ಯದಲ್ಲೂ ಇಶಾನ್ ಕಾಣಿಸಿಕೊಂಡಿಲ್ಲ. 

ರಣಜಿಯಲ್ಲೂ ಆಡ್ತಿಲ್ಲ, ಭಾರತ ಎ ತಂಡದಲ್ಲೂ ಸ್ಥಾನ ಇಲ್ಲ..!

ಸದ್ಯ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗೋದು ತುಂಬಾನೇ ಕಷ್ಟ. ಅಂತದ್ರಲ್ಲಿ, ಕೋಚ್ ಮಾತನ್ನೇ ಕೇಳದ ಇಶಾನ್ ದೊಡ್ಡ ತಪ್ಪು ಮಾಡಿದ್ದಾರೆ. ಮೊದಲು T20 ತಂಡದಿಂದ ಮಾತ್ರ ಇಶಾನ್ರನ್ನ ಡ್ರಾಪ್ ಮಾಡಲಾಗಿತ್ತು. ಆದ್ರೀಗ ಟೆಸ್ಟ್ ತಂಡದಿಂದಲೂ ಕೈಬಿಡಲಾಗಿದೆ. ಈಗ ಭಾರತ ಎ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ. ಇಂಗ್ಲೆಂಡ್ ಲಯನ್ಸ್ ವಿರುದ್ಧದ 4 ದಿನಗಳ ಅನಧಿಕೃತ ಟೆಸ್ಟ್ ಸರಣಿಯ ಕೊನೆಯ 2 ಪಂದ್ಯಕ್ಕಾಗಿ, ತಂಡವನ್ನ ಪ್ರಕಟಿಸಿಲಾಗಿದೆ. ಈ ತಂಡಕ್ಕೂ ಇಶಾನ್ ಆಯ್ಕೆಯಾಗಿಲ್ಲ. ಒಟ್ಟಿನಲ್ಲಿ ಇಶಾನ್ ಕಿಶನ್ ಗುರುವಿನ ಮಾತನ್ನೇ ಗಾಳಿಗೆ ತೂರಿ, ತಮ್ಮ ಕರಿಯರ್ನ ತಾವೇ ಹಾಳು ಮಾಡಿಕೊಳ್ತಿರೋದಂತೂ ಸತ್ಯ.!

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!