ಕೌಂಟಿ ಕ್ರಿಕೆಟ್ ಆಡಲು ರೆಡಿಯಾದ ಟೀಂ ಇಂಡಿಯಾ ಆಟಗಾರ..!

By Suvarna News  |  First Published Jan 17, 2020, 4:43 PM IST

ಟೀಂ ಇಂಡಿಯಾ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುಂಬರುವ ಐಪಿಲ್ ಬಳಿಕ ಕೌಂಟಿ ಕ್ರಿಕೆಟ್ ಆಡಲು ಯಾರ್ಕ್ಶೈರ್‌ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ಲಂಡನ್‌(ಜ.17): ಭಾರತದ ಹಿರಿಯ ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌ ಇಂಗ್ಲೆಂಡ್‌ನ ಯಾರ್ಕ್ಶೈರ್‌ ಕೌಂಟಿ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ವರ್ಷ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವರ್ಷದ ಐಪಿಎಲ್‌ ಮುಗಿದ ಬಳಿಕ ಇಂಗ್ಲೆಂಡ್‌ಗೆ ತೆರಳಲಿರುವ ಅಶ್ವಿನ್‌, ಕನಿಷ್ಠ 8 ಪಂದ್ಯಗಳನ್ನು ಆಡಲಿದ್ದಾರೆ. ಅಶ್ವಿನ್‌ 3ನೇ ಬಾರಿಗೆ ಕೌಂಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಅವರು ವೊರ್ಚೆಸ್ಟರ್‌ಶೈರ್‌ ಹಾಗೂ ನಾಟಿಂಗ್‌ಹ್ಯಾಮ್‌ಶೈರ್‌ ತಂಡಗಳನ್ನು ಪ್ರತಿನಿಧಿಸಿದ್ದರು.

Tap to resize

Latest Videos

ಗೆಲ್ಲುವ ಮುನ್ನವೇ ಸಂಭ್ರಮ; ಪೇಚಿಗೆ ಸಿಲುಕಿದ ಆರ್ ಅಶ್ವಿನ್!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದೆರಡು ಆವೃತ್ತಿಗಳಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ರವಿಚಂದ್ರನ್ ಅಶ್ವಿನ್, 2020ನೇ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಾಣಿಸಿಕೊಳ್ಳಲಿದ್ದಾರೆ.  ಭಾರತ ಪರ 70 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ 362 ವಿಕೆಟ್ ಕಬಳಿಸಿದ್ದಾರೆ.

 

click me!