ಪಿಂಕ್ ಬಾಲ್ ಟೆಸ್ಟ್‌: 36 ರನ್‌ಗಳಿಗೆ ಆಲೌಟ್, ಟ್ರೋಲ್ ಆದ ಟೀಂ ಇಂಡಿಯಾ

By Suvarna NewsFirst Published Dec 19, 2020, 12:53 PM IST
Highlights

ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಾಟಕೀಯ ಕುಸಿತ ಕಂಡಿದೆ. ನೆಟ್ಟಿಗರು ಟೀಂ ಇಂಡಿಯಾ ಬ್ಯಾಟಿಂಗ್‌ ಪ್ರದರ್ಶನವನ್ನು ಟ್ರೋಲ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಡಿ.19): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಸರ್ವಪತನ ಕಂಡಿದೆ. ಟೀಂ ಇಂಡಿಯಾ ಕೇವಲ 15 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು.

ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಜೋಸ್‌ ಹೇಜಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ಮಾರಕ ದಾಳಿಗೆ ತತ್ತರಿಸಿ ಹೋದ ಭಾರತ ದಾಖಲೆಯ ಅಲ್ಪ ಮೊತ್ತಕ್ಕೆ ಕುಸಿತ ಕಂಡು ಮುಖಭಂಗ ಅನುಭವಿಸಿತು. ಮೊದಲು ಟೀಂ ಇಂಡಿಯಾ  1974ರಲ್ಲಿ ಇಂಗ್ಲೆಂಡ್‌ ಎದುರು ಲಾರ್ಡ್ಸ್‌ ಮೈದಾನದಲ್ಲಿ ಕೇವಲ 42 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದೀಗ ವಿರಾಟ್ ಪಡೆ ಆ ದಾಖಲೆಯನ್ನು ಅಳಿಸಿ ಹಾಕಿದೆ. 

ಟೀಂ ಇಂಡಿಯಾ ದಯಾನೀಯ ಬ್ಯಾಟಿಂಗ್ ವೈಫಲ್ಯ ಹೇಗಿತ್ತು ಎಂದರೆ ವಿರಾಟ್ ಕೊಹ್ಲಿ ಪಡೆಯ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡಾ ಎರಡಂಕಿ ಮೊತ್ತ ದಾಖಲಿಸಲು  ಸಾಧ್ಯವಾಗಲಿಲ್ಲ. ಜೋಸ್‌ ಹೇಜಲ್‌ವುಡ್ ಕೇವಲ 8 ರನ್ ನೀಡಿ 5 ವಿಕೆಟ್ ಪಡೆದರೆ, ಪ್ಯಾಟ್ ಕಮಿನ್ಸ್‌ 21 ರನ್ ನೀಡಿ 4 ವಿಕೆಟ್‌ ಕಬಳಿಸುವ ಮೂಲಕ ಟೀಂ ಇಂಡಿಯಾ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟೀಂ ಇಂಡಿಯಾ ನಾಟಕೀಯ ಕುಸಿತ; ಆಸ್ಟ್ರೇಲಿಯಾಗೆ 90 ಟಾರ್ಗೆಟ್
 
ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ವೈಫಲ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

36😳🤐..... but that’s my Jersey number 🤭🤯

— Tino95 (@tinobest)

What a phenomenal bowling performance on Day 3 of a Test match by the Hazlewood-Cummins duo
Our batsmen looked clueless...and those outside edges 🤦🏻‍♂️

Till yesterday, who would have thought this match might end in 2 and a half days

— Vinod Kambli (@vinodkambli349)

Can never get ahead of yourself in this game. Especially when the ball is pink!

— Usman Khawaja (@Uz_Khawaja)

19/6 , the earliest 6 wickets India have lost in their test history.
Surrender kar diye bilkul yaar.
Par thodi umeed abhi bhi karni chahiye, kya pata, kuch jaadoo ho jaaye. pic.twitter.com/89r8z20ef8

— Virender Sehwag (@virendersehwag)

Call me on this number baby 49204 08404 pic.twitter.com/PDkp1LzEti

— Ravi Kalle (@rt_Kalle)
click me!