ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶ ನೀಡಿದ್ದಾರೆ. ಈ ಮೂಲಕ ಲಖನೌ ಸೂಪರ್ ಜೈಂಟ್ಸ್ 181 ರನ್ ಸಿಡಿಸಿದೆ.
ಬೆಂಗಳೂರು(ಏ.02) ಲಖನೌ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರನ್ ಟಾರ್ಗೆಟ್ ಸಿಕ್ಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವಜ ಲಖನೌ ತಂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರೂ 181 ರನ್‌ಗೆ ಕಟ್ಟಿಹಾಕುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಬೆಂಗಳೂರಿನ ಚೇಸಿಂಗ್ ಫ್ರೆಂಡ್ಲಿ ಮೈದಾನದಲ್ಲಿ ಆರ್‌ಸಿಬಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸವಿದೆ.
ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಇಳಿದ ಲಖನೌ ಆರಂಭ ಸ್ಫೋಟಕವಾಗಿತ್ತು. ನಾಯಕ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಹೋರಾಟ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಆದರೆ ರಾಹುಲ್ 20 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಈ ಜೋಡಿ 53 ರನ್ ಜೊತೆಯಾಟ ನೀಡಿತು. ಕ್ವಿಂಟನ್ ಡಿಕಾಕ್ ಅಬ್ಬರಕ್ಕೆ ಬೆಂಗಳೂರು ಅಭಿಮಾನಿಗಳ ಆತಂಕ ಹೆಚ್ಚಾಯಿತು.
ರಿಷಬ್ ಪಂತ್ ಟಾರ್ಗೆಟ್ ಮಾಡಿದ್ರಾ ಊರ್ವಶಿ ರೌಟೇಲಾ? ವಿವಾದಕ್ಕೆ ಸ್ಪಷ್ಟನೆ ನೀಡಿದ ನಟಿ!
ರಾಹುಲ್ ಬೆನ್ನಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಪತನಗೊಂಡಿತು. ಪಡಿಕ್ಕಲ್ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ಕಸ್ ಸ್ಟೊಯ್ನಿಸ್ ಹಾಗೂ ಡಿಕಾಕ್ ಜೊತೆಯಾಟ ಲಖನೌ ತಂಡದಲ್ಲಿ ಹೊಸ ಹುರುಪು ತಂದಿತು. ಡಿಕಾಕ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಸ್ಟೊಯ್ನಿಸ್ 24 ರನ್ ಸಿಡಿಸಿ ಔಟಾದರು. ಸ್ಫೋಟಕ ಆರಂಭ ಕಂಡಿದ್ದ ಲಖನೌ ತಂಡವನ್ನು ಆರ್‌ಸಿಬಿ ಬೌಲರ್‌ಗಳು ಕಟ್ಟಿಹಾಕಿದರು.
ಅಬ್ಬರಿಸಿದ ಡಿಕಾಕ್ 56 ಎಸೆತದಲ್ಲಿ 81 ರನ್ ಸಿಡಿಸಿದರು. ಡಿಕಾಕ್ ಹೋರಾಟದಿಂದ ಲಖನೌ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಇತ್ತ ಆಯುಷ್ ಬದೋನಿ ಅಬ್ಬರಿಸಲಿಲ್ಲ. ಆದರೆ ಅಂತಿಮ 3 ಓವರ್‌ಗಳಲ್ಲಿ ನಿಕೋಲಸ್ ಪೂರನ್ ಅಬ್ಬರ ಆರಂಭಗೊಂಡಿತು. ಸಿಕ್ಸರ್ ಮೂಲಕ ಪೂರನ್ ಅಬ್ಬರಿಸಿದರು. ಇದು ಲಖನೌ ಸ್ಕೋರ್ ಹೆಚ್ಚಿಸಿತು. ಪೂರನ್ ಅಜೇಯ 40 ರನ್ ಸಿಡಿಸಿದರು. ಈ ಮೂಲಕ ಲಖನೌ 5 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿತು.
ಈ ಮೊತ್ತ ಚೇಸ್ ಮಾಡಬಲ್ಲ ಸಾಮರ್ಥ್ಯ ಆರ್‌ಸಿಬಿಗಿದೆ. ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಜೊತೆಗೆ ಉತ್ತಮ ಬ್ಯಾಟಿಂಗ್ ಲೈನ್ ಅಪ್ ಅಭಿಮಾನಿಗಳ ವಿಶ್ವಾಸ ಹೆಚ್ಚಿಸಿದೆ.
ಮತ್ತೆ ಬರಲಿದೆ ಚಾಂಪಿಯನ್ಸ್ ಲೀಗ್ ಟಿ20? ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತದ ಕ್ರಿಕೆಟ್ ಮಂಡಳಿ ಮಾತುಕತೆ!
ಆರ್‌ಸಿಬ್ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಾಫ್ ಡುಪ್ಲಸಿಸ್(ನಾಯಕ), ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಮಯಾಂಕ ದಗಾರ್, ರೀಸ್ ಟೊಪ್ಲೆ, ಮೊಹಮ್ಮದ್ ಸಿರಾಜ್, ಯಶ್ ದಯಾಳ್