#blacklivesmatter : ‘ಮಂಡಿಯೂರಲು’ ನಿರಾಕರಿಸಿ ಪಂದ್ಯದಿಂದ ಹೊರಗುಳಿದ ಕ್ವಿಂಟನ್‌ ಡಿ ಕಾಕ್‌!

By Suvarna News  |  First Published Oct 27, 2021, 8:22 AM IST

*ವರ್ಣಬೇಧ ನೀತಿ ವಿರುದ್ಧದ ಆಂದೋಲನಕ್ಕೆ ವಿರೋಧ
*ವಿಂಡೀಸ್‌ ವಿರುದ್ಧದ ಪಂದ್ಯದಿಂದ ಹೊರಗುಳಿದ ಡಿ ಕಾಕ್‌
*ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕೇ ಅಂತ್ಯವಾಗುವ ಸಾಧ್ಯತೆ!


ದುಬೈ (ಅ. 27): ವರ್ಣಬೇಧ ನೀತಿ ವಿರೋಧಿಸಿ ನಡೆಯುತ್ತಿರುವ ‘ಬ್ಲಾಕ್‌ ಲೈವ್ಸ ಮ್ಯಾಟರ್‌’ (Black Lives Matter) ಆಂದೋಲನಕ್ಕೆ ಬೆಂಬಲ ನೀಡಲು ನಿರಾಕರಿಸಿದ್ದಕ್ಕೆ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಕ್ವಿಂಟನ್‌ ಡಿ ಕಾಕ್‌ (Quinton de Cock) ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದಿಂದ ಹೊರಗುಳಿಯಬೇಕಾದ ಅಚ್ಚರಿಯ ಘಟನೆ ನಡೆದಿದೆ.

ಮಂಗಳವಾರ ನಡೆದ ಟಿ20 ವಿಶ್ವಕಪ್‌ನ (T20 World Cup) ಪಂದ್ಯಕ್ಕೂ ಮುನ್ನ ವರ್ಣಭೇದ ನೀತಿ ವಿರುದ್ಧದ ಆಂದೋಲನದ ಭಾಗವಾಗಿ ಮಂಡಿಯೂರಿ ಕುಳಿತು ಬೆಂಬಲ ಸೂಚಿಸುವಂತೆ ತನ್ನ ಆಟಗಾರರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ(ಸಿಎಸ್‌ಎ) ಸೂಚಿಸಿತ್ತು. ಆದರೆ ಡಿ ಕಾಕ್‌ ಸಿಎಸ್‌ಎ ಸೂಚನೆಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಆಡುವ ಅಂತಿಮ 11ರ ಬಳಗದಿಂದ ಹಿಂದಕ್ಕೆ ಸರಿದರು. ತಂಡದ ಮೊದಲ ಕಪ್ಪು ವರ್ಣದ ನಾಯಕರಾಗಿರುವ ತೆಂಬಾ ಬವುಮಾ ಹಾಗೂ ಇತರ ಆಟಗಾರರು ಆಂದೋಲನ ಬೆಂಬಲಿಸಿ ಮಂಡಿಯೂರಿ ಕುಳಿತರು.

Tap to resize

Latest Videos

undefined

ಪಾಕ್‌ ಜಯಕ್ಕೆ ಸಂಭ್ರಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಗಂಭೀರ ಕೇಸು!

ಸದ್ಯ ಡಿ ಕಾಕ್‌ ನಡೆ ಎಲ್ಲರಿಗೂ ಅಚ್ಚರಿಕೆ ಕಾರಣವಾಗಿದ್ದು, ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕೇ ಅಂತ್ಯವಾಗುವ ಸಾಧ್ಯತೆಯೂ ಇದೆ. ತಂಡದ ಆಡಳಿತ ಮಂಡಳಿ ಈ ಬಗ್ಗೆ ವರದಿ ತರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಗೊತ್ತಾಗಿದೆ.

Spirit of Cricket| ಗೆಲುವಿನ ಬಳಿಕ ಧೋನಿ ಎದುರು ಕೈಕಟ್ಟಿ ನಿಂತ ಪಾಕ್ ಆಟಗಾರರು!

ಅಮೆರಿಕಾದಲ್ಲಿ ಕಳೆದ ವರ್ಷ ಜಾರ್ಜ್ ಫ್ಲಾಯ್ಡ್‌ (George floyd) ಎಂಬವರು ಪೊಲೀಸರಿಂದ ಹತ್ಯೆಯಾದ ಬಳಿಕ ಕ್ರಿಕೆಟಿಗರೂ ಸೇರಿದಂತೆ ಜಗತ್ತಿನಾದ್ಯಂತ ‘ಬ್ಲಾಕ್‌ ಲೈವ್ಸ್ ಮ್ಯಾಟರ್‌’ ಆಂದೋಲನ ನಡೆಯುತ್ತಿದೆ. ಟೀಮ್ ಇಂಡಿಯಾ ಆಟಗಾರರು ಕೂಡ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇದಕ್ಕೆ ಬೆಂಬಲ ಸಲ್ಲಿಸಿದ್ದರು. ಡಿ ಕಾಕ್‌ ಈ ಹಿಂದೆಯೂ ಈ ಆಂದೋಲನವನ್ನು ಬೆಂಬಲಿಸಿರಲಿಲ್ಲ. ದಕ್ಷಿಣ ಆಫ್ರಿಕಾ ತಂಡದಲ್ಲಿ ಕಪ್ಪು ವರ್ಣೀಯರಿಗೆ ಮೀಸಲು ನೀಡುವ ವಿಚಾರವಾಗಿ ಕೆಲ ಆಟಗಾರರು ಹಾಗೂ ಕ್ರಿಕೆಟ್‌ ಮಂಡಳಿ ನಡುವೆ ತಿಕ್ಕಾಟ ನಡೆದಿತ್ತು. ಮೀಸಲು ನೀಡುವ ಬಗ್ಗೆ ಡಿ ಕಾಕ್‌ ಬಹಿರಂಗವಾಗಿ ಆಕ್ಷೇಪಿಸಿದ್ದರು.‌

#blacklivesmatter ಆಂದೋಲನವನ್ನು ಬೆಂಬಲಿಸಿದ ಭಾರತ!

ಅಕ್ಟೋಬರ್‌ 24 ರಂದು ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ  ಭಾರತೀಯ ಆಟಗಾರರು ಕೂಡ ಮಂಡಿಯೂರುವ ಮೂಲಕ ವರ್ಣಭೇದ ವಿರೋಧಿಸುವ ನಿಟ್ಟಿನಲ್ಲಿ ಬೆಂಬಲ ಸೂಚಿಸಿದ್ದರು. ಈ ಬಗ್ಗೆ ಪರ ವಿರೋಧದ ಭಾರೀ ಚರ್ಚೆಯಾಗಿತ್ತು. ಪಾಕಿಸ್ತಾನ ತಂಡದ ಆಟಗಾರು ಕೂಡ ತಮ್ಮ ಹೃದಯ ಭಾಗದ ಮೇಲೆ ಕೈ ಇಟ್ಟು ಗೌರವ ಕೊಟ್ಟಿದ್ದರು. 

2020ರ ಮೇ 25ರಂದು ಮಿನೋಪೊಲೀಸ್‌ನಲ್ಲಿ 40 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯಾಗಿತ್ತು. ಈ ಪ್ರಕರಣ ವಿಶ್ವದೆಲ್ಲೆಡೆ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಪ್ರತಿಭಟನೆ ಜತೆಗೆ ಭಾರಿ ಪ್ರಮಾಣದ ಹಿಂಸಾಚಾರ, ದೊಡ್ಡ ದೊಡ್ಡ ಮಳಿಗೆಗಳ ಲೂಟಿ, ತಡೆಯಲು ಬಂದವರ ಹತ್ಯೆಯಂಥ ಘಟನೆಗಳು ನಡೆದಿದ್ದವು. ವಿಶ್ವದಾದ್ಯಂತ ಬ್ಲಾಕ್‌ ಲೈವ್ಸ್ ಮ್ಯಾಟರ್‌ ಆಂದೋಲನ ಆರಂಭವಾಗಿತ್ತು. ಪ್ರಕರಣದ ಆರೋಪಿ, ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚಾವಿನ್‌ಗೆ ಕೋರ್ಟ್‌ 22.5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

click me!