KKR ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್; ತಂಡದಲ್ಲಿ 2 ಬದಲಾವಣೆ!

By Suvarna NewsFirst Published Apr 24, 2021, 6:50 PM IST
Highlights

ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿರುವ ಕೆಕೆಆರ್ ಹಾಗೂ ರಾಜಸ್ಥಾನ ರಾಯಲ್ಸ್ ಇದೀಗ ಗೆಲುವಿನ ಅದೃಷ್ಠ ಪರೀಕ್ಷೆ ನಡೆಸಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿನ ಬದಲಾವಣೆ ವಿವರ ಇಲ್ಲಿದೆ.

ಮುಂಬೈ(ಏ.24); ಐಪಿಎಲ್ 2021 ಟೂರ್ನಿಯ 18ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ರಾಜಸ್ಥಾನ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ.ಕೆಕೆಆರ್ ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ.  ಕಮಲೇಶ್ ನಾಗರಕೋಟಿ ಬದಲು ಶಿವಂ ಮಾವಿ ತಂಡ ಸೇರಿಕೊಂಡಿದ್ದಾರೆ.

 

Toss Update: have elected to bowl against at the Wankhede Stadium.

Follow the match 👉 https://t.co/oKLdD2Pi9R pic.twitter.com/esC17PIpn2

— IndianPremierLeague (@IPL)

ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು ಕೆಕೆಆರ್ ಒಂದು ಸ್ಥಾನಕ್ಕೆ ಮೇಲಕ್ಕೆ ಅಂದರೆ 7ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಆಡಿದ 4 ಪಂದ್ಯದಲ್ಲಿ ಒಂದೊಂದೆ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಗೆಲುವು ಅನಿವಾರ್ಯವಾಗಿದೆ.

click me!