ರಣಜಿ ಕ್ರಿಕೆಟ್‌ನ ದೊರೆ ಎನಿಸಿಕೊಂಡಿರುವ ಮುಂಬೈ ದಾಖಲೆಯ 48ನೇ ಬಾರಿ ಫೈನಲ್ ಆಡುತ್ತಿದ್ದು, 42ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅತ್ತ 2017-18, 2018-19ರ ಚಾಂಪಿಯನ್ ವಿದರ್ಭ 3ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಕಾತರದಲ್ಲಿದೆ.
ಮುಂಬೈ(ಮಾ.10): ರಣಜಿ ಟ್ರೋಫಿ ರಾಷ್ಟ್ರೀಯ ಪ್ರಥಮ ದರ್ಜೆ ಕ್ರಿಕೆಟ್‌ನ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜುಗೊಂಡಿದ್ದು, ಪ್ರಶಸ್ತಿಗಾಗಿ ಇಂದಿನಿಂದ ಮಹಾರಾಷ್ಟ್ರದ 2 ತಂಡಗಳಾದ ಮುಂಬೈ ಹಾಗೂ ವಿದರ್ಭ ಪರಸ್ಪರ ಸೆಣಸಾಡಲಿವೆ. ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ರಣಜಿ ಕ್ರಿಕೆಟ್‌ನ ದೊರೆ ಎನಿಸಿಕೊಂಡಿರುವ ಮುಂಬೈ ದಾಖಲೆಯ 48ನೇ ಬಾರಿ ಫೈನಲ್ ಆಡುತ್ತಿದ್ದು, 42ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅತ್ತ 2017-18, 2018-19ರ ಚಾಂಪಿಯನ್ ವಿದರ್ಭ 3ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಕಾತರದಲ್ಲಿದೆ.
undefined
ಟೀಂ ಇಂಡಿಯಾ ಎದುರಿನ ಹೀನಾಯ ಸೋಲಿನ ಬಗ್ಗೆ ತುಟಿಬಿಚ್ಚಿದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್
ಎಲೈಟ್ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್‌ಗೇರಿದ್ದ ಮುಂಬೈ ಕ್ವಾರ್ಟರ್‌ನಲ್ಲಿ ಬರೋಡಾ, ಸೆಮಿಫೈನಲ್‌ನಲ್ಲಿ ತಮಿಳುನಾಡನ್ನು ಸೋಲಿಸಿದೆ. ಮತ್ತೊಂದೆಡೆ ‘ಬಿ’ ಗುಂಪಿನ ಅಗ್ರಸ್ಥಾನಿ ವಿದರ್ಭ ಕ್ವಾರ್ಟರ್‌ನಲ್ಲಿ ಕರ್ನಾಟಕ, ಸೆಮೀಸ್‌ನಲ್ಲಿ ಮಧ್ಯಪ್ರದೇಶವನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದೆ.
ಮುಂಬೈನಲ್ಲಿ ಅನುಭವಿಗಳಾದ ಅಜಿಂಕ್ಯಾ ರಹಾನೆ, ಶ್ರೇಯಸ್, ಶಾರ್ದೂಲ್ ಠಾಕೂರ್, ಪೃಥ್ವಿ ಶಾ, ಶಮ್ಸ್ ಮುಲಾನಿ ಜೊತೆ ಮುಶೀರ್, ತನುಶ್ ಕೋಟ್ಯಾನ್, ಭೂಪೆನ್ ಲಲ್ವಾನಿ ಇದ್ದಾರೆ.
ಕರುಣ್ ನಾಯರ್, ಧ್ರುವ್ ಶೋರೆ, ಅಕ್ಷಯ್ ವಾಡ್ಕರ್, ಅಥರ್ವ ತೈಡೆ, ಯಶ್ ರಾಥೋಡ್ ವಿದರ್ಭದ ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದು, ಆದಿತ್ಯ ಸರ್ವಾಟೆ, ಆದಿತ್ಯ ಠಾಕ್ರೆ ಬೌಲಿಂಗ್ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ.
ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕ vs ಯುಪಿ ಫೈನಲ್ ಇಂದಿನಿಂದ
ಬೆಂಗಳೂರು: ಸಿ.ಕೆ.ನಾಯ್ಡು ಟ್ರೋಫಿ ಅಂಡರ್-23 ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾನುವಾರದಿಂದ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ಸೆಣಸಾಡಲಿವೆ. ಪಂದ್ಯಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ರಾಜ್ಯ ತಂಡ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಉತ್ತರ ಪ್ರದೇಶ 2014-15ರ ಬಳಿಕ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಳ್ಳಲು ಕಾತರಿಸುತ್ತಿದೆ.
100ನೇ ಟೆಸ್ಟ್‌ನಲ್ಲಿ 5 ವಿಕೆಟ್ ಕಬಳಿಸಿ ಎಲೈಟ್ ಗ್ರೂಪ್ ಸೇರಿದ ರವಿಚಂದ್ರನ್ ಅಶ್ವಿನ್..!
ಈ ಬಾರಿ ಟೂರ್ನಿಯಲ್ಲಿ ಇತ್ತಂಡಗಳೂ ಎಲೈಟ್ ‘ಎ’ ಗುಂಪಿನಲ್ಲಿದ್ದವು. ಗುಂಪು ಹಂತದ ಮುಖಾಮುಖಿಯಲ್ಲಿ ತಂಡಗಳು ಡ್ರಾ ಸಾಧಿಸಿದ್ದವು. ಬಳಿಕ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ ಗೆದ್ದಿದ್ದು, ಸೆಮೀಸ್‌ನಲ್ಲಿ ವಿದರ್ಭವನ್ನು ಸೋಲಿಸಿತ್ತು. ಮತ್ತೊಂದೆಡೆ ಉತ್ತರ ಪ್ರದೇಶ ಕ್ವಾರ್ಟರ್ ಹಾಗೂ ಸೆಮೀಸ್‌ನಲ್ಲಿ ಕ್ರಮವಾಗಿ ಸೌರಾಷ್ಟ್ರ ಹಾಗೂ ಮುಂಬೈ ತಂಡಗಳು ಸೋಲಿಸಿ ಪ್ರಶಸ್ತಿ ಸುತ್ತಿಗೇರಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ