Ranji Trophy: ಕರ್ನಾಟಕ ಎದುರು ಟಾಸ್ ಗೆದ್ದ ಜಾರ್ಖಂಡ್ ಬ್ಯಾಟಿಂಗ್ ಆಯ್ಕೆ

By Kannadaprabha NewsFirst Published Jan 24, 2023, 9:15 AM IST
Highlights

ರಾಜ್ಯಕ್ಕೆ ಇಂದಿನಿಂದ ಜಾರ್ಖಂಡ್‌ ಸವಾಲು
ಟಾಸ್ ಗೆದ್ದ ಜಾರ್ಖಂಡ್ ಮೊದಲು ಬ್ಯಾಟಿಂಗ್ ಆಯ್ಕೆ
ಗುಂಪು ಹಂತದ ಕೊನೆಯ ಪಂದ್ಯವನ್ನಾಡಲಿರುವ ಕರ್ನಾಟಕ

ಜಮ್ಶೇಡ್‌ಪುರ(ಜ.24): 2022-23ರ ರಣಜಿ ಟ್ರೋಫಿಯಲ್ಲಿ ಈಗಾಗಲೇ ಕ್ವಾರ್ಟರ್‌ ಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿರುವ ಕರ್ನಾಟಕ, ಗುಂಪು ಹಂತದ ಕೊನೆ ಪಂದ್ಯದಲ್ಲಿ ಮಂಗಳವಾರದಿಂದ ಜಾರ್ಖಂಡ್‌ ವಿರುದ್ಧ ಕಣಕ್ಕಿಳಿಯಲಿದೆ. ಪಂದ್ಯಕ್ಕೆ ಜಮ್ಶೇಡ್‌ಪುರ ಆತಿಥ್ಯ ವಹಿಸಲಿದೆ. ಕರ್ನಾಟಕ ಎದುರು ಟಾಸ್ ಗೆದ್ದ ಜಾರ್ಖಂಡ್‌ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಈ ಋುತುವಿನಲ್ಲಿ ಆಡಿದ 6 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿರುವ ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ಕರ್ನಾಟಕ, ಇನ್ನುಳಿದ 3 ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಸದ್ಯ 29 ಅಂಕಗಳನ್ನು ಸಂಪಾದಿಸಿ ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಜಾರ್ಖಂಡ್‌ ವಿರುದ್ಧ ಮೊದಲ ಇನ್ನಿಂಗ್‌್ಸ ಮುನ್ನಡೆಯೊಂದಿಗೆ ಡ್ರಾ ಸಾಧಿಸಿದರೂ ಅಗ್ರಸ್ಥಾನಿಯಾಗಿಯೇ ಕ್ವಾರ್ಟರ್‌ಗೇರಲಿದೆ. ಮತ್ತೊಂದೆಡೆ ಈ ಋುತುವಿನಲ್ಲಿ 3 ಜಯ ಕಂಡಿರುವ ಜಾರ್ಖಂಡ್‌ 23 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ರಾಜಸ್ಥಾನ, ಕೇರಳ ತಲಾ 20 ಅಂಕಗಳನ್ನು ಹೊಂದಿರುವ ಕಾರಣ, ಜಾರ್ಖಂಡ್‌ಗೆ ಕ್ವಾರ್ಟರ್‌ಗೇರಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಕೇರಳಕ್ಕೆ ಪುದುಚೇರಿ, ರಾಜಸ್ಥಾನಕ್ಕೆ ಸರ್ವಿಸಸ್‌ ಸವಾಲು ಎದುರಾಗಲಿದೆ.

ತಂಡಗಳು ಹೀಗಿವೆ ನೋಡಿ:

ಕರ್ನಾಟಕ: ರವಿಕುಮಾರ್ ಸಮರ್ಥ್‌, ಮಯಾಂಕ್ ಅಗರ್‌ವಾಲ್(ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ನಿಕಿನ್ ಜೋಶ್, ಬಿ ಆರ್ ಶರತ್(ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ.

ಜಾರ್ಖಂಡ್‌:
ಕುಮಾರ್ ದೇಬರ್ತ್, ಆರ್ಯನ್ ಸೆನ್, ಕುಮಾರ್ ಸೂರಜ್‌, ವಿರಾಟ್ ಸಿಂಗ್(ನಾಯಕ), ಸೌರಬ್ ತಿವಾರಿ, ಕುಮಾರ್ ಕುಶಾಗ್ರಾ(ವಿಕೆಟ್ ಕೀಪರ್), ಅನ್ಕೂಲ್ ರಾಯ್, ಶಾಬಾಜ್ ನದೀಮ್, ಸುಪ್ರಿಯೋ ಚಕ್ರವರ್ತಿ, ವಿನಾಯಕ್‌ ವಿಕ್ರಮ್‌, ಆಶೀಸ್ ಕುಮಾರ್. 

ಪಂದ್ಯ: ಬೆಳಗ್ಗೆ 9.30ಕ್ಕೆ

ಯು19 ಟಿ20 ವಿಶ್ವಕಪ್‌: ಭಾರತ ಸೆಮೀಸ್‌ಗೆ?

ಬೆನೊನಿ: ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಭಾರತ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಸೂಪರ್‌-6 ಹಂತದ ನಿರ್ಣಾಯಕ ಪಂದ್ಯದಲ್ಲಿ ಭಾರತ, ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ದೊಡ್ಡ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಲಂಕಾ 20 ಓವರಲ್ಲಿ 9 ವಿಕೆಟ್‌ಕೆ ಕೇವಲ 59 ರನ್‌ ಕಲೆಹಾಕಿತು. 16 ವರ್ಷದ ಪಾರ್ಶವಿ ಚೋಪ್ರಾ 4 ಓವರಲ್ಲಿ 5 ರನ್‌ಗೆ 4 ವಿಕೆಟ್‌ ಕಬಳಿಸಿದರು. ಭಾರತ 7.2 ಓವರಲ್ಲೇ ಗುರಿ ತಲುಪಿತು. ಸೌಮ್ಯ ತಿವಾರಿ 15 ಎಸೆತಗಳಲ್ಲಿ 28 ರನ್‌ ಸಿಡಿಸಿದರು. ಇದರೊಂದಿಗೆ ತನ್ನ ನೆಟ್‌ ರನ್‌ರೇಟ್‌ ಅನ್ನು ಹೆಚ್ಚಿಸಿಕೊಂಡಿತು.

ಮೈದಾನಕ್ಕೆ ನುಗ್ಗಿ ರೋಹಿತ್ ಬಿಗಿದಪ್ಪಿದ ಪುಟ್ಟ ಅಭಿಮಾನಿ, ಕ್ರಮ ಕೈಗೊಳ್ಳದಂತೆ ನಾಯಕನ ಸೂಚನೆ!

ನಾಳೆ ಮಹಿಳಾ ಐಪಿಎಲ್‌ ಬಿಡ್‌: .4000 ಕೋಟಿ ನಿರೀಕೆಯಲ್ಲಿ ಬಿಸಿಸಿಐ!

ನವದೆಹಲಿ: ಮಹಿಳಾ ಐಪಿಎಲ್‌ ಟೂರ್ನಿಯ 5 ತಂಡಗಳಿಗೆ ಬುಧವಾರ ಬಿಡ್ಡಿಂಗ್‌ ನಡೆಯಲಿದ್ದು, ಬಿಸಿಸಿಐ ಅಂದಾಜು 4000 ಕೋಟಿ ರು. ಗಳಿಸುವ ನಿರೀಕ್ಷೆಯಲ್ಲಿದೆ. ಮಾರುಕಟ್ಟೆತಜ್ಞರ ಪ್ರಕಾರ ಪ್ರತಿ ತಂಡವು ಕನಿಷ್ಠ 600ರಿಂದ 800 ಕೋಟಿ ರು.ಗೆ ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 30ಕ್ಕೂ ಹೆಚ್ಚು ಸಂಸ್ಥೆಗಳು ಬಿಡ್‌ ಪತ್ರಗಳನ್ನು ಖರೀದಿಸಿದ್ದವು. ಈ ಪೈಕಿ 17 ಸಂಸ್ಥೆಗಳು ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಿವೆ ಎಂದು ತಿಳಿದುಬಂದಿದೆ. ಪುರುಷರ ಐಪಿಎಲ್‌ನ 7 ಫ್ರಾಂಚೈಸಿಗಳು ತಂಡ ಖರೀದಿಗೆ ಉತ್ಸುಕಗೊಂಡಿದ್ದು, ಹಲ್ದೀರಾಮ್ಸ್‌, ಕೋಟಕ್‌ ಸೇರಿ ಇನ್ನೂ ಕೆಲ ಪ್ರತಿಷ್ಠಿತ ಸಂಸ್ಥೆಗಳಿಂದಲೂ ಭರ್ಜರಿ ಬಿಡ್ಡಿಂಗ್‌ ನಡೆಯುವ ನಿರೀಕ್ಷೆ ಇದೆ.

click me!