ರೋಹಿತ್ ಶರ್ಮಾ ರಾಂಚಿ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಸಿಕ್ಸರ್ ನೆರವಿನೊಂದಿಗೆ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಸರಣಿಯಲ್ಲಿ ರೋಹಿತ್ ಬಾರಿಸಿದ ಮೂರನೇ ಟೆಸ್ಟ್ ಶತಕವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ರಾಂಚಿ[ಅ.19]: ರೋಹಿತ್ ಶರ್ಮಾ ಸಿಡಿಲಬ್ಬರದ ಶತಕ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಚಹಾ ವಿರಾಮಕ್ಕೂ ಮುನ್ನವೇ 184 ರನ್ ಬಾರಿಸಿದೆ. ಈ ಮೂಲಕ ಆರಂಭಿಕ ಆಘಾತದಿಂದ ಟೀಂ ಇಂಡಿಯಾ ಹೊರಬಂದಿದೆ. ರೋಹಿತ್ ಶರ್ಮಾ ಸಿಕ್ಸರ್’ನೊಂದಿಗೆ ಶತಕ ಪೂರೈಸಿದರು.
6th Test 💯✅
2000 Test runs ✅
Hitman 👏 pic.twitter.com/3WRePPZp3k
ಒಂದು ಹಂತದಲ್ಲಿ 39 ರನ್’ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಮುಂಬೈ ಆಟಗಾರರು ಆಸರೆಯಾದರು. ಈ ಜೋಡಿ ನಾಲ್ಕನೇ ವಿಕೆಟ್’ಗೆ [145*ರನ್] ಎಚ್ಚರಿಕೆಯ ಆಟವಾಡುವ ಮೂಲಕ ಶತಕದ ಜತೆಯಾಟ ನಿಭಾಯಿಸಿತು. ಅಂದಹಾಗೆ ಇದು ರೋಹಿತ್-ರಹಾನೆ ಟೆಸ್ಟ್ ಕ್ರಿಕೆಟ್’ನಲ್ಲಿ ಮೊದಲ ಟೆಸ್ಟ್ ಶತಕದ ಜತೆಯಾಟವಾಗಿದೆ.
ರಾಂಚಿ ಟೆಸ್ಟ್: ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ 71/3
ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್’ನಲ್ಲಿ ಶತಕ ಸಿಡಿಸಿ ಮಿಂಚಿದ್ದ ರೋಹಿತ್, ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 14 ರನ್ ಬಾರಿಸಿದ್ದರು. ಇದೀಗ ರಾಂಚಿ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಶತಕ ಬಾರಿಸಿ ಸಂಭ್ರಮಿಸಿದರು. ರೋಹಿತ್ ಕೇವಲ 132 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿದರು. ಇನ್ನು ರೋಹಿತ್’ಗೆ ಉತ್ತಮ ಸಾಥ್ ನೀಡಿದ ಉಪನಾಯಕ ಅಜಿಂಕ್ಯ ರಹಾನೆ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 70 ಎಸೆತಗಳಲ್ಲಿ ರಹಾನೆ ಅರ್ಧಶತಕ ಪೂರೈಸಿದರು. ಇದು ರಹಾನೆ ಬಾರಿಸಿದ 21ನೇ ಟೆಸ್ಟ್ ಅರ್ಧಶತಕವಾಗಿದೆ.