ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡುವುದರೊಂದಿಗೆ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದೆ. ಹರಿಣಗಳ ಇನ್ನೆರಡು ವಿಕೆಟ್ ಕಬಳಿಸಿದರೆ, ಭಾರತ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಜಯಿಸಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ರಾಂಚಿ[ಅ.21]: ಟೀಂ ಇಂಡಿಯಾ ಬೌಲರ್’ಗಳ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಇದೀಗ ಮತ್ತೊಂದು ಇನಿಂಗ್ಸ್ ಸೋಲಿನ ಭೀತಿ ಎದುರಿಸುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್ ಕಳೆದುಕೊಂಡು 132 ರನ್ ಬಾರಿಸಿದ್ದು, ಇನ್ನೂ 203 ರನ್’ಗಳ ಹಿನ್ನಡೆಯಲ್ಲಿದೆ. ಈಗಾಗಲೇ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿರುವ ವಿರಾಟ್ ಪಡೆ, ರಾಂಚಿ ಟೆಸ್ಟ್ ಪಂದ್ಯವನ್ನು ಗೆಲ್ಲುವುದರ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆಯುವ ತವಕದಲ್ಲಿದೆ.
SA 132/8 in the 2nd Innings at the end of Day 3. A brilliant bowling display from . Join us for Day 4 tomorrow morning pic.twitter.com/odI7NsmiL1
— BCCI (@BCCI)ರಾಂಚಿ ಟೆಸ್ಟ್: ದಕ್ಷಿಣ ಆಫ್ರಿಕಾ ಆಲೌಟ್ @162, ಫಾಲೋ ಆನ್’ಗೆ ಸಿಲುಕಿದ ಹರಿಣಗಳು
undefined
9 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟ ಆರಂಭಿಸಿದ ಆಫ್ರಿಕಾ ತಂಡ ಮೊದಲ ಓವರ್’ನಲ್ಲೇ ನಾಯಕ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡಿತು. ತೆಂಬ ಬವುಮಾ-ಜುಬೇರ್ ಹಮ್ಜಾ 91 ದಿಟ್ಟ ಹೋರಾಟ ನಡೆಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಹೆಚ್ಚು ಹೊತ್ತು ಬ್ಯಾಟ್ ಬೀಸಲು ಭಾರತೀಯ ಬೌಲರ್’ಗಳು ಅವಕಾಶ ನೀಡಲಿಲ್ಲ. ಪರಿಣಾಮ 162 ರನ್’ಗಳಿಗೆ ಆಲೌಟ್ ಆಗುವ ಮೂಲಕ ಫಾಲೋ ಆನ್’ಗೆ ಸಿಲುಕಿತು.
ಬಾಂಗ್ಲಾ ಟಿ20 ಸರಣಿಯಿಂದ ಈ ಕ್ರಿಕೆಟಿಗನಿಗೆ ಗೇಟ್ ಪಾಸ್..?
ಇನ್ನು 335 ರನ್’ಗಳ ಹಿನ್ನಡೆಯೊಂದಿಗೆ ಫಾಲೋ ಆನ್ ಹೇರಿಸಿಕೊಂಡು ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಮ್ಮೆ ಉಮೇಶ್ ಯಾದವ್ ತಾವೆಸೆದ ಮೊದಲ ಓವರ್’ನಲ್ಲೇ ಆಘಾತ ನೀಡಿದರು. ಡಿಕಾಕ್ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮೊದಲ ಇನಿಂಗ್ಸ್’ನಲ್ಲಿ ಅರ್ಧಶತಕ ಬಾರಿಸಿದ್ದ ಹಮ್ಜಾ ಶೂನ್ಯ ಸುತ್ತಿ ಶಮಿಗೆ ವಿಕೆಟ್ ಒಪ್ಪಿಸಿದರು. ಇನ್ನು ಡುಪ್ಲೆಸಿಸ್ ಆಟ 4 ರನ್’ಗೆ ಸೀಮಿತವಾದರೆ, ಬವುಮಾ ಸೊನ್ನೆ ಸುತ್ತಿ ಪೆವಿಲಿಯನ್ ಹಾದಿ ಹಿಡಿದರು. ಡೀನ್ ಎಲ್ಗಾರ್[16] ಗಾಯಗೊಂಡು ರಿಟೈರ್ಡ್ ಹರ್ಟ್ ಆದರು. ಎಲ್ಗಾರ್ ಹೊರತು ಪಡಿಸಿ ಅಗ್ರ ಐವರು ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ದಾಖಲಿಸಲು ವಿಫಲರಾದರು.
ಜಾರ್ಜ್ ಲಿಂಡೆ[27], ಡಿ ಬೃಯಾನ್ 30* ಹಾಗೂ ರಬಾಡ 12 ಕೆಲಕಾಲ ಪ್ರತಿರೋಧ ತೋರಿದರು. ಭಾರತ ಪರ ಶಮಿ 3 ವಿಕೆಟ್ ಪಡೆದರೆ, ಉಮೇಶ್ ಯಾದವ್ 2, ಜಡೇಜಾ ಹಾಗೂ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಭಾರತ: 497/9 ಡಿಕ್ಲೇರ್
ದಕ್ಷಿಣ ಆಫ್ರಿಕಾ: 162 ಹಾಗೂ 132/8
[* ಮೂರನೇ ದಿನದಾಟದ ಅಂತ್ಯಕ್ಕೆ]