ಸೆಹ್ವಾಗ್ ಹಾದಿಯಲ್ಲಿ ಮಯಾಂಕ್; ಕನ್ನಡಿಗನನ್ನು ಕೊಂಡಾಡಿದ ಟ್ವಿಟರಿಗರು..!

By Web DeskFirst Published Oct 10, 2019, 3:40 PM IST
Highlights

ಕನ್ನಡಿಗ ಮಯಾಂಕ್ ಅಗರ್‌ವಾಲ್ ಖಾತೆಗೆ ಮತ್ತೊಂದು ಶತಕ ಸೇರ್ಪಡೆಯಾಗಿದೆ. ಪುಣೆ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಭರ್ಜರಿ ಶತಕ ಸಿಡಿಸುವ ಮೂಲಕ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಗರ್‌ವಾಲ್ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ಅ.10]: ಕನ್ನಡಿಗ ಮಯಾಂಕ್ ಅಗರ್‌ವಾಲ್ ಮತ್ತೊಂದು ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈಗಾಗಲೇ ವೈಜಾಗ್ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಮಯಾಂಕ್, ಇದೀಗ ಪುಣೆ ಟೆಸ್ಟ್ ಪಂದ್ಯದಲ್ಲೂ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್’ಮನ್ ವಿರೇಂದ್ರ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. 

That's another fine century from 🙌👌 pic.twitter.com/6jWSOKwMUg

— BCCI (@BCCI)

INDvSA:ಸತತ 2ನೇ ಶತಕ; ಸೆಹ್ವಾಗ್ ದಾಖಲೆ ಸರಿಗಟ್ಟಿದ ಮಯಾಂಕ್!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ವಿರಾಟ್ ಕೊಹ್ಲಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ಮಯಾಂಕ್ ಅಗರ್ ವಾಲ್, ಹರಿಣಗಳ ಪಡೆಯನ್ನು ದಿಟ್ಟವಾಗಿ ಎದುರಿಸಿದರು. ಆರಂಭದಲ್ಲೇ ಟೀಂ ಇಂಡಿಯಾ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಚೇತೇಶ್ವರ್ ಪೂಜಾರ ಜತೆ ಮಯಾಂಕ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 183ನೇ ಎಸೆತದಲ್ಲಿ ಮಯಾಂಕ್ ಶತಕ ಪೂರೈಸಿದರು. ಮಯಾಂಕ್ ಅವರ ಈ ಅದ್ಭುತ ಇನಿಂಗ್ಸ್’ನಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಗಳೂ ಸೇರಿದ್ದವು. ಈ ಶತಕದೊಂದಿಗೆ ಆರಂಭಿಕನಾಗಿ ದಕ್ಷಿಣ ಆಫ್ರಿಕಾ ವಿರುದ್ದ ಸತತ ಎರಡು ಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್’ಮನ್ ಎನ್ನುವ ಗೌರವಕ್ಕೆ ಮಯಾಂಕ್ ಭಾಜನರಾಗಿದ್ದಾರೆ. ಈ ಮೊದಲು 2009-10ರಲ್ಲಿ ವಿರೇಂದ್ರ ಸೆಹ್ವಾಗ್ ಸಹಾ ದಕ್ಷಿಣ ಆಫ್ರಿಕಾ ವಿರುದ್ಧ ಸತತ 2 ಶತಕ ಬಾರಿಸಿದ್ದರು. 

ಕೊಹ್ಲಿಗೆ ಪಾಕ್ ಅಭಿಮಾನಿಯ ವಿಶೇಷ ಮನವಿ; ಭಾರತೀಯರಿಂದ ಸಕಾರಾತ್ಮಕ ಸ್ಪಂದನೆ!

ಪುಣೆ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಒಟ್ಟು 195 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 108 ರನ್ ಬಾರಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.  ಮಯಾಂಕ್ ಶತಕದಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಇರ್ಫಾನ್ ಪಠಾಣ್, ಅವಕಾಶ ಸಿಕ್ಕಾಗಲೆಲ್ಲಾ ಮಿಂಚುವವನನ್ನು ಮಯಾಂಕ್ ಅಗರ್‌ವಾಲ್ ಎನ್ನಬಹುದು ಎಂದಿದ್ದರೆ, ಹಿರಿಯ ಪತ್ರಕರ್ತ ರಾಜ್’ದೀಪ್ ಸರ್ದೇಸಾಯಿ ಅವಕಾಶಕ್ಕಾಗಿ ಸಾಕಷ್ಟು ವರ್ಷ ಕಾಯ್ದು, ಸಿಕ್ಕ ಅವಕಾಶದಲ್ಲಿ ಅದ್ಭುತ ಶತಕ ಸಿಡಿಸಿದ. ಇದೊಂದು ಮಯಾಂಕ್ ಬಾರಿಸಿದ ಅದ್ಭುತ ಇನಿಂಗ್ಸ್ ಎಂದು ಕೊಂಡಾಡಿದ್ದಾರೆ. ಮತ್ತೆ ಯಾರೆಲ್ಲಾ ಮಯಾಂಕ್ ಬಗ್ಗೆ ಏನಂದ್ರು...? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್....  

Mauke pe chaukha marne wale ko kehte hay

— Irfan Pathan (@IrfanPathan)

They also serve those who stand and wait.. has had to wait his chance for a few years.. boy, has he grabbed it.. superb fluent century.. special innings.. ..

— Rajdeep Sardesai (@sardesairajdeep)

Mayank gets his second test century in style !! This is one of the top notch innings from . Kick on and get a few more, Mayank.
ನಮ್ಮ ಹುಡುಗ ಮಾಯಾಂಕ್ ಎರಡನೇ ಟೆಸ್ಟ್ ಶತಕ ಬಾರಿಸಿದ್ದಾರೆ. ಇನ್ನಷ್ಟು ರನ್ ಬರಲಿ, ಮಾಯಾಂಕ್.

— Karnataka Ranji Team/ ಕರ್ನಾಟಕ ರಣಜಿ ತಂಡ (@RanjiKarnataka)

ಹಾದಿಯಲ್ಲಿ
ದಕ್ಷಿಣ ಆಫ್ರಿಕಾ ವಿರುದ್ಧ ನಲ್ಲಿ ಕನ್ನಡಿಗನ ಶತಕ
ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡನೇ ಶತಕ ಸಿಡಿಸಿದ ಎರಡನೇ ಆರಂಭಿಕ ಅಗರ್‌ವಾಲ್

— Naveen Kodase (@naveenkodase082)

Proper test match batting from Mayank Agarwal. The transformation from white ball slasher to red ball accumulator continues.

— Harsha Bhogle (@bhogleharsha)

Back-to-back 💯s for Mayank Agarwal

Runs: 103 | Balls: 183 | Fours: 16 | Sixes: 2 pic.twitter.com/o7xEdocDEF

— Cricbuzz (@cricbuzz)

C E N T U R Y! 🙌🏻

Mayank Agarwal follows up his double ton in Vizag with a classic hundred in Pune. 👏

What a knock! 🤩

— Kings XI Punjab (@lionsdenkxip)
click me!