ಐಪಿಎಲ್‌ ಪಂದ್ಯದಿಂದ 2 ಕೋಟಿ ರೂ ಜಾಕ್‌ಪಾಟ್, ರಾತ್ರೋರಾತ್ರಿ ಕೋಟ್ಯಾಧೀಶನಾದ ಕೂಲಿ ಕಾರ್ಮಿಕ!

By Suvarna NewsFirst Published Apr 26, 2023, 10:49 AM IST
Highlights

ದೇಶದಲ್ಲಿ ಐಪಿಎಲ್ ಜ್ವರ ಆವರಿಸಿದೆ. ಒಂದೆಡೆ ಪಂದ್ಯದ ರೋಚಕತೆ, ಮತ್ತೊಂದಡೆ ಆನ್‌ಲೈನ್ ಗೇಮಿಂಗ್ ಮೂಲಕ ಹಲವು ಅಭಿಮಾನಿಗಳು ಸಕ್ರಿಯರಾಗಿದ್ದಾರೆ. ಇಲ್ಲೊಬ್ಬ ಕೂಲಿ ಕಾರ್ಮಿಕನಿಗೆ ಐಪಿಎಲ್ ಪಂದ್ಯ ಜಾಕ್‌ಪಾಟ್ ತಂದಿದೆ. ಆನ್‌ಲೈನ್ ಗೇಮಿಂಗ್ ಮೂಲಕ ಬರೋಬ್ಬರಿ 2 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾನೆ. ರಾತ್ರೋರಾತ್ರಿ ಕೂಲಿ ಕಾರ್ಮಿಕ ಕೋಟ್ಯಾಧೀಶನರಾಗಿದ್ದಾನೆ.

ಜೈಪುರ(ಏ.26): ಐಪಿಎಲ್ ಟೂರ್ನಿ ಹಲವು ಕ್ರಿಕೆಟಿಗರನ್ನು ಕೋಟ್ಯಾಧೀಶರನ್ನಾಗಿ ಮಾಡಿದೆ. ಇದೇ ಐಪಿಎಲ್ ಟೂರ್ನಿ ಹಲವು ಅಭಿಮಾನಿಗಳನ್ನು ಸಾಲಗಾರರನ್ನಾಗಿಯೂ ಮಾಡಿದೆ. ಆದರೆ ಇದರಲ್ಲಿ ಕೆಲ ಅದೃಷ್ಠವಂತರೂ ಕೋಟ್ಯಾಧೀಶರಾಗಿದ್ದಾರೆ. ಇದೀಗ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಕೂಲಿ ಕಾರ್ಮಿಕ ರಾತ್ರೋರಾತ್ರಿ ಐಪಿಎಲ್ ಪಂದ್ಯದಿಂದ ಕೋಟ್ಯಾಧೀಶನಾಗಿದ್ದಾನೆ. ಆನ್‌ಲೈನ್ ಗೇಮಿಂಗ್‌ನಲ್ಲಿ ಸಕ್ರಿಯನಾಗಿದ್ದ ಕೂಲಿ ಕಾರ್ಮಿಕ ಬರೋಬ್ಬರಿ 2 ಕೋಟಿ ರೂಪಾಯಿ ಜಾಕ್‌ಪಾಟ್ ಪಡೆದಿದ್ದಾನೆ. ಕೂಲಿ ಕಾರ್ಮಿಕ ಇದೀಗ ಒಂದೇ ರಾತ್ರಿಯಲ್ಲಿ ಶ್ರೀಮಂತನಾಗಿದ್ದಾನೆ.

ಐಪಿಎಲ್ ಟೂರ್ನಿಯಷ್ಟೇ ಆನ್‌ಲೈನ್ ಗೇಮಿಂಗ್ ಕೂಡ ಜನಪ್ರಿಯವಾಗಿದೆ. ಐಪಿಎಲ್ ಟೂರ್ನಿಯಲ್ಲಿ ಹಲವರು ಆನ್‌ಲೈನ್ ಗೇಮಿಂಗ್ ಮೂಲಕ ಆಟ ಶುರುಮಾಡುತ್ತಾರೆ. ಮೈದಾನದಲ್ಲಿ ಕ್ರಿಕೆಟಿಗರ ರೋಚಕ ಹೋರಾಟವಾದರೆ, ಇತ್ತ ಆನ್‌ಲೈನ್ ಗೇಮಿಂಗ್ ಮೂಲಕ ಮತ್ತೊಂದು ಅಭಿಮಾನಿಗಳ ಲೆಕ್ಕಾಚಾರ ನಡೆಯುತ್ತಿರುತ್ತದೆ. ಹೀಗೆ ಆನ್‌ಲೈನ್ ಗೇಮ್‌ನಲ್ಲಿ ತೊಡಗಿಸಿಕೊಂಡ ಕೂಲಿ ಕಾರ್ಮಿಕ 2 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾನೆ.

Latest Videos

ಅದೃಷ್ಟ ಅಂದ್ರೆ ಇದು: ಆನ್‌ಲೈನ್ ಗೇಮಿಂಗ್ ಆ್ಯಪ್‌ನಿಂದ ರಾತ್ರೋರಾತ್ರಿ 1.5 ಕೋಟಿ ಗೆದ್ದ ಚಾಲಕ..!

ಇದೀಗ ಕೂಲಿ ಕಾರ್ಮಿಕ ಐಪಿಎಲ್ ಸ್ಟಾರ್ ಆಗಿದ್ದಾನೆ. ಕೂಲಿ ಕಾರ್ಮಿಕರು, ಗ್ರಾಮಸ್ಥರು ಈತನ ಮನೆಗೆ ಆಗಮಿಸಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಕೂಲಿ ಕಾರ್ಮಿಕನಿಂದ ಸ್ಪೂರ್ತಿ ಪಡೆದಿರುವ ಹಲವರು ಆನ್‌ಲೈನ್ ಗೇಮಿಂಗ್ ಆ್ಯಪ್‌ನಲ್ಲಿ ಆಟ ಶುರು ಮಾಡಿದ್ದಾರೆ.ಆನ್‌ಲೈನ್ ಗೇಮಿಂಗ್‌ನಲ್ಲಿ ಅಪಾಯವೂ ಹೆಚ್ಚಿದೆ. ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಜಾಗರೂಕತೆಯಿಂದ ಆಡಿ ಅನ್ನೋ ಷರತ್ತು ಜಾಹೀರಾತಿನಲ್ಲೇ ಹೇಳಲಾಗಿದೆ. 

ಕಳೆದ ವರ್ಷ ಮೇ ತಿಂಗಳಲ್ಲಿ ಇದೇ ಐಪಿಎಲ್ ಮೂಲಕ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ವಾಸೀಮ್ ರಾಜಾ 2 ಕೋಟಿ ರೂಪಾಯಿ ಜಾಕ್‌ಪಾಟ್ ಪಡೆದಿದ್ದರು. ವಾಸೀಮ್ ರಾಜಾ 2020ರಿಂದ ಡ್ರೀಮ್ 11 ಗೇಮಿಂಗ್ ಆ್ಯಪ್‌ನಲ್ಲಿ ಆಡುತ್ತಿದ್ದಾರೆ. ಆದರೆ ಹಣ ಕಳೆದುಕೊಂಡಿದ್ದೇ ಹೆಚ್ಚು. 2022ರ ಮೇ 22ರಂದು ಜಾಕ್‌ಪಾಟ್ ಹೊಡೆದಿತ್ತು. ವಾಸೀಮ್ ರಾಜಾ ಮೊದಲ ಸ್ಥಾನ ಪಡೆದು 2 ಕೋಟಿ ರೂಪಾಯಿ ಬಹುಮಾನ ಪಡೆದಿದ್ದರು. 

2 ಕೋಟಿ ರೂಪಾಯಿ ಬಹುಮಾನ ಗೆದ್ದ ಬಳಿಕ ಮಾತನಾಡಿದ್ದ ವಾಸೀಮ್ ರಾಜ, ನನ್ನ ತಾಯಿಯ ಆರೋಗ್ಯ, ಚಿಕಿತ್ಸೆಗೆ ನೆರವಾಗಿದೆ. ನಮ್ಮದು ಮಧ್ಯಮ ವರ್ಗ. ತಾಯಿಗೆ ಚಿಕಿತ್ಸೆಗೆ ಹೆಚ್ಚಿನ ಹಣ ಬೇಕಿತ್ತು. ಇದೀಗ ಈ ಹಣದಲ್ಲಿ ತಾಯಿಗೆ ಉತ್ತಮ ಚಿಕ್ತಿತ್ಸೆ ಕೊಡಿಸಬೇಕು. ನಾವು ಆರ್ಥಿಕ ಸಂಕಷ್ಟದಲ್ಲಿದ್ದೇವು. ಇದೀಗ ಈ ಸಂಕಷ್ಟದಿಂದ ಹೊರಬಂದಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದರು.

 

58 ಸಾವಿರ ಕೋಟಿ ರೂ. ಆನ್‌ಲೈನ್‌ ಬಹುಮಾನಕ್ಕೆ ತೆರಿಗೆಯೇ ಬಂದಿಲ್ಲ: ಟ್ಯಾಕ್ಸ್‌ ವಂಚಕರಿಗೆ IT Notice

ಆನ್‌ಲೈನ್ ಗೇಮಿಂಗ್ ಮೂಲಕ ಕೆಲವೇ ಕೆಲವು ಮಂದಿ ಕೋಟ್ಯಾಧೀಶರಾಗಿದ್ದಾರೆ. ಆದರೆ ಬಹುತೇಕರು ಹಣಕಳೆದುಕೊಂಡಿದ್ದಾರೆ. ಆನ್‌ಲೈನ್ ಗೇಮಿಂಗ್ ಜೊತೆಗೆ ಬೆಟ್ಟಿಂಗ್ ಮೂಲಕವೂ ಹಲವರು ಹಣ ಕಳೆದುಕೊಂಡಿದ್ದಾರೆ. ಆನ್‌ಲೈನ್ ಗೇಮಿಂಗ್ ಆ್ಯಪ್ ನಿಷೇಧಿಸಬೇಕು ಅನ್ನೋ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ಕುರಿತು ಕೆಲ ರಾಜ್ಯಗಳು ದಿಟ್ಟ ಕ್ರಮ ಕೈಗೊಂಡಿದೆ. ಆದರೆ ಸಂಪೂರ್ಣವಾಗಿ ಭಾರತದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್ ಆ್ಯಪ್ ನಿಷೇಧವಾಗಿಲ್ಲ. 
 

click me!