ಮತ್ತೆ ಬರಲಿದೆ ಚಾಂಪಿಯನ್ಸ್‌ ಲೀಗ್‌ ಟಿ20? ಇಂಗ್ಲೆಂಡ್‌, ಆಸ್ಟ್ರೇಲಿಯಾ, ಭಾರತದ ಕ್ರಿಕೆಟ್‌ ಮಂಡಳಿ ಮಾತುಕತೆ!

By Santosh Naik  |  First Published Apr 2, 2024, 7:46 PM IST


ಕೊನೆಯ ಆವೃತ್ತಿ ನಡೆದ 10 ವರ್ಷಗಳಾದ ಬಳಿಕ, ಬಿಸಿಸಿಐ, ಕ್ರಿಕೆಟ್‌ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಇಸಿಬಿ, ಕ್ಲಬ್‌ ಮಾದರಿಯ ಅಂತಾರಾಷ್ಟ್ರೀಯ ಟಿ20 ಟೂರ್ನಿ, ಚಾಂಪಿಯನ್ಸ್‌ ಲೀಗ್‌ ಟಿ20 ಮರಳಿ ಆರಂಭಿಸುವ ಉತ್ಸಾಹ ತೋರಿದೆ.
 


ಮುಂಬೈ (ಏ.2): ಕೊನೆಯ ಆವೃತ್ತಿಯ ಟೂರ್ನಿ ನಡೆದು 10 ವರ್ಷಗಳಾದ ಬಳಿಕ ಭಾರತ, ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾದ ಕ್ರಿಕೆಟ್‌ ಮಂಡಳಿಗಳಾದ ಬಿಸಿಸಿಐ, ಇಸಿಬಿ ಹಾಗೂ ಕ್ರಿಕೆಟ್‌ ಆಸ್ಟ್ರೇಲಿಯಾ, ಚಾಂಪಿಯನ್ಸ್‌ ಲೀಗ್‌ ಟಿ20 ಟೂರ್ನಿಯನ್ನು ಮರಳಿ ಆರಂಭಿಸುವ ಬಗ್ಗೆ ಉತ್ಸಾಹ ತೋರಿದೆ. ಕ್ಲಬ್‌ ಮಾದರಿಯ ಅಂತಾರಾಷ್ಟ್ರೀಯ ಟಿ20 ಚಾಂಪಿಯನ್‌ ಇದಾಗಿದೆ. ಚಾಂಪಿಯನ್ಸ್ ಲೀಗ್‌ ಟಿ20ಯ ಕೊನೆಯ ಆವೃತ್ತಿ 2014ರಲ್ಲಿ ಭಾರತದಲ್ಲಿ ನಡೆಸಿತ್ತು. ಬೆಂಗಳೂರಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು ಸೋಲಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ಚಾಂಪಿಯನ್‌ ಆಗಿತ್ತು. ಸಿಎಲ್‌ಟಿ20 ಟೂರ್ನಿಯಲ್ಲಿ ಭಾರತದ ಮೂರು, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ತಲಾ 2, ಪಾಕಿಸ್ತಾನ, ವೆಸ್ಟ್‌ ಇಂಡೀಸ್‌ ಹಾಗೂ ನ್ಯೂಜಿಲೆಂಡ್‌ನ ತಲಾ 1 ತಂಡಗಳನ್ನು ಒಳಗೊಂಡಿತ್ತು.

2009-10 ರಿಂದ 2014-15ರವರೆಗೆ ಆರು ಆವೃತ್ತಿಯ ಚಾಂಪಿಯನ್ಸ್‌ ಲೀಗ್‌ ಟಿ20 ಟೂರ್ನಿಗಳನ್ನು ನಡೆದಿದ್ದವು. ಇದರಲ್ಲಿ ನಾಲ್ಕು ಆವೃತ್ತಿಗಳನ್ನು ಭಾರತದಲ್ಲಿಯೇ ಆಯೋಜನೆ ಮಾಡಲಾಗಿದ್ದರೆ, ಎರಡು ಆವೃತ್ತಿಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ತಲಾ 2 ಬಾರಿ ಗೆಲುವು ಸಾಧಿಸಿದ್ದರೆ, ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ ಹಾಗೂ ಸಿಡ್ನಿ ಸಿಕ್ಸರ್‌ ತಂಡಗಳು ತಲಾ ಒಮ್ಮೊಮ್ಮೆ ಗೆಲುವು ಕಂಡಿದ್ದವು.

ಪ್ರಸ್ತುತ ಕ್ರಿಕೆಟ್‌ ಕ್ಯಾಲೆಂಡರ್‌ಗಳ ಜಾಮ್‌ ಪ್ಯಾಕ್‌ ಆಗಿದ್ದು, ಚಾಂಪಿಯನ್ಸ್‌ ಲೀಗ್‌ ಟಿ20ಗೆ ಎಲ್ಲಿ ಸ್ಥಾನ ಕಲ್ಪಿಸಲಾಗುತ್ತದೆ ಎನ್ನುವ ಕುತೂಹಲ ಇದೆ ಎಂದು ಕ್ರಿಕೆಟ್‌ ವಿಕ್ಟೋರಿಯಾದ ಸಿಇಒ ನಿಕ್‌ ಕಮ್ಮಿನ್ಸ್‌ ಹೇಳಿದ್ದಾರೆ. ವಿಶ್ವ ಕ್ರಿಕೆಟ್‌ನ ಮೂರು ಪ್ರಮುಖ ಕ್ರಿಕೆಟ್‌ ಮಂಡಳಿಗಳ ನಡುವೆ ಈ ಕುರಿತಾದ ಮಾತುಕತೆ ನಡೆಯುತ್ತಿದೆ ಎಂದೂ ಇವರು ಬಹಿರಂಗಪಡಿಸಿದ್ದಾರೆ. ಹಿಂದಿನ ಚಾಂಪಿಯನ್ಸ್‌ ಲೀಗ್‌ ಟಿ20 ಟೂರ್ನಿ, ಆಗಿನ ಕಾಲಕ್ಕೆ ಬಹಳ ಮುಂದುವರಿದ ಟೂರ್ನಿ ಆಗಿತ್ತು. ಟಿ20ಯ ಲ್ಯಾಂಡ್‌ಸ್ಕೇಪ್‌ ಅಷ್ಟಾಗಿ ಅಭಿವೃದ್ಧಿ ಆಗಿರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ ಎಂದು ಹೇಳಿದ್ದಾರೆ.

Tap to resize

Latest Videos

"ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ), ಇಸಿಬಿ (ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಮತ್ತು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಡುವೆ ಚಾಂಪಿಯನ್ಸ್ ಲೀಗ್ (ಪುನರುಜ್ಜೀವನ) ಕುರಿತು ಸಕ್ರಿಯ ಚರ್ಚೆ ನಡೆಯುತ್ತಿದೆ' ಎಂದು ಅವರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿಗೆ ಮನಸೋ ಇಚ್ಛೆ ಹಲ್ಲೆ, ಚಿಕಿತ್ಸೆ ಕೊಡಿಸುವಂತೆ ಮಾನವ ಹಕ್ಕು ಆಯೋಗಕ್ಕೆ ದೂರು

"ಯಾವಾಗ ಈ ಟೂರ್ನಿ ಆಡಬೇಕು ಎನ್ನುವ ವಿಂಡೋವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಐಸಿಸಿ ಟೂರ್ನಿಗಳು ಕೂಡ ಸಾಕಷ್ಟಿದೆ. ಮಹಿಳಾ ವಿಭಾಗದ ಚಾಂಪಿಯನ್ಸ್‌ ಲೀಗ್‌ ಟಿ20 ಮೊದಲು ನಡೆಯಬಹುದು. ಇದರಲ್ಲಿ ಡಬ್ಲ್ಯುಪಿಎಲ್‌, ಹಂಡ್ರೆಡ್‌ ಹಾಗೂ ಡಬ್ಲ್ಯುಬಿಬಿಎಲ್‌ನಲ್ಲಿ ಆಡುವ ಕ್ರಿಕೆಟಿಗರನ್ನು ಒಳಗೊಂಡಿರಬಹುದು ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ನೋಬಾಲ್‌ ನಿರ್ಧರಿಸಲು ಇನ್ನು ಹೊಸ ಐಡಿಯಾ..!

click me!