ರಾಂಚಿ ಟೆಸ್ಟ್: ಭಾರತಕ್ಕೆ ಮತ್ತೊಂದು ಆಘಾತ..!

By Web DeskFirst Published Oct 19, 2019, 10:37 AM IST
Highlights

ದಕ್ಷಿಣ ಆಫ್ರಿಕಾದ ಮಾರಕ ವೇಗಿ ಕಗಿಸೋ ರಬಾಡ ಭಾರತಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮಯಾಂಕ್ ಬಳಿಕ ಪೂಜಾರ ಅವರನ್ನು ರಬಾಡ ಪೆವಿಲಿಯನ್’ಗೆ ಅಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ರಾಂಚಿ[ಅ.19]: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಮಯಾಂಕ್ ಅಗರ್ವಾಲ್ ವಿಕೆಟ್ ಪತನದ ಬೆನ್ನಲ್ಲೇ ಇದೀಗ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೂಡಾ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ. ಇದೀಗ ಭಾರತ 16 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ; ಆರಂಭಿಕ ಆಘಾತ..!

ಈಗಾಗಲೇ 2 ಟೆಸ್ಟ್ ಪಂದ್ಯಗಳನ್ನು ಗೆದ್ದು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಟೆಸ್ಟ್ ಸರಣಿ ಕೈವಶ ಮಾಡಿಕೊಂಡಿರುವ ಭಾರತ, ರಾಂಚಿ ಟೆಸ್ಟ್ ಪಂದ್ಯವನ್ನೂ ಗೆಲ್ಲುವುದರ ಮೂಲಕ ಮೊದಲ ಬಾರಿಗೆ ಹರಿಣಗಳ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಉತ್ಸಾಹದಲ್ಲಿತ್ತು. ಆದರೆ ಆಫ್ರಿಕಾ ವೇಗಿ ಕಗಿಸೋ ರಬಾಡ ಆರಂಭದಲ್ಲೇ ವಿರಾಟ್ ಪಡೆಗೆ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಚೇತೇಶ್ವರ್ ಪೂಜಾರ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ನಿಗಟ್ಟಿದ್ದಾರೆ. 9 ಎಸೆತಗಳನ್ನು ಎದುರಿಸಿದ ಪೂಜಾರ ರಬಾಡ ಎಲ್’ಬಿ ಬಲೆಗೆ ಬಿದ್ದರು. ಅಂಪೈರ್ ಔಟ್ ನೀಡಲಿಲ್ಲ, ಹೀಗಾಗಿ ದಕ್ಷಿಣ ಆಫ್ರಿಕಾ ಡಿಆರ್ ಎಸ್ ಮೊರೆ ಹೋಯಿತು. ಮೂರನೇ ಅಂಪೈರ್ ಔಟ್ ಎಂದು ತೀರ್ಮಾನವಿತ್ತರು.

ರಾಂಚಿ ಟೆಸ್ಟ್: ಸರಣಿ ಕ್ಲೀನ್ ಸ್ವೀಪ್ ನಿರೀಕ್ಷೆಯಲ್ಲಿ ಟೀಂ ಇಂಡಿಯಾ

ವಿರಾಟ್ ಪಡೆಗೆ ಶಾಕ್: ಭಾರತ ತಂಡವು ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಉತ್ತಮವಾದ ಆರಂಭವನ್ನೇ ಪಡೆದಿತ್ತು. ವೈಜಾಗ್ ಟೆಸ್ಟ್ ಪಂದ್ಯದಲ್ಲಿ 324 ರನ್’ಗಳಿದ್ದಾಗ ಎರಡನೇ ವಿಕೆಟ್ ಕಳೆದುಕೊಂಡಿತ್ತು. ಇನ್ನು ಪುಣೆ ಟೆಸ್ಟ್ ಪಂದ್ಯದಲ್ಲೂ 163 ರನ್’ಗಳಿದ್ದಾಗ ಭಾರತದ ಎರಡನೇ ವಿಕೆಟ್ ಬಿದ್ದಿತ್ತು. ಆದರೆ ರಾಂಚಿ ಟೆಸ್ಟ್ ಪಂದ್ಯದಲ್ಲಿ ಕೇವಲ 16 ರನ್’ಗಳಾಗುವಷ್ಟರಲ್ಲೇ ಎರಡನೇ ವಿಕೆಟ್ ಪತನವಾಗಿದೆ.
 

click me!