
ಪುಣೆ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ವಿರಾಟ್ ಪಡೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಆತಿಥೇಯ ಭಾರತ ಸರಣಿ ಗೆಲುವಿನ ತವಕದಲ್ಲಿದೆ.
ಸರಣಿ ಗೆಲುವಿನ ಕನವರಿಕೆಯಲ್ಲಿ ಟೀಂ ಇಂಡಿಯಾ
ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ, ವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್‌ವಾಲ್ ಭರ್ಜರಿ ಫಾರ್ಮ್’ನಲ್ಲಿದ್ದಾರೆ. ತಾವಾಡಿದ ಚೊಚ್ಚಲ ಟೆಸ್ಟ್‌ನಲ್ಲೇ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ, ಈ ಸಾಧನೆ ಮಾಡಿದ ವಿಶ್ವದ ಮೊದಲ ದಾಂಡಿಗ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮತ್ತೊಂದೆಡೆ ಟೆಸ್ಟ್ ಜೀವನದ ಮೊದಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಮೂಲಕ ಈಗಾಗಲೇ ಹರಿಣಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!
ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಭಾರತದ ಮಾಧ್ಯಮ ಕ್ರಮಾಂಕದ ಬಲವಾಗಿದ್ದು, ಹರಿಣ ಬೆವರಿಳಿಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ದೀರ್ಘಕಾಲದ ಬಳಿಕ ತಂಡಕ್ಕೆ ಮರಳಿದ ಅಶ್ವಿನ್ ಒಟ್ಟು 8 ವಿಕೆಟ್ ಕಬಳಿಸುವ ಮೂಲಕ, ವೇಗವಾಗಿ 350 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಇದರ ಜತೆಗೆ ಭಾರತದ ವೇಗಿಗಳು ದಕ್ಷಿಣ ಆಫ್ರಿಕಾದ ದಾಂಡಿಗರ ಕಾಡುವುದರಲ್ಲಿ 2 ಮಾತಿಲ್ಲ. ಒಟ್ಟಾರೆ ಪ್ರವಾಸಿ ಆಫ್ರಿಕನ್ನರಿಗೆ ಹೋಲಿಸಿದರೆ ಆತಿಥೇಯ ಭಾರತ ಬಲಿಷ್ಠವಾಗಿದ್ದು, ವಿರಾಟ್ ಪಡೆ ಗೆಲುವಿನ ವಿಶ್ವಾಸದಲ್ಲಿದೆ.
ಆಫ್ರಿಕಾ ಮುಂದೆ ಕಠಿಣ ಸವಾಲು: 2014ರಿಂದ ಈಚೆಗೆ ಏಷ್ಯಾ ನೆಲದಲ್ಲಿ ಆಫ್ರಿಕಾ ತಂಡ ಇದುವರೆಗೂ ಒಂದು ಟೆಸ್ಟ್ ಪಂದ್ಯವನ್ನು ಜಯಿಸಿಲ್ಲ. ಆಡಿದ 9 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಸೋತಿದ್ದರೆ, ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಅದರಲ್ಲೂ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್’ಗಳನ್ನು ಎದುರಿಸಲು ತಡಕಾಡಿದ್ದ ಹರಿಣಗಳ ಬ್ಯಾಟ್ಸ್’ಮನ್’ಗಳು ಇದೀಗ ಮತ್ತೊಂದು ಕಠಿಣ ಸವಾಲು ಎದುರಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.