ಲಾಕ್‌ಡೌನ್‌ನಿಂದ ಆರ್ಥಿಕ ನಷ್ಟ; ಟೀಂ ಇಂಡಿಯಾ ಕ್ರಿಕೆಟಿಗರ ವೇತನ ಕುರಿತು BCCI ಮಹತ್ವದ ನಿರ್ಧಾರ!

By Suvarna NewsFirst Published May 15, 2020, 8:47 PM IST
Highlights

ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಹಲವು ಕ್ರಿಕೆಟ್ ಮಂಡಳಿಗಳು ಈಗಾಗಲೇ ಕ್ರಿಕೆಟಿಗರ ವೇತನ ಕಡಿತ ಮಾಡಿದೆ. ಇಷ್ಟಾದರೂ ಆರ್ಥಿಕ ನಷ್ಟದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇತ್ತ ಐಪಿಎಲ್ ಟೂರ್ನಿ ಸೇರಿದಂತೆ ಪ್ರಮುಖ ಟೂರ್ನಿ ರದ್ದಾಗಿರುವ ಕಾರಣ ಬಿಸಿಸಿಐಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಇದರ ನಡುವೆ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರ ವೇತನ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದೆ.

ಮುಂಬೈ(ಮೇ.15): ಕೊರೋನಾ ವೈರಸ್ ಕಾರಣ ಇಡೀ ವಿಶ್ವವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲಾ ಕ್ರೀಡಾಕಟೂಗಳು, ಕ್ರಿಕೆಟ್ ಟೂರ್ನಿ ರದ್ದಾಗಿದೆ. ಅದರಲ್ಲೂ ಚಿನ್ನದ ಮೊಟ್ಟೆ ಇಡುವ ಐಪಿಎಲ್ ಟೂರ್ನಿ ತಾತ್ಕಾಲಿಕ ರದ್ದುಗೊಂಡಿರುವ ಕಾರಣ ಬಿಸಿಸಿಐಗೆ ಆರ್ಥಿಕ ಹೊಡೆತ ಬಿದ್ದಿದೆ. ಐಪಿಎಲ್ ರದ್ದಾದರೆ ಸರಿಸುಮಾರು 4,000 ಕೋಟಿ ರೂಪಾಯಿ ನಷ್ಟವಾಗಲಿದೆ. ಇದರ ನಡುವೆ ಬಿಸಿಸಿಐ, ಟೀಂ ಇಂಡಿಯಾ ಕ್ರಿಕೆಟಿಗರ ವೇತನ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿದೇಶಿ ಆಟಗಾರರಿಲ್ಲದೆ IPL ಆಯೋಜನೆಗೆ CSK ವಿರೋಧ

ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟಿಗರ ವೇತನ ಕಡಿತ ನಿರ್ಧಾರ ಬಿಸಿಸಿಐ ಮುಂದಿಲ್ಲ. ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದೆ ಐಪಿಎಲ್ ಸೇರಿದಂತೆ ಬಿಸಿಸಿಐ ಟೂರ್ನಿಗಳು ರದ್ದಾದರೆ ವೇತನ ಕಡಿತದ ನಿರ್ಧಾರದ ಕುರಿತು ಚಿಂತನೆ ನಡೆಸಲಾಗುವುದು. ಆದರೆ ಸದ್ಯ ಬಿಸಿಸಿಐ ಮುಂದೆ ರೀತಿಯ ಪ್ರಸ್ತಾವನೆ ಮುಂದಿಲ್ಲ ಎಂದು ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.

IPL 2020 ಟೂರ್ನಿ ಆಯೋಜಿಸಲು ಬಿಸಿಸಿಐಗೆ ಆಹ್ವಾನ ನೀಡಿದ ದುಬೈ!

ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಈಗಾಗಲೇ ಕ್ರಿಕೆಟಿಗರ ವೇತನ ಕಡಿತ ಮಾಡಿದೆ. ಆಫ್ಘಾನಿಸ್ತಾನ ಕ್ರಿಕೆಟ್ ಮಂಡಲಿ ಕೋಚ್, ಸಿಬ್ಬಂಧಿಗಳ ವೇತನ ಕಡಿತ ಮಾಡಿದೆ. ಕ್ರಿಕೆಟ್ ಟೂರ್ನಿ ನಿಂತು ಹೋಗಿರುವ ಕ್ರಿಕೆಟ್ ಮಂಡಳಿಗಳು ಅನಿವಾರ್ಯವಾಗಿ ವೇತನ ಕಡಿತಕ್ಕೆ ಮುಂದಾಗಿದೆ.

click me!