ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ವಿಶ್ವವೇ ಲಾಕ್‌ಡೌನ್‌ತ್ತ ಹೆಜ್ಜೆ ಇಡುತ್ತಿದೆ. ಒಂದೊಂದೆ ರಾಷ್ಟ್ರಗಳು ಲಾಕ್‌ಡೌನ್ ಆಗುತ್ತಿವೆ. ಸಾವಿನ ಸಂಖ್ಯೆ ಜೊತೆಗೆ ಸೋಂಕಿತರ ಸಂಖ್ಯೆ ನಿಮಿಷ ನಿಮಿಷಕ್ಕೂ ಹೆಚ್ಚಾಗುತ್ತಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟಿಗ ತನ್ನ ಚಿಕನ್ ಶಾಪ್ ಮುಚ್ಚಿ, ಅದೇ ಅಂಗಡಿಯಲ್ಲಿ ಆಸ್ಪತ್ರೆ ಸಿಬ್ಬಂಧಿಗಳಿಗೆ ಉಚಿತ ಊಟ ನೀಡಲಾಗುತ್ತಿದೆ.
ಲಂಡನ್(ಮಾ.25): ಕರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು 21 ದಿನಗಳ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಿದ್ದಾರೆ. ಇಂದಿನಿಂದ ಭಾರತ ಸಂಪೂರ್ಣ ಬಂದ್ ಆಗಿದೆ. ಅತ್ತ ಲಂಡನ್‌ಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಸೋಂಕಿತರ ಸಂಖ್ಯೆ 6,600 ದಾಟಿದೆ. ಇನ್ನು ಸಾವಿನ ಸಂಖ್ಯೆ 335ಕ್ಕೇರಿದೆ. ಹೀಗಾಗಿ ಇಂಗ್ಲೆಂಡ್ ಸಂಪೂರ್ಣ ಬಂದ್ ಆಗಿದೆ. ಇದೀಗ ಲಂಡನ್‌ನಲ್ಲಿ ಅತೀ ದೊಡ್ಡ ಚಿಕನ್ ಶಾಪ್ ಹೊಂದಿದ್ದ, ಇಂಗ್ಲೆಂಡ್ ಕ್ರಿಕೆಟಿಗ ರವಿ ಬೋಪಾರ ಇದೀಗ ಶಾಪ್ ಮುಚ್ಚಿದ್ದು, ಅದೇ ಅಂಗಡಿಯಲ್ಲಿ ಆಸ್ಪತ್ರೆ ಸಿಬ್ಬಂದಿಗಳಿಗೆ ಉಚಿತ ನೀಡಲಾಗುತ್ತಿದೆ.
ಕ್ರಿಕೆಟಿಗ ರವಿ ಬೋಪಾರ ಲಂಡನ್‌ನ ಅತೀ ದೊಡ್ಡ ಚಿಕನ್ ಶಾಪ್ ಸ್ಯಾಮ್ಸ್ ಚಿಕನ್ ಇದೀಗ ಬಾಗಿಲು ಮುಚ್ಚಿದೆ. ಇದೇ ಶಾಪ್‌ನಲ್ಲೀಗ ರಾಷ್ಟ್ರೀಯ ಆರೋಗ್ಯ ಸೇವೆ(NHS) ಸಿಬ್ಬಂದಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಇದೀಗ ರವಿ ಬೋಪಾರ ಅವರ ಇಂಗ್ಲೆಂಡ್‌ನಲ್ಲಿರುವ ಸ್ಯಾಮ್ ಚಿಕನ್ ಶಾಖೆಗಳಲ್ಲೂ ಆಸ್ಪತ್ರೆ ಸಿಬ್ಬಂದಿ, ಪೊಲೀಸರಿಗೆ ಉಚಿತ ಊಟ ನೀಡಲಾಗುತ್ತಿದೆ.
ರವಿ ಬೋಪಾರ ತಮ್ಮ ಟ್ವಿಟರ್ ಖಾತೆಯಲ್ಲಿ ಉಚಿತ ಊಟದ ವ್ಯವಸ್ಥೆ ಕುರಿತು ಮಾಹಿತಿ ನೀಡಿದ್ದಾರೆ. ನಮ್ಮ ಹೀರೋಗಳಿಗೆ ಉಚಿತ ಊಟ ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ವಿಶ್ವದ ಸೋಂಕಿತರ ಸಂಖ್ಯೆ 4 ಲಕ್ಷಕ್ಕೆ ಏರಿದೆ. ಇಂಗ್ಲೆಂಡ್‌ನಲ್ಲಿನ ಎಲ್ಲಾ ಸಭೆ, ಸಮಾರಂಭ, ಕಾರ್ಯ ಕಲಾಪ ರದ್ದಾಗಿದೆ.
Dear NHS staff, your chicken is on me for your hard work in these tough times. 😁 pic.twitter.com/blBwedX0fI
— Ravi Bopara (@ravibopara)ಇಂಗ್ಲೆಂಡ್ ಬೋಪಾರ ಪರ 13ಟೆಸ್ಟ್, 120 ಏಕದಿನ ಹಾಗೂ 38 ಏಕದಿನ ಪಂದ್ಯ ಆಡಿದ್ದಾರೆ. ಕ್ರಮವಾಗಿ 575, 2695 ಹಾಗೂ 711 ರನ್ ಸಿಡಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದಾರೆ. 2020ರಲ್ಲಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದ ರವಿ ಬೋಪಾರ ಕರೋನಾ ವೈರಸ್‌ನಿಂದ ಪಾಕ್ ಸೂಪರ್ ಲೀಗ್ ಕೂಡ ರದ್ದಾಗಿದೆ.