ರಾಹುಲ್ ದ್ರಾವಿಡ್ ಮಾರ್ಗದರ್ಶನ ನೆರವಾಯ್ತು-ಕೆ.ಎಲ್.ರಾಹುಲ್!

By Web DeskFirst Published Feb 28, 2019, 9:55 PM IST
Highlights

ಕಾಫಿ ವಿತ್ ಕರಣ್ ಟಿವಿ ಶೋನಲ್ಲಿ ವಿವಾದಿತ ಹೇಳಿಕೆಯಿಂದ ಟೀಂ ಇಂಡಿಯಾದಿಂದ ಅಮಾನತಾದ ಕ್ರಿಕೆಟಿಗ ಕೆ.ಎಲ್.ರಾಹುಲ್ ಇದೀಗ ಅದ್ಬುತ ಪ್ರದರ್ಶನ ಮೂಲಕ ಹಿನ್ನೆಡೆಯಿಂದ ಹೊರಬಂದಿದ್ದಾರೆ. ರಾಹುಲ್ ತಮ್ಮ ಯಶಸ್ಸಿಗೆ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನ ಕಾರಣ ಎಂದಿದ್ದಾರೆ.
 

ಬೆಂಗಳೂರು(ಫೆ.28): ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಫಾರ್ಮ್‌ಗೆ ಮರಳಿರುವುದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಕಾಫಿ ವಿತ್ ಕರಣ್ ಶೋನಲ್ಲಿನ ವಿವಾದ ರಾಹುಲ್ ಕರಿಯರ್‌ಗೆ ಕಪ್ಪು ಚುಕ್ಕೆ ಇಟ್ಟಿತು. ಅಮಾನತು ಶಿಕ್ಷೆಯಿಂದ ತವರಿಗೆ ವಾಪಾಸಾದ ರಾಹುಲ್‌ಗೆ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೆರವಾಗಿದೆ ಎಂದು ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ- ಕೊಹ್ಲಿ, ಧೋನಿಗೆ ಬಡ್ತಿ!

ಅಮಾನತು ಶಿಕ್ಷೆ ಹಿಂಪಡೆ ಬಿಸಿಸಿಐ ರಾಹುಲ್‌ಗೆ ಭಾರತ ಎ ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿತು.  ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಕೆ.ಎಲ್.ರಾಹುಲ್ ಆರಂಭದಲ್ಲಿ ಎಡವಿದ್ದರೂ ಬಳಿಕ ಉತ್ತಮ ಪ್ರದರ್ಶನ ನೀಡಿದರು. ಇಷ್ಟೇ ಅಲ್ಲ ರಾಹುಲ್ ನೀಡಿರುವ ಸಲಹೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ನೆರವಾಯ್ತು ಎಂದು ರಾಹುಲ್ ಹೇಳಿದ್ದಾರೆ.

"

ಇದನ್ನೂ ಓದಿ: ಪಂದ್ಯದಲ್ಲಿ ಮುಗ್ಗರಿಸಿದರೂ ಧೋನಿ ಶ್ಲಾಘಿಸಿದ ಬಿಸಿಸಿಐ !

ಆಸ್ಟ್ರೇಲಿಯಾ ವಿರುದ್ಧದ 2 ಪಂದ್ಯದ ಟಿ20 ಸರಣಿಯಲ್ಲಿ ರಾಹುಲ್ 90  ರನ್ ಸಿಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ರಾಹುಲ್, ದ್ವಿತೀಯ ಪಂದ್ಯದಲ್ಲಿ 47 ರನ್ ಭಾರಿಸಿದ್ದರು. ಈ ಮೂಲಕ ಟೀಂ ಇಂಡಿಯಾಗೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದರು.
 

click me!