IPL 2023: ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಡಿದ ಕನ್ನಡದ ಕುಡಿ!

Published : Apr 25, 2023, 09:22 PM ISTUpdated : Apr 25, 2023, 09:27 PM IST
IPL 2023: ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಡಿದ ಕನ್ನಡದ ಕುಡಿ!

ಸಾರಾಂಶ

ಕರ್ನಾಟಕ ತಂಡದ ಆಟಗಾರ ಅಭಿನವ್‌ ಮನೋಹರ್‌, ಡೇವಿಡ್‌ ಮಿಲ್ಲರ್‌ ಹಾಗೂ ರಾಹುಲ್‌ ಟೆವಾಟಿಯಾ ಕೊನೇ ಹಂತದಲ್ಲಿ ಅಬ್ಬರದ ಆಟವಾಡಿದ್ದರಿಂದ ಗುಜರಾತ್‌ ಟೈಟಾನ್ಸ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಬೃಹತ್‌ ಮೊತ್ತ ಕಲೆಹಾಕಿದೆ.  

ಅಹಮದಾಬಾದ್‌ (ಏ.25): ಪಂದ್ಯದ ಕೊನೆಯ ಹಂತದಲ್ಲಿ ಕರ್ನಾಟಕದ ಆಟಗಾರ ಅಭಿನವ್‌ ಮನೋಹರ್‌, ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್‌ ಹಾಗೂ ರಾಹುಲ್‌ ಟೆವಾಟಿಯಾ ಅವರ ಸ್ಫೋಟಕ ಇನ್ನಿಂಗ್ಸ್‌ಗಳ ಬೆನ್ನ್ಏರಿದ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡ 2023ರ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಅಲ್ಪ ಮೊತ್ತವನ್ನು ರಕ್ಷಿಸಿಕೊಳ್ಳುವ ಮೂಲಕ ತನ್ನ ಬೌಲಿಂಗ್‌ ಶಕ್ತಿಯನ್ನು ಪರಿಚಯ ಮಾಡಿದ್ದ ಗುಜರಾತ್‌ ಟೈಟಾನ್ಸ್‌ ತಂಡ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತನ್ನ ಬ್ಯಾಟಿಂಗ್‌ ಪ್ರತಾಪವನ್ನು ತೋರಿತು. ಈ ಮೂವರ ಆರ್ಭಟದೊಂದಿಗೆ ಆರಂಭಿಕ ಆಟಗಾರ ಶುಭಮನ್‌ ಗಿಲ್ (56 ರನ್,‌ 34 ಎಸೆತ, 7 ಬೌಂಡರಿ, 1 ಸಿಕ್ಸರ್‌) ಆಡಿದ ಆಕರ್ಷಕ ಇನ್ನಿಂಗ್ಸ್‌ ಕೂಡ ಗುಜರಾತ್‌ ಟೈಟಾನ್ಸ್‌ಗೆ ನೆರವಾಯಿತು. ಇದರಿಂದಾಗಿ ಮುಂಬೈ ಇಂಡಿಯನ್ಸ್‌ ತಂಡದ ಬಲಿಷ್ಠ ಬೌಲಿಂಗ್‌ ಎದುರು ಗುಜರಾತ್‌ ಟೈಟಾನ್ಸ್‌ 6 ವಿಕಟ್‌ಗೆ 207 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಇದು ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಈವರೆಗಿನ ಗರಿಷ್ಠ ಮೊತ್ತ ಎನಿಸಿದೆ. ಇದಕ್ಕೂ ಮುನ್ನ ಕೆಕೆಆರ್‌ ವಿರುದ್ಧ ಇದೇ ವರ್ಷ 4 ವಿಕೆಟ್‌ಗೆ 204 ರನ್‌ ಬಾರಿಸಿದ್ದು ತಂಡದ ಐಪಿಎಲ್‌ನ ಗರಿಷ್ಠ ಮೊತ್ತವಾಗಿತ್ತು.

13ನೇ ಓವರ್‌ನ ವೇಳೆಗೆ 4 ವಿಕೆಟ್‌ಗೆ 101 ರನ್‌ ಪೇರಿಸಿದ್ದ ಗುಜರಾತ್‌ ಟೈಟಾನ್ಸ್‌ ತಂಡ 200 ರನ್‌ ದಾಟುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ, ಅಭಿನವ್‌ ಮನೋಹರ್‌ (42ರನ್‌, 21 ಎಸೆತ, 3 ಬೌಂಡರಿ, 3 ಸಿಕ್ಸರ್‌), ಡೇವಿಡ್‌ ಮಿಲ್ಲರ್‌ (46 ರನ್,‌ 22 ಎಸೆತ, 2 ಬೌಂಡರಿ, 4 ಸಿಕ್ಸರ್‌) ಹಾಗೂ ರಾಹುಲ್‌ ಟೆವಾಟಿಯಾ (20ರನ್‌, 5 ಎಸೆತ, 3 ಸಿಕ್ಸರ್‌) ಸಾಹಸದಿಂದ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶ ಕಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ