ಭಾರತ-ಆಸ್ಟ್ರೇಲಿಯಾ ಹೈದರಾಬಾದ್ ಪಂದ್ಯಕ್ಕೆ ಹೆಚ್ಚಿನ ಭದ್ರತೆ!

By Web Desk  |  First Published Feb 28, 2019, 7:49 PM IST

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಗಿದ ಬೆನ್ನಲ್ಲೇ ಇದೀಗ ಏಕದಿನ ಸರಣಿಗೆ ತಯಾರಿ ಆರಂಭವಾಗಿದೆ. ಮೊದಲ ಪಂದ್ಯ ಹೈದರಾಬಾದ್‌ನ ಉಪ್ಪಳ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿಯಿಂದ ಹೈದರಾಬಾದ್ ಪಂದ್ಯಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.


ಹೈದರಾಬಾದ್(ಫೆ.28): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಮಾರ್ಚ್ 02 ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯಕ್ಕೆ ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣ ಆತಿಥ್ಯವಹಿಸಿದೆ. ಆದರೆ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ಹೈದರಾಬಾದ್ ಪಂದ್ಯಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.

ಇದನ್ನೂ ಓದಿ: ಉಗ್ರರನ್ನು ಬೆಂಬಲಿಸುವ ಪಾಕ್ ತಂಡವನ್ನು ಬಹಿಷ್ಕರಿಸಿ: ವಿನೋದ್ ರಾಯ್

Tap to resize

Latest Videos

ಕ್ರೀಡಾಂಗಣದ ಸುತ್ತ 200 ಹೆಚ್ಚಿನ ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದೆ. ಇದಕ್ಕಾಗಿ ಕಂಟ್ರೋಲ್ ರೂಂನಿಂದ ಎಲ್ಲಾ ಸಿಸಿಟಿ ಫೂಟೇಜ್ ಮೇಲೆ ನಿಗಾವಹಿಸಲಾಗುವುದು. ಸ್ಕಾನರ್, ಬಾಂಬ್ ಸ್ಕ್ವಾಡ್, ಸ್ನಿಫರ್ ಡಾಗ್ಸ್, ಹೆಚ್ಚುವರಿ ಪೊಲೀಸ್ ಸೇರಿದಂತೆ ಗರಿಷ್ಠ ಭದ್ರತೆ ನಿಯೋಜಿಸಲಾಗಿದೆ ಎಂದು ರಾಕೊಂಡ ಪೊಲೀಸ್ ಕಮೀಶನರ್ ಮಹೇಳ್ ಭಾಗವತ್ ಹೇಳಿದ್ದಾರೆ. 

ಇದನ್ನೂ ಓದಿ: ಪಾಕ್ ವಿರುದ್ಧ ವಿಶ್ವಕಪ್: ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ

ಅವಶ್ಯಕತೆ ಬಿದ್ದಲ್ಲಿ ಸೇನೆಯನ್ನೂ ಬಳಿಸಿಕೊಳ್ಳಲಾಗುವುದು ಎಂದು ಮಹೇಶ್ ಭಾಗವತ್ ಹೇಳಿದ್ದಾರೆ. ಆಟಗಾರರು, ವಿವಿಐಪಿ, ಅಭಿಮಾನಿಗಳು, ಸಾರ್ವಜನಿಕರಿಗೆ ಸೂಕ್ತ ಭದ್ರತೆ ನೀಡಲಾಗುವುದು. ಹೀಗಾಗಿ ಯಾರೂ ಕೂಡ ಆತಂಕಕ್ಕೆ ಒಳಗಾಗೋ ಅವಶ್ಯಕತೆ ಇಲ್ಲ ಎಂದಿದ್ದಾರೆ. 

click me!