
ನವದೆಹಲಿ(ಫೆ.01): ಬಹುನಿರೀಕ್ಷಿತ ರಣಜಿ ಟ್ರೋಫಿ (Ranji Trophy) ಫೆಬ್ರವರಿ 16ರಿಂದ ಆರಂಭಗೊಳ್ಳಲಿದ್ದು, ಲೀಗ್ ಹಂತವು ಮಾರ್ಚ್ 5ರ ವರೆಗೂ ನಡೆಯಲಿದೆ. ಕೋವಿಡ್‌ನಿಂದಾಗಿ (COVID 19) ಮುಂದೂಡಿಕೆಯಾಗಿದ್ದ ಟೂರ್ನಿಯನ್ನು ಎರಡು ಹಂತಗಳಲ್ಲಿ ನಡೆಸಲು ಬಿಸಿಸಿಐ (BCCI) ನಿರ್ಧರಿಸಿದ್ದು, ನಾಕೌಟ್ ಪಂದ್ಯಗಳು ಐಪಿಎಲ್ (IPL) ಟೂರ್ನಿ ಮುಕ್ತಾಯಗೊಂಡ ಬಳಿಕ ಜೂನ್ ತಿಂಗಳಲ್ಲಿ ನಡೆಯಲಿದೆ. 38 ತಂಡಗಳು ಲೀಗ್ ಹಂತದಲ್ಲಿ ಸ್ಪರ್ಧಿಸಲಿದ್ದು, ಈ ಬಾರಿ ಕಡಿಮೆ ಸಮಯದಲ್ಲಿ ಪಂದ್ಯಗಳನ್ನು ಮುಗಿಸಬೇಕಿರುವ ಅನಿವಾರ್ಯತೆ ಎದುರಾಗಿರುವ ಕಾರಣ ಟೂರ್ನಿಯ ಮಾದರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. 8 ಎಲೈಟ್ ಗುಂಪುಗಳನ್ನು ರಚಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ತಲಾ 4 ತಂಡಗಳು ಇರಲಿವೆ. ಪ್ಲೇಟ್ ಗುಂಪಿನಲ್ಲಿ 6 ತಂಡಗಳು ಸ್ಪರ್ಧಿಸಲಿವೆ.
ಮೂಲಗಳ ಪ್ರಕಾರ ಅಹಮದಾಬಾದ್, ಕೋಲ್ಕತಾ, ತಿರುವನಂತಪುರಂ, ಕಟಕ್, ಚೆನ್ನೈ, ಗುವಾಹಟಿ, ಹೈದರಾಬಾದ್, ಬರೋಡಾ ಹಾಗೂ ರಾಜ್‌ಕೋಟ್‌ನಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. 9 ನಗರಗಳಲ್ಲಿ ಬಿಸಿಸಿಐ ಬಯೋ ಬಬಲ್ ವ್ಯವಸ್ಥೆ ಮಾಡಲಿದೆ. ಲೀಗ್ ಪಂದ್ಯಗಳಿಗೆ ಬೆಂಗಳೂರನ್ನು ಪರಿಗಣಿಸದೆ ಇರುವುದು ಅಚ್ಚರಿಗೆ ಕಾರಣವಾಗಿದ್ದು, ನಾಕೌಟ್ ಪಂದ್ಯಗಳನ್ನು ಬೆಂಗಳೂರಲ್ಲಿ ಆಯೋಜಿಸಬಹುದು ಎನ್ನಲಾಗಿದೆ.
ನಾಕೌಟ್‌ಗೆ ಅರ್ಹತೆ ಪಡೆಯದ ತಂಡಗಳು ಕೇವಲ 3 ಪಂದ್ಯಗಳನ್ನಷ್ಟೇ ಆಡಲಿದ್ದು, ಆಟಗಾರರ ಪಂದ್ಯದ ಸಂಭಾವನೆ ಕಡಿತಗೊಳ್ಳಲಿದೆ. ಸಾಮಾನ್ಯವಾಗಿ ಪ್ರತಿ ತಂಡಕ್ಕೂ ಕನಿಷ್ಠ 5 ಪಂದ್ಯಗಳು ಸಿಗುತ್ತಿದ್ದವು. ಕೋವಿಡ್‌ನಿಂದಾಗಿ ಕಳೆದ ವರ್ಷ ರಣಜಿ ಟ್ರೋಫಿ ರದ್ದುಗೊಂಡಿತ್ತು. ಇನ್ನು ಐಪಿಎಲ್ ಟೂರ್ನಿಗಳು ಮುಕ್ತಾಯದ ಬಳಿಕ ಜೂನ್ ತಿಂಗಳಿನಲ್ಲಿ ರಣಜಿ ಟ್ರೋಫಿಯ ನಾಕೌಟ್ ಪಂದ್ಯಗಳು ನಡೆಯಲಿದೆ ಎಂದು ವರದಿಯಾಗಿದೆ.
ಅಂಡರ್-19: ಇಂದು ಇಂಗ್ಲೆಂಡ್, ಆಫ್ಘನ್ ಸೆಮೀಸ್
ಆ್ಯಂಟಿಗಾ: ವೀಸಾ ಸಮಸ್ಯೆಯಿಂದಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಕೆರಿಬಿಯನ್ ತಲುಪುವುದು ತಡವಾದರೂ ಅಷ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿ, ತನಗಾಗಿ ಐಸಿಸಿ (ICC) 4 ಪಂದ್ಯಗಳ ವೇಳಾಪಟ್ಟಿಯನ್ನು ಬದಲಾಯಿಸಿದ್ದು ವ್ಯರ್ಥವಾಗದಂತೆ ಮಾಡಿದೆ. ಮಂಗಳವಾರ ಮೊದಲ ಸೆಮೀಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದ್ದು, ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ.
IPL 2022: ಮಹಾರಾಷ್ಟ್ರದಲ್ಲಿ ಐಪಿಎಲ್ ಲೀಗ್ ಪಂದ್ಯಗಳಿಗೆ ಆತಿಥ್ಯ..?
ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಆಫ್ಘನ್, ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಆದರೆ, ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಇಂಗ್ಲೆಂಡ್ ವಿರುದ್ಧ ಆಫ್ಘನ್ನರಿಗೆ ಕಠಿಣ ಸವಾಲು ಎದುರಾಗಲಿದೆ. ಇಂಗ್ಲೆಂಡ್ 2ನೇ ಬಾರಿಗೆ ಚಾಂಪಿಯನ್ ಆಗುವ ಗುರಿ ಹೊಂದಿದೆ.
ಪಂದ್ಯ ಆರಂಭ: ಸಂಜೆ 6.30ಕ್ಕೆ
ಇಂಗ್ಲೆಂಡ್ ಆಲ್ರೌಂಡರ್ ಬ್ರೆಸ್ನನ್ ಕ್ರಿಕೆಟ್‌ಗೆ ವಿದಾಯ
ಲಂಡನ್: ಇಂಗ್ಲೆಂಡ್‌ನ ಟಿಮ್ ಬ್ರೆಸ್ನನ್ (Tim Bresnan) ಸೋಮವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದನ್ನು ಅವರ ದೇಸಿ ಕ್ಲಬ್ ವಾರ್ವಿಕ್‌ಶೈರ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ. 36 ವರ್ಷದ ಬ್ರೆಸ್ನನ್ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈವರೆಗೆ 23 ಟೆಸ್ಟ್ ಸೇರಿ 142 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 2015ರಲ್ಲಿ ಅವರು ಕೊನೆ ಬಾರಿ ಇಂಗ್ಲೆಂಡ್ ಪರ ಆಡಿದ್ದರು.
IPL Auction 2022: 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿರುವ ಈ 3 ಇಂಗ್ಲೆಂಡ್ ಆಟಗಾರರು ಹರಾಜಾಗುವುದೇ ಡೌಟ್
‘ಇದು ಕಠಿಣ ನಿರ್ಧಾರ. ಆದರೆ ನಿವೃತ್ತಿಗೆ ಇದು ಸರಿಯಾದ ಸಮಯ. ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ತುಂಬಾ ದೊಡ್ಡ ಗೌರವ. ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.