IPL 2024 : ಮಯಾಂಕ್‌ ಯಾದವ್‌ ವೇಗಕ್ಕೆ ತತ್ತರಿಸಿದ ಆರ್‌ಸಿಬಿಗೆ 28 ರನ್‌ ಸೋಲು

By Kannadaprabha News  |  First Published Apr 3, 2024, 6:36 AM IST

ಟಾಸ್‌ ಗೆದ್ದು ಮೊದಲು ಬೌಲ್‌ ಮಾಡಲು ಇಳಿದ ಆರ್‌ಸಿಬಿ, ತಂಡದಲ್ಲಿ ಮಾಡಿದ ಒಂದೇ ಒಂದು ಬದಲಾವಣೆ ಫಲ ನೀಡಲಿಲ್ಲ. ಕಳೆದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದ ವೈಶಾಖ್‌ ವಿಜಯ್‌ಕುಮಾರ್‌ರನ್ನು ಏಕೆ ಆಡಿಸುತ್ತಿಲ್ಲ ಎನ್ನುವ ಗೊಂದಲ ಬಗೆಹರಿಯುವ ಮೊದಲೇ ಕ್ವಿಂಟನ್‌ ಡಿ ಕಾಕ್‌, ಆರ್‌ಸಿಬಿ ಬೌಲರ್‌ಗಳಿಗೆ ಚಚ್ಚಲು ಶುರು ಮಾಡಿದ್ದರು.


ಬೆಂಗಳೂರು: ಹೊಸ ಅಧ್ಯಾಯ ಎಂದು ಹೇಳಿಕೊಂಡು 2024ರ ಐಪಿಎಲ್‌ನಲ್ಲಿ ಆಡುತ್ತಿರುವ ಆರ್‌ಸಿಬಿಯಿಂದ ಯಾವ ಹೊಸತನವೂ ಕಾಣುತ್ತಿಲ್ಲ. ಸೋಲುವ ರೀತಿಯೂ ಬದಲಾಗಿಲ್ಲ. ಮಂಗಳವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 28 ರನ್‌ಗಳ ಹೀನಾಯ ಸೋಲು ಕಂಡ ಬೆಂಗಳೂರು, ಅಂಕಪಟ್ಟಿಯಲ್ಲಿ ಮೇಲೇಳಲೂ ಇಲ್ಲ.

ಇನ್ನು ತಂಡವೊಂದು ಗೆಲ್ಲುವುದು, ಸೋಲುವುದು ಕ್ರಿಕೆಟ್‌ನಲ್ಲಿ ಇದ್ದಿದ್ದೇ. ಆದರೆ ಸಾವಿರಾರು ರು. ಖರ್ಚು ಮಾಡಿ ಟಿಕೆಟ್‌ ಖರೀದಿಸಿ ಸ್ಟೇಡಿಯಂಗೆ ಬಂದಿದ್ದ 30,000ಕ್ಕೂ ಹೆಚ್ಚು ಅಭಿಮಾನಿಗಳು ಅತಿ ಅಪರೂಪದ ಬೌಲಿಂಗ್‌ ಸ್ಪೆಲ್‌ಗೆ ಸಾಕ್ಷಿಯಾದರು. ಭಾರತೀಯ ವೇಗಿಯೊಬ್ಬ ಗಂಟೆಗೆ 157 ಕಿ.ಮೀ. ವೇಗದಲ್ಲಿ ಬೌಲ್‌ ಮಾಡುವುದನ್ನು ನೋಡುವ ಅವಕಾಶ ಸಿಕ್ಕಿತು. 21 ವರ್ಷದ ‘ಬೌಲಿಂಗ್‌ ಮಷಿನ್‌’, ಲಖನೌ ತಂಡದ ಮಯಾಂಕ್‌ ಯಾದವ್‌, ಆರ್‌ಸಿಬಿ ಬ್ಯಾಟರ್‌ಗಳನ್ನು ನಡುಗಿಸಿದರು.

Tap to resize

Latest Videos

ಬೆಂಗಳೂರಿನಲ್ಲಿ ಆರ್‌ಸಿಬಿಗೆ 182 ರನ್ ಟಾರ್ಗೆಟ್, ಲಖನೌ ವಿರುದ್ಧ ಚೇಸಿಂಗ್ ವಿಶ್ವಾಸದಲ್ಲಿ ಫ್ಯಾನ್ಸ್!

ಟಾಸ್‌ ಗೆದ್ದು ಮೊದಲು ಬೌಲ್‌ ಮಾಡಲು ಇಳಿದ ಆರ್‌ಸಿಬಿ, ತಂಡದಲ್ಲಿ ಮಾಡಿದ ಒಂದೇ ಒಂದು ಬದಲಾವಣೆ ಫಲ ನೀಡಲಿಲ್ಲ. ಕಳೆದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದ ವೈಶಾಖ್‌ ವಿಜಯ್‌ಕುಮಾರ್‌ರನ್ನು ಏಕೆ ಆಡಿಸುತ್ತಿಲ್ಲ ಎನ್ನುವ ಗೊಂದಲ ಬಗೆಹರಿಯುವ ಮೊದಲೇ ಕ್ವಿಂಟನ್‌ ಡಿ ಕಾಕ್‌, ಆರ್‌ಸಿಬಿ ಬೌಲರ್‌ಗಳಿಗೆ ಚಚ್ಚಲು ಶುರು ಮಾಡಿದ್ದರು. ತವರಿನ ಆಟಗಾರರ ಕೆ.ಎಲ್‌.ರಾಹುಲ್‌ (20) ಹಾಗೂ ದೇವದತ್‌ ಪಡಿಕ್ಕಲ್‌ (06) ಬೇಗನೆ ಔಟದರೂ, ಮಾಜಿ ಆರ್‌ಸಿಬಿ ಆಟಗಾರ ಡಿ ಕಾಕ್‌ (56 ಎಸೆತದಲ್ಲಿ 81 ರನ್‌), ಸತತ 2ನೇ ಅರ್ಧಶತಕ ದಾಖಲಿಸಿದರು.

ಆರ್‌ಸಿಬಿ ಬೌಲರ್‌ಗಳು 16ನೇ ಓವರ್‌ ವರೆಗೂ ಉತ್ತಮ ದಾಳಿ ನಡೆಸಿದರು. ಆ ಹಂತದಲ್ಲಿ ಲಖನೌ 160 ರನ್‌ ತಲುಪಿದರೆ ಹೆಚ್ಚು ಎನ್ನುವಂತಿತ್ತು. ಆದರೆ ನಿಕೋಲಸ್‌ ಪೂರನ್‌, ಆರ್‌ಸಿಬಿ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. 21 ಎಸೆತದಲ್ಲಿ 5 ಸಿಕ್ಸರ್‌ಗಳೊಂದಿಗೆ 40 ರನ್ ಚಚ್ಚಿದರು. ಲಖನೌ 181 ರನ್‌ ಕಲೆಹಾಕಿತು.

IPL 2024: ಲಖನೌ ಎದುರು ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ, ಒಂದು ಮಹತ್ವದ ಬದಲಾವಣೆ..!

‘ಕೆ.ಜಿ.ಎಫ್‌’ ಫ್ಲಾಪ್‌: ಇಬ್ಬರು ಎಡಗೈ ಸ್ಪಿನ್ನರ್‌ಗಳೊಂದಿಗೆ ಬೌಲಿಂಗ್‌ ಆರಂಭಿಸಿದ ಲಖನೌಗೆ ಯಶಸ್ಸು ಸಿಕ್ಕಿತು. ಚೊಚ್ಚಲ ಐಪಿಎಲ್‌ ಪಂದ್ಯವಾಡಿದ ಎಂ.ಸಿದ್ಧಾರ್ಥ್‌, ವಿರಾಟ್‌ ಕೊಹ್ಲಿ(22)ಯ ವಿಕೆಟ್‌ ಕಿತ್ತರು. ಡು ಪ್ಲೆಸಿ 19 ರನ್‌ ಗಳಿಸಿ ರನೌಟ್‌ ಆದರೆ, ಮಯಾಂಕ್‌ರ ಪ್ರಚಂಡ ವೇಗಕ್ಕೆ ಮ್ಯಾಕ್ಸ್‌ವೆಲ್‌ (0), ಗ್ರೀನ್‌ (9) ಬಳಿ ಉತ್ತರವಿರಲಿಲ್ಲ.

11 ರನ್‌ಗೆ 21 ಎಸೆತ ವ್ಯರ್ಥ ಮಾಡಿದ ಅನುಜ್‌, 29 ರನ್‌ಗೆ 21 ಎಸೆತ ತೆಗೆದುಕೊಂಡ ರಜತ್‌, ಯಾವ ಹಂತದಲ್ಲೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಭರವಸೆ ಮೂಡಿಸಲಿಲ್ಲ. 13 ಎಸೆತದಲ್ಲಿ 33 ರನ್‌ ಸಿಡಿಸಿದ ಮಹಿಪಾಲ್‌, ಸಿಕ್ಸರ್‌ ಸಿಡಿಸಿದ ಸಿರಾಜ್‌ ಸೋಲಿನ ಅಂತರವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿದರು. ಮಯಾಂಕ್‌ ಯಾದವ್‌ 4 ಓವರಲ್ಲಿ ಕೇವಲ 14 ರನ್‌ಗೆ 3 ವಿಕೆಟ್‌ ಉರುಳಿಸಿದರು.

ಸ್ಕೋರ್‌: 
ಲಖನೌ 20 ಓವರಲ್ಲಿ 181/5 (ಡಿ ಕಾಕ್‌ 81, ಪೂರನ್‌ 40*, ಮ್ಯಾಕ್ಸ್‌ವೆಲ್‌ 2-23)
ಆರ್‌ಸಿಬಿ 19.4 ಓವರಲ್ಲಿ 153/10 (ಮಹಿಪಾಲ್‌ 33, ರಜತ್‌ 29, ಮಯಾಂಕ್‌ 3-14) 

ಪಂದ್ಯಶ್ರೇಷ್ಠ: ಮಯಾಂಕ್‌ ಯಾದವ್
 

click me!